HomeInternationalಮದುವೆಯಾದ 3 ನಿಮಿಷಗಳಲ್ಲಿ ನಡೆದಿತ್ತು ವಿಚ್ಛೇದನ; ಇದರ ಹಿಂದೆ ಇದ್ದದ್ದು ಒಂದು ಸಣ್ಣ ಕಾರಣ....!

ಮದುವೆಯಾದ 3 ನಿಮಿಷಗಳಲ್ಲಿ ನಡೆದಿತ್ತು ವಿಚ್ಛೇದನ; ಇದರ ಹಿಂದೆ ಇದ್ದದ್ದು ಒಂದು ಸಣ್ಣ ಕಾರಣ….!

2019 ರಲ್ಲಿ ನಡೆದಿದ್ದ ವಿಚಿತ್ರ ವಿಚ್ಛೇದನ ಒಂದರ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ. ಕುವೈತ್ ನಲ್ಲಿ ನಡೆದಿದ್ದ ಈ ಘಟನೆಯಲ್ಲಿ ನ್ಯಾಯಾಲಯದಲ್ಲಿ ಮದುವೆ ಮಾಡಿಕೊಂಡ ಜೋಡಿಯೊಂದು ಕೇವಲ ಮೂರು ನಿಮಿಷಗಳಲ್ಲೇ ವಿಚ್ಛೇದನ ಪಡೆದುಕೊಂಡಿತ್ತು.

ಅಷ್ಟಕ್ಕೂ ಈ ವಿವಾಹ ವಿಚ್ಛೇದನಕ್ಕೆ ಕಾರಣವಾಗಿದ್ದು ಒಂದು ಸಣ್ಣ ಘಟನೆ. ಮದುವೆ ಸಿದ್ಧತೆ ನಡೆಯುತ್ತಿದ್ದ ಸಂದರ್ಭದಲ್ಲಿ ವರ, ಎಲ್ಲರ ಮುಂದೆ ಪದೇ ಪದೇ ವಧುವನ್ನು ಕಿಚಾಯಿಸುತ್ತಿದ್ದ. ಆಕೆಯೂ ತಾಳ್ಮೆಯನ್ನು ಕಾದುಕೊಂಡಿದ್ದಳು. ಕೊನೆಗೂ ಕೋರ್ಟ್ ಮ್ಯಾರೇಜ್ ಆಗಿ ಹೊರಬರುವ ಸಂದರ್ಭದಲ್ಲಿ ವಧು ಮುಗ್ಗರಿಸಿದ್ದಾಳೆ.

ಆಗ ಮತ್ತೆ ತನ್ನ ಚಾಳಿ ಮುಂದುವರೆಸಿದ ವರ ಎಲ್ಲರ ಮುಂದೆ ಆಕೆಯನ್ನು ಅವಮಾನಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಆಕೆ ಕೂಡಲೇ ಮದುವೆ ಮಾಡಿಸಿದ್ದ ಜಡ್ಜ್ ಬಳಿ ತೆರಳಿ ಈ ವಿವಾಹವನ್ನು ರದ್ದುಗೊಳಿಸುವಂತೆ ಕೋರಿದ್ದಾಳೆ. ಅವರೂ ಕೂಡ ಇದಕ್ಕೆ ಸ್ಪಂದಿಸಿದ್ದು ಮೂರು ನಿಮಿಷಗಳ ಹಿಂದಷ್ಟೇ ನಡೆದಿದ್ದ ಮದುವೆಯನ್ನು ರದ್ದುಪಡಿಸಿದ್ದಾರೆ. ಕುವೈತ್ ನಲ್ಲಿ ಅತ್ಯಂತ ಅಲ್ಪಾವಧಿಯಲ್ಲಿ ಕೊನೆಗೊಂಡ ಮದುವೆ ಎಂಬ ಕುಖ್ಯಾತಿ ಈ ವಿವಾಹಕ್ಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular