HomeKarnatakaಸಂಕ್ರಾಂತಿ ಪ್ರಯುಕ್ತ ದನಗಳ ತೊಳೆಯಲು ಕೆರೆಗೆ ಹೋಗಿದ್ದ ರೈತ ಸಾವು

ಸಂಕ್ರಾಂತಿ ಪ್ರಯುಕ್ತ ದನಗಳ ತೊಳೆಯಲು ಕೆರೆಗೆ ಹೋಗಿದ್ದ ರೈತ ಸಾವು

ರಾಮನಗರ: ಸಂಕ್ರಾಂತಿ ಪ್ರಯುಕ್ತ ದನಗಳ ತೊಳೆಯಲು ಕೆರೆಗೆ ಹೋಗಿದ್ದ ರೈತರೊಬ್ಬರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಚನ್ನಪಟ್ಟಣ ತಾಲೂಕಿನ ಕೋಮನಹಳ್ಳಿಯಲ್ಲಿ ಘಟನೆ ನಡೆದಿದೆ.

ಹರೀಶ್(40) ಮೃತಪಟ್ಟ ರೈತ. ಸಂಕ್ರಾಂತಿ ಹಿನ್ನೆಲೆಯಲ್ಲಿ ದನಗಳ ತೊಳೆಯಲು ಕೆರೆಗೆ ಹೋಗಿದ್ದ ವೇಳೆ ಆಳದ ಜಾಗದಲ್ಲಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಕೆರೆ ಆಳವಾಗಿದ್ದ ಕಾರಣ ಹರೀಶ್ ಅವರಿಗೆ ಹೊರ ಬರಲು ಸಾಧ್ಯವಾಗಿಲ್ಲ. ತೀವ್ರ ಹುಡುಕಾಟದ ನಂತರ ಅವರ ಮೃತದೇಹ ಹೊರ ತರಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular