HomeLatest NewsBIG NEWS: ಲಕ್ಕುಂಡಿಯಲ್ಲಿ ಮೂರನೇ ದಿನದ ಉತ್ಖನನದ ವೇಳೆ ಬೃಹತ್ ಶಿವಲಿಂಗ ಪತ್ತೆ: ಸ್ಥಳದಲ್ಲಿ ಹಾವು...

BIG NEWS: ಲಕ್ಕುಂಡಿಯಲ್ಲಿ ಮೂರನೇ ದಿನದ ಉತ್ಖನನದ ವೇಳೆ ಬೃಹತ್ ಶಿವಲಿಂಗ ಪತ್ತೆ: ಸ್ಥಳದಲ್ಲಿ ಹಾವು ಓಡಾಟ

ಗದಗ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಜಿಲ್ಲಾಡಳಿತದ ವತಿಯಿಂದ ಉತ್ಖನನ ಕಾರ್ಯ ನಡೆಯುತ್ತಿದ್ದು, ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. ಕೋಟೆ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಿಂದ ಉತ್ಖನನ ಕಾರ್ಯ ನಡೆಯುತ್ತಿದೆ.

ಎರಡನೇ ದಿನದ ಉತ್ಖನನದ ವೇಳೆ ಸ್ಥಳದಲ್ಲಿ ಶ್ವಲಿಂಗದ ಪೀಠದಂತಹ ಪುರಾತನ ವಸ್ತು ಪತ್ತೆಯಾಗಿತ್ತು. ಮೂರನೇ ದಿನದ ಉತ್ಖನನ ಕಾರ್ಯ ಮುಂದುವರೆದಿದ್ದು, ಸ್ಥಳದಲ್ಲಿ ಬೃಹತ್ ಶಿವಲಿಂಗವೊಂದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಮೂರನೇ ದಿನದ ಉತ್ಖನನ ಕಾರ್ಯ ನಡೆಸುತ್ತಿದ್ದ ವೇಳೆ ಸ್ಥಳದಲ್ಲಿ ಬೃಹತ್ ಹಾವು ಪ್ರತ್ಯಕ್ಷವಾಗಿದೆ. ಇದು ಉತ್ಖನನ ನಡೆಸುತ್ತಿದ್ದ ಕಾರ್ಮಿಕರಿಗೆ ಆತಂಕವನ್ನುಂಟು ಮಾಡಿದೆ.

ನಿಧಿಗಳನ್ನು ಹಾವುಗಳು ಕಾಯುತ್ತಿರುತ್ತವೆ ಎಂಬ ಹೇಳಿಕೆಯಿದೆ. ಅದೇ ರೀತಿ ಕಾಕತಾಳಿಯ ಎಂಬಂತೆ ಉತ್ಖನನ ಪರಿಶೀಕನೆ ವೇಳೆ ಸ್ಥಳದಲ್ಲಿ ಹಾವು ಕಾಣಿಸಿಕೊಂಡಿದ್ದು, ಕೆಲಸಗಾರರಲ್ಲಿ ಆತಂಕ ಸೃಷ್ಟಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular