HomeKarnatakaBIG NEWS: ಬುದ್ಧಿವಾದ ಹೇಳಿದ್ದಕ್ಕೆ ವಕೀಲನಿಗೆ ಚಾಕು ಇರಿತ

BIG NEWS: ಬುದ್ಧಿವಾದ ಹೇಳಿದ್ದಕ್ಕೆ ವಕೀಲನಿಗೆ ಚಾಕು ಇರಿತ

ರಾಮನಗರ: ಬುದ್ಧಿವಾದ ಹೇಳಿದ್ದಕ್ಕೆ ದುಷ್ಕರ್ಮಿಗಳ ಗ್ಯಾಂಗ್ ಒಂದು ವಕೀಲರೊಬ್ಬರಿಗೆ ಚಾಕುವಿನಿಂದ ಇರಿದ ಘಟನೆ ರಾಮನಗರ ಜಿಲ್ಲೆಯ ಬಿಡದಿ ಬಳಿಯ ನೆಲ್ಲಿಗುಡ್ಡ ಬಳಿ ನಡೆದಿದೆ.

ನಡುರಸ್ತೆಯಲ್ಲಿ ಸೈಟ್ ವಿಚಾರವಾಗಿ ಗುಂಪೊಂದು ಗಲಾಟೆ ಮಾಡುತ್ತಿತ್ತು. ಈ ವೇಳೆ ಜಗಳ ಮಾಡಬೇದಿ ಎಂದು ವಕೀಲ ವಿಜಯ್ ಕುಮಾರ್ ಬುದ್ಧಿವಾದ ಹೇಳಿದ್ದಾರೆ. ಇಷ್ಟಕ್ಕೆ ದುಷ್ಕರ್ಮಿಗಳು ವಿಜಯ್ ಕುಮಾರ್ ಭುಜಕ್ಕೆ ಚಾಕುವಿನಿಂದ ಚುಚ್ಚಿ ಸೌಂಡ್ ಮಾಡಬೇಡ ಎಂದು ಆವಾಜ್ ಹಾಕಿದ್ದಾರೆ. ವಿಜಯ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದು, ರಾಮನಗರ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಕೀಲನ ಮೇಲೆ ಹಲ್ಲೆ ನಡೆಸಿದ ದುಷ್ಕರ್ಮಿಗಳ ಗುಂಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular