ಮದುವೆಗೆ ಕನ್ಯೆ ಸಿಗಲಿ ಎಂದು ವಿಶಿಷ್ಟ ರೀತಿಯಲ್ಲಿ ಹರಕೆ ಮಾಡಿಕೊಂಡ ಯುವಕ….!

ಇಂದಿನ ದಿನಗಳಲ್ಲಿ ಮದುವೆಗೆ ಕನ್ಯೆ ಸಿಗುವುದು ಅಷ್ಟು ಸುಲಭವಲ್ಲ. ಅದರಲ್ಲೂ ಗ್ರಾಮೀಣ ಪ್ರದೇಶಗಳಿಗೆ ಮದುವೆ ಮಾಡಿಕೊಡಲು ಹೆತ್ತವರು ಹಿಂದೇಟು ಹಾಕುವ ಕಾರಣ ರೈತಾಪಿ ಯುವಕರು ಮದುವೆಯಾಗುವುದು ತಡವಾಗುತ್ತಿದೆ.

ಇದರ ಮಧ್ಯೆ ವಿಜಯನಗರ ಜಿಲ್ಲೆಯ ಯುವಕನೊಬ್ಬ ಮದುವೆಗೆ ಕನ್ಯೆ ಸಿಗಲಿ ಎಂದು ವಿಶಿಷ್ಟ ರೀತಿಯಲ್ಲಿ ಹರಕೆ ಮಾಡಿಕೊಂಡಿದ್ದಾನೆ.

ಹೌದು, ಚಿಮ್ಮನಹಳ್ಳಿಯ ಯುವಕ ದುರ್ಗಾಂಬಿಕೆಗೆ ಹರಕೆ ತೀರಿಸಿದ್ದು ಬಾಳೆಹಣ್ಣಿನ ಮೇಲೆ ‘ಜನರ ಮನಸ್ಸು ಬದಲಾಗಲಿ’, ‘ರೈತರಿಗೆ ಕನ್ಯ ಕೊಡಲಿ’ ಎಂದು ಬರೆದಿದ್ದಾನೆ. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಗರಿಬೊಮ್ಮನಹಳ್ಳಿ ತಾಲೂಕಿನ ಚಿಮ್ಮನಹಳ್ಳಿಯ ದುರ್ಗಾಂಬಿಕೆ ರಥೋತ್ಸವದಲ್ಲಿ ಈ ಯುವಕ ಹರಕೆಯ ಬರಹವಿದ್ದ ಬಾಳೆಹಣ್ಣನ್ನು ಸಮರ್ಪಿಸಿದ್ದಾನೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read