HomeLive Newsಲೆಜೆಂಡ್ಸ್ ಲೀಗ್ ಕ್ರಿಕೆಟ್; ಇಂದು ಸೌತರ್ನ್ ಸೂಪರ್ ಸ್ಟಾರ್ಸ್ ಹಾಗೂ ಗುಜರಾತ್ ಗ್ರೇಟ್ಸ್ ಮುಖಾಮುಖಿ

ಲೆಜೆಂಡ್ಸ್ ಲೀಗ್ ಕ್ರಿಕೆಟ್; ಇಂದು ಸೌತರ್ನ್ ಸೂಪರ್ ಸ್ಟಾರ್ಸ್ ಹಾಗೂ ಗುಜರಾತ್ ಗ್ರೇಟ್ಸ್ ಮುಖಾಮುಖಿ

ಲೆಜೆಂಡ್ಸ್ ಲೀಗ್ ಕ್ರಿಕೆಟ್ನ ಎಲ್ಲಾ ಪಂದ್ಯಗಳು ರೋಚಕತೆಯಿಂದ ಸಾಗುತ್ತಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ನೀಡುತ್ತಿದೆ. ಲೆಜೆಂಡ್ಸ್ ಲೀಗ್ ಕ್ರಿಕೆಟ್ ನಲ್ಲಿ ಈಗಾಗಲೇ ಮೂರು ಪಂದ್ಯಗಳು ನಡೆದಿದ್ದು, ಮೊದಲೆರಡು ಪಂಧ್ಯಗಳಲ್ಲಿ ಎರಡು ಹಾಗೂ ಒಂದು ರನ್ಗಳ ಅಂತರದಿಂದ ತಂಡಗಳು ಜಯಭೇರಿ ಸಾಧಿಸಿದ್ದು, ಬಂದ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿವೆ.

ಇಂದು ದಿನೇಶ್ ಕಾರ್ತಿಕ್ ನಾಯಕತ್ವದ ಸೌತರ್ನ್ ಸೂಪರ್ ಸ್ಟಾರ್ಸ್ ಹಾಗೂ ಶಿಖರ್ ಧವನ್ ನೇತೃತ್ವದ ಗುಜರಾತ್ ಗ್ರೇಟ್ಸ್ ಮುಖಾಮುಖಿಯಾಗುತ್ತಿದ್ದು, ಈ ಪಂದ್ಯಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ದಿನೇಶ್ ಕಾರ್ತಿಕ್ ವಿದಾಯ ಘೋಷಿಸಿದ್ದು, ಇದೀಗ ಲೆಜೆಂಡ್ಸ್ ಲೀಗ್ ಕ್ರಿಕೆಟ್ನ ಸೌತರ್ನ್ ಸೂಪರ್ ಸ್ಟಾರ್ಸ್ ತಂಡದ ನಾಯಕನಾಗಿ ಪ್ರತಿನಿಧಿಸುತ್ತಿದ್ದಾರೆ. d.k ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದ್ದು, ಇಂದು ಯಾವ ತಂಡ  ಜಯಭೇರಿ ಸಾಧಿಸಲಿದೆ ಕಾದುನೋಡಬೇಕಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular