HomeKarnatakaBIG NEWS: ಮದುವೆಯಾಗುವುದಾಗಿ ನಂಬಿಸಿ ಮಹಿಳಾ ಕಾನ್ಸ್ ಟೆಬಲ್ ಗೆ 18 ಲಕ್ಷ ವಂಚನೆ

BIG NEWS: ಮದುವೆಯಾಗುವುದಾಗಿ ನಂಬಿಸಿ ಮಹಿಳಾ ಕಾನ್ಸ್ ಟೆಬಲ್ ಗೆ 18 ಲಕ್ಷ ವಂಚನೆ

ಮ್ಯಾಟ್ರಿಮೋನಿ ವೆಬ್ ಸೈಟ್ ನಲ್ಲಿ ಪರಿಚಯನಾದ ವ್ಯಕ್ತಿಯೋರ್ವ ಮಹಿಳಾ ಕಾನ್ಸ್ ಸ್ಟೇಬಲ್ ಗೆ ಮದುವುಯಾಗುವುದಾಗಿ ನಂಬಿಸಿ 18 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಂಗಳೂರಿನ ನೆಲಮಂಗಲದಲ್ಲಿ ನಡೆದಿದೆ.

ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಮಹಿಳಾ ಕಾನ್ಸ್ ಟೇಬಲ್ ಓರ್ವರು ಇತ್ತೀಚೆಗೆ ಮ್ಯಾಟ್ರಿಮೋನಿ ವೆಬ್ ಸೈಟ್ ಮೂಲಕ ಪರಿಚಿತನಾದ ವ್ಯಕ್ತಿಯಿಂದ ವಂಚನೆಗೆ ಒಳಗಾಗಿದ್ದಾರೆ. ಅಶೋಕ್ ಮುಸ್ತಿ ಎಂಬಾತ ತಾನು ತೆಲಂಗಣ ಮೂಲದವನು. ಸರ್ಕಾರಿ ಉದ್ಯೋಗದಲ್ಲಿದ್ದೇನೆ ಎಂದು ಹೇಳಿಕೊಂಡು ಮದುವೆಯಾಗುವುದಾಗಿ ನಂಬಿಸಿ ಆಗಾಗ ಮನೆಗೂ ಬರುತ್ತಿದ್ದ. ಮದುವೆ ವರದಕ್ಷಿಣೆ ಹಣವೆಂದು 20 ಲಕ್ಷ ಬೇಡಿಕೆ ಇತಿದ್ದ. ವರದಕ್ಷಿಣೆ ಹಣ ಎಂದು ಕಾನ್ಸ್ ಟೇಬಲ್ 18 ಲಕ್ಷ ರೂಪಾಯಿ ವರ್ಗಾವಣೆ ಮಾಡಿದ್ದಾಳೆ. ಹಣ ಪಡೆದ ವ್ಯಕ್ತಿ ನೆಪ ಹೇಳಿಉತ್ತಲೇ ಮದುವೆ ಮುಂದೂಡುತ್ತಾ ಬಂದಿದ್ದಾನೆ. ಅಂತಿಮವಾಗಿ ಮದುವೆಯಾಗಲ್ಲ ಎಂದಿದ್ದಾನೆ.

ಹಣ ವಾಪಾಸ್ ಕೇಳಿದರೆ ಕೊಡಲ್ಲ ಎಂದು ಎಸ್ಕೇಪ್ ಆಗಿದ್ದಾನೆ. ವಂಚನೆಗೊಳಗಾದ ಮಹಿಳಾ ಕಾನ್ಸ್ ಟೇಬಲ್ ದಾಬಸ್ ಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular