ಬೆಂಗಳೂರು: ಕರ್ನಾಟಕ ರಾಜ್ಯ ತಿಗಳರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಎಲ್.ಎ. ಮಂಜುನಾಥ್ ನೇಮಕವಾಗಿದ್ದಾರೆ. ಅವರಿಗೆ ಮುಖ್ಯಮಂತ್ರಿ ಆದೇಶಪತ್ರ ನೀಡಿ ಅಭಿನಂದಿಸಿದ್ದಾರೆ.
ಇಂದು ಕರ್ನಾಟಕ ರಾಜ್ಯ ತಿಗಳರ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡಿರುವ ಆತ್ಮೀಯರಾದ ಎಲ್.ಎ. ಮಂಜುನಾಥ್ ಅವರಿಗೆ ಆದೇಶಪತ್ರ ನೀಡಿ ಅಭಿನಂದಿಸಿ, ತಿಗಳ ಸಮುದಾಯದ ಏಳಿಗೆಗೆ ಸರ್ಕಾರದ ಪೂರ್ಣ ಸಹಕಾರ ನಿಮ್ಮೊಂದಿಗಿರಲಿದೆ ಎಂದು ಸಿಎಂ ತಿಳಿಸಿದ್ದಾರೆ.
ಸಚಿವರಾದ ಜಮೀರ್ ಅಹ್ಮದ್ ಖಾನ್, ದಿನೇಶ್ ಗುಂಡೂರಾವ್, ವೆಂಕಟೇಶ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

