HomeIndiaBIG NEWS : ಭಾರೀ ಮಳೆಗೆ ಭೂಕುಸಿತ : ಬದರಿನಾಥಕ್ಕೆ ತೆರಳುವ ಹೆದ್ದಾರಿ ಬಂದ್

BIG NEWS : ಭಾರೀ ಮಳೆಗೆ ಭೂಕುಸಿತ : ಬದರಿನಾಥಕ್ಕೆ ತೆರಳುವ ಹೆದ್ದಾರಿ ಬಂದ್

ಉತ್ತರಾಖಂಡ :  ಚಮೋಲಿ ಜಿಲ್ಲೆಯಲ್ಲಿ ಇಂದು ಧಾರಾಕಾರ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದು, ಚಿಂಕಾ ಬಳಿಯ ರಾಷ್ಟ್ರೀಯ ಹೆದ್ದಾರಿ 7 ಸಂಪೂರ್ಣ ಬಂದ್ ಆಗಿದೆ .

ಬದರಿನಾಥಕ್ಕೆ ತೆರಳುವ ಭಕ್ತರು ಪರದಾಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಮತ್ತೊಂದು ಘಟನೆಯಲ್ಲಿ ಪ್ರವಾಹ ಮತ್ತು ಭೂಕುಸಿತದಿಂದಾಗಿ 15 ಕಿಲೋಮೀಟರ್ ಉದ್ದದ ಟ್ರಾಫಿಕ್ ಜಾಮ್ ಉಂಟಾಗಿದ್ದು, 200 ಕ್ಕೂ ಹೆಚ್ಚು ಜನರು, ಪ್ರವಾಸಿಗರು ತೊಂದರೆಗೀಡಾಗಿದ್ದಾರೆ.

ವರದಿಯ ಪ್ರಕಾರ, ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಮತ್ತು ಭಾರಿ ಮಳೆಯಿಂದಾಗಿ 19 ಜನರು ಸಾವನ್ನಪ್ಪಿದ್ದಾರೆ ಮತ್ತು 34 ಜನರು ಗಾಯಗೊಂಡಿದ್ದಾರೆ. ದುರಂತವೆಂದರೆ, ಮೂವರು ಕಾಣೆಯಾಗಿದ್ದಾರೆ. ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದಲ್ಲೂ ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular