HomeKarnatakaನರಭಕ್ಷಕ ಚಿರತೆ ದಾಳಿಗೆ ಮೂರನೇ ಬಲಿ: ಮನೆಯಿಂದ ಹೊರಬಂದ ವೃದ್ಧೆಯ ಎಳೆದೊಯ್ದ ಚಿರತೆ

ನರಭಕ್ಷಕ ಚಿರತೆ ದಾಳಿಗೆ ಮೂರನೇ ಬಲಿ: ಮನೆಯಿಂದ ಹೊರಬಂದ ವೃದ್ಧೆಯ ಎಳೆದೊಯ್ದ ಚಿರತೆ

ಮೈಸೂರು: ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನಲ್ಲಿ ನರಭಕ್ಷಕ ಚಿರತೆ ದಾಳಿಗೆ ಮೂರನೇ ಬಲಿಯಾಗಿದೆ. ಇದುವರೆಗೆ ಮೂವರನ್ನು ಚಿರತೆ ಬಲಿ ಪಡೆದಿದೆ. ವಿದ್ಯಾರ್ಥಿ, ಯುವತಿ ನಂತರ ವೃದ್ಧೆಯೂ ಚಿರತೆ ದಾಳಿಯಿಂದ ಮೃತಪಟ್ಟಿದ್ದಾರೆ.

ಕಂದನಾಯಕನಹಳ್ಳಿಯಲ್ಲಿ 60 ವರ್ಷದ ಸಿದ್ದಮ್ಮ ಚಿರತೆ ದಾಳಿಯಿಂದ ಸಾವು ಕಂಡಿದ್ದಾರೆ. ಮನೆಯ ಹೊರಗಡೆ ಇದ್ದ ಸೌದೆಯನ್ನು ಎತ್ತಿಕೊಳ್ಳಲು ಬಂದಿದ್ದಾಗ ಏಕಾಏಕಿ ಚಿರತೆ ದಾಳಿ ಮಾಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿದ್ದಮ್ಮ ಅವರ ಮೇಲೆ ದಾಳಿ ಮಾಡಿದ ಚಿರತೆ ಅವರನ್ನು ದೂರದವರೆಗೆ ಎಳೆದುಕೊಂಡು ಹೊರಟಿದೆ. ಸಿದ್ಧಮ್ಮ ಕೂಗಾಟ ಕೇಳಿದ ಗ್ರಾಮಸ್ಥರು ರಕ್ಷಣೆಗೆ ಮುಂದಾಗಿ ಕಿರುಚಾಡಿದ್ದಾರೆ. ಆಗ ಚಿರತೆ ಸಿದ್ಧಮ್ಮ ಅವರನ್ನು ಬಿಟ್ಟು ಹೋಗಿದೆ. ಅಷ್ಟರಲ್ಲಾಗಲೇ ಚಿರತೆ ದಾಳಿಯಿಂದಾಗಿ ಸಿದ್ದಮ್ಮ ಸಾವು ಕಂಡಿದ್ದಾರೆ. ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದ್ದು, ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular