HomeKarnatakaLeopard attack : ಚಾಮರಾಜನಗರದಲ್ಲಿ ಚಿರತೆ ದಾಳಿಗೆ 6 ವರ್ಷದ ಬಾಲಕಿ ಬಲಿ

Leopard attack : ಚಾಮರಾಜನಗರದಲ್ಲಿ ಚಿರತೆ ದಾಳಿಗೆ 6 ವರ್ಷದ ಬಾಲಕಿ ಬಲಿ

ಚಾಮರಾಜನಗರ: ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿ ಮೇಲೆ ಚಿರತೆಯೊಂದು ದಾಳಿ ನಡೆಸಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ನಡೆದಿದೆ.

20 ದಿನಗಳ ಹಿಂದೆ ಚಿರತೆ ದಾಳಿಗೆ ಒಳಗಾದ ಬಾಲಕಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಮೃತ ಬಾಲಕಿಯನ್ನು ಶಾಲಿನಿ (6) ಎಂದು ಗುರುತಿಸಲಾಗಿದೆ.

ಮನೆ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿ ಮೇಲೆ ಹೊಂಚು ಹಾಕಿ ಚಿರತೆ ದಾಳಿ ನಡೆಸಿದೆ. ನಂತರ ಯಾವುದೋ ಶಬ್ದಕ್ಕೆ ಚಿರತೆ ಬಾಲಕಿಯನ್ನು ಬಿಟ್ಟು ಓಡಿ ಹೋಗಿದೆ. ಪರಿಣಾಮ ಬಾಲಕಿಗೆ ಗಂಭೀರವಾಗಿ ಗಾಯಗಳಾಗಿತ್ತು, ಅಲ್ಲದೇ ಚಿರತೆ ಭಯದಿಂದ ಬಾಲಕಿ ನಡುಗುತ್ತಿದ್ದಳು. ನಂತರ ಪೋಷಕರು ಬಾಲಕಿಯನ್ನು ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಿದ್ದರು , ಅಲ್ಲದೇ ಬಾಲಕಿಗೆ ಮೂರ್ಚೆ ರೋಗ ಇತ್ತು ಎನ್ನಲಾಗಿದೆ. ಆದರೆ 20 ದಿನ ಆಸ್ಪತ್ರೆಯಲ್ಲಿದ್ದ ಬಾಲಕಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular