HomeKarnatakaಕುವೆಂಪು ವಿವಿ: ಸ್ನಾತಕೋತ್ತರ ಪದವಿ ಪ್ರವೇಶಾತಿ ಆ. 31ರವರೆಗೆ ವಿಸ್ತರಣೆ: ಪೇಮೆಂಟ್ ಸೀಟು ಶುಲ್ಕದಲ್ಲಿ 20%...

ಕುವೆಂಪು ವಿವಿ: ಸ್ನಾತಕೋತ್ತರ ಪದವಿ ಪ್ರವೇಶಾತಿ ಆ. 31ರವರೆಗೆ ವಿಸ್ತರಣೆ: ಪೇಮೆಂಟ್ ಸೀಟು ಶುಲ್ಕದಲ್ಲಿ 20% ವಿನಾಯಿತಿ

ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದ 2026-27ನೇ ಶೈಕ್ಷಣಿಕ ಸಾಲಿನ ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಸಂಬಂಧಿಸಿದಂತೆ ಖಾಲಿ ಉಳಿದಿರುವ ಸೀಟುಗಳಿಗೆ ಪ್ರವೇಶಾತಿ ದಿನಾಂಕವನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ.

ಕೆಲವು ಸ್ನಾತಕೋತ್ತರ ವಿಭಾಗಗಳಲ್ಲಿ ಉಳಿದಿರುವ ಸೀಟುಗಳಿಗೆ ವಿಶೇಷ ಸಡಿಲಿಕೆ ಮತ್ತು ಪೇಮೆಂಟ್ ಸೀಟುಗಳ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿದೆ. ಆಗಸ್ಟ್ 14ರವರೆಗೆ ಕೌನ್ಸೆಲಿಂಗ್ ಮೂಲಕ ಮೆರಿಟ್ ಕೋಟಾದಡಿ ಭರ್ತಿಯಾಗಿ, ಖಾಲಿ ಉಳಿದಿರುವ ಸೀಟುಗಳಿಗೆ ನೇರ ಪ್ರವೇಶಾತಿಗೆ ಅವಕಾಶ ಕಲ್ಪಿಸಲಾಗಿದ್ದು, ಅರ್ಜಿ ಸಲ್ಲಿಸದಿರುವ ವಿದ್ಯಾರ್ಥಿಗಳು ಕೂಡ ಸಂಬಂಧಿಸಿದ ವಿಭಾಗಗಳಿಗೆ ಭೇಟಿ ನೀಡಿ ಪ್ರವೇಶಾತಿ ಪಡೆದುಕೊಳ್ಳಬಹುದು.

‘ಮೆರಿಟ್ ಕಮ್ ಪೇಮೆಂಟ್’ ಕೋಟಾ ಹಾಗೂ ಅನ್ಯ ವಿಶ್ವವಿದ್ಯಾಲಯದ ಸೀಟುಗಳ ಪ್ರಕಟಿತ ಶುಲ್ಕದಲ್ಲಿ ಶೇಕಡಾ 20 ರಷ್ಟು ರಿಯಾಯಿತಿ ನೀಡಲಾಗಿದ್ದು, ಅರ್ಹ ಅಭ್ಯರ್ಥಿಗಳು ಆಗಸ್ಟ್ 31ರವರೆಗೆ ರಿಯಾಯಿತಿ ಶುಲ್ಕ ಪಾವತಿಸಿ ಪ್ರವೇಶಾತಿ ಪಡೆಯಬಹುದಾಗಿದೆ. ಕುವೆಂಪು ವಿಶ್ವವಿದ್ಯಾಲಯದ ಯಾವುದೇ ಮೆರಿಟ್ ಕೋಟಾದಡಿ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ, ಅನ್ಯ ವಿಶ್ವವಿದ್ಯಾಲಯಗಳ ಅರ್ಹ ಅಭ್ಯರ್ಥಿಗಳನ್ನು ಕುವೆಂಪು ವಿಶ್ವವಿದ್ಯಾಲಯದ ಅಭ್ಯರ್ಥಿಗಳೆಂದೇ ಪರಿಗಣಿಸಿ ಪ್ರವೇಶಾತಿ ನೀಡಲಾಗುವುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಮುಖವಾಗಿ ಜಿಯೋಲಜಿ, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ, ಎಲೆಕ್ಟಾçನಿಕ್ಸ್, ಪರಿಸರ ವಿಜ್ಞಾನ, ಫಾರ್ಮಾಸಿಟಿಕಲ್ ಕೆಮಿಸ್ಟ್ರಿ, ವನ್ಯಜೀವಿ ನಿರ್ವಹಣಾ ವಿಭಾಗ, ಎಂಎಡ್, ಕಲಾ ನಿಕಾಯದಲ್ಲಿ ಕನ್ನಡ, ಹಿಂದಿ, ಉರ್ದು, ಸಂಸ್ಕೃತ, ಪತ್ರಿಕೋದ್ಯಮ, ಸಮಾಜಶಾಸ್ತ್ರ, ಅರ್ಥಶಾಸ್ತ್ರ, ಹಾಗೂ ಮುಂತಾದ ಸ್ನಾತಕೋತ್ತರ ವಿಭಾಗಗಳಲ್ಲಿ ನೇರ ಪ್ರವೇಶಾತಿಗೆ ಅವಕಾಶ ಕಲ್ಪಿಸಿದ್ದು, ಅರ್ಹ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular