ಬೆಂಗಳೂರು: ಕರ್ನಾಟಕದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆಯ(SIR) ಮನೆ ಮನೆ ಸಮೀಕ್ಷೆ ಮತ್ತು ಗಣತಿ ಹಂತವು ಮುಕ್ತಾಯಗೊಂಡಿದೆ.
ಈ ಪ್ರಕ್ರಿಯೆಯಲ್ಲಿ ಸುಮಾರು 1.08 ಕೋಟಿ (1,08,31,945) ಮತದಾರರ ಹೆಸರುಗಳನ್ನು ಗೈರುಹಾಜರಾದವರು, ಸ್ಥಳಾಂತರಗೊಂಡವರು, ಮೃತಪಟ್ಟವರು ಹಾಗೂ ನಕಲಿ (ASDDO) ಪಟ್ಟಿಯಡಿ ಗುರುತಿಸಿ ಪರಿಶೀಲನೆಗೆ ಒಳಪಡಿಸಲಾಗಿದೆ. ಇದು ಒಟ್ಟು ಮತದಾರರ ಪಟ್ಟಿಯ ಶೇ. 19.54ರಷ್ಟಿದೆ.
ಮುಂದಿನ ಹಂತಗಳು
ಆಗಸ್ಟ್ 24, 2026: ಕರಡು ಮತದಾರರ ಪಟ್ಟಿ ಪ್ರಕಟಣೆ.
ಆಗಸ್ಟ್ 24 ರಿಂದ ಸೆಪ್ಟೆಂಬರ್ 23, 2026: ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ
ಆಗಸ್ಟ್ 24 ರಿಂದ ಅಕ್ಟೋಬರ್ 22, 2026: ಸಲ್ಲಿಕೆಯಾದ ಹಕ್ಕು ಹಾಗೂ ಆಕ್ಷೇಪಣೆಗಳ ವಿಲೇವಾರಿ ಪ್ರಕ್ರಿಯೆ.ಅಕ್ಟೋಬರ್ 10, 2026: ಅಂತಿಮ ಮತದಾರರ ಪಟ್ಟಿ ಪ್ರಕಟಣೆ.
ಮತದಾರರು ಏನು ಮಾಡಬೇಕು?ನಿಮ್ಮ ಹೆಸರು ಕರಡು ಪಟ್ಟಿಯಲ್ಲಿವೆಯೇ ಎಂದು ಪರಿಶೀಲಿಸಿ.ಹೆಸರು ಕೈಬಿಟ್ಟಿದ್ದಲ್ಲಿ ಅಥವಾ ತಪ್ಪಿದ್ದರೆ, ಅಧಿಕೃತ Election Commission of India ಪೋರ್ಟಲ್ ಅಥವಾ ಬೂತ್ ಮಟ್ಟದ ಅಧಿಕಾರಿಯನ್ನು (BLO) ಸಂಪರ್ಕಿಸಿ.
ರಾಜ್ಯದಲ್ಲಿ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision – SIR) ಮನೆ ಮನೆ ಸಮೀಕ್ಷೆ ಇಂದು ಮುಕ್ತಾಯವಾಗಿದ್ದು 1.08 ಕೋಟಿ ಮತದಾರರ ಹೆಸರು ಡಿಲೀಟ್ ಆಗಿದೆ.
ಒಟ್ಟು 1,08,31,945 ಅಂದರೆ 19.54% ರಷ್ಟು ಮತದಾರರನ್ನು ASDDO(ಗೈರು, ಸ್ಥಳಾಂತರಗೊಂಡವರು, ಮೃತರು, ನಕಲಿ ಮತ್ತು ಇತರರು – Absentee, Shifted, Dead, Duplicate, and Others) ಪಟ್ಟಿಗೆ ಸೇರಿಸಲಾಗಿದೆ.
5.54 ಕೋಟಿ ಎನಮ್ಯೂರೇಷನ್ ಫಾರಂ ವಿತರಣೆ ಮಾಡಲಾಗಿದ್ದು, 4.46 ಕೋಟಿ ಫಾರಂ ಡಿಜಿಟಲೈಸೇಷನ್ ಅಂದರೆ 80.46% ಡಿಜಿಟಲೈಸೇಷನ್ ಆಗಿದೆ. ಬೆಂಗಳೂರಿನಲ್ಲಿ ಒಟ್ಟು ಮತದಾರರು 1.08 ಕೋಟಿ ಮತದಾರರ ಪೈಕಿ 56.73 ಲಕ್ಷ ಮತದಾರರ ಡಿಜಿಟಲೈಸೇಷನ್ ಆಗಿದೆ. ಬಾಕಿ 47 ಲಕ್ಷದ 15 ಸಾವಿರದ 188 ಮತದಾರರನ್ನು ಎಡಿಎಸ್‌ಎಸ್‌ಓ ಎಂದು ಗುರುತಿಸಲಾಗಿದೆ.
ಕರುಡು ಮತದಾರರ ಪಟ್ಟಿ ಆಗಸ್ಟ್ 24 ರಂದು ಪ್ರಕಟವಾಗಲಿದೆ. ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಆಗಸ್ಟ್ 24 ರಿಂದ ಸೆಪ್ಟೆಂಬರ್ 23 ರವರೆಗೆ ಕಾಲಾವಕಾಶ ಇರಲಿದೆ.
ಹಕ್ಕು ಆಕ್ಷೇಪಣೆಗಳ ವಿಲೇವಾರಿ ಆಗಸ್ಟ್ 24 ರಿಂದ ಅಕ್ಟೋಬರ್ 22 ರವರೆಗೂ ನಡೆಯಲಿದೆ. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 10 ರಂದು ಪ್ರಕಟವಾಗಲಿದೆ.
ರಾಜ್ಯದಲ್ಲಿ ಎಸ್‌ಐಆರ್
ಒಟ್ಟು ಗಣತಿ ನಮೂನೆ ಹಂಚಿಕೆ: 5,54,32,314
ಸ್ವೀಕೃತ ನಮೂನೆಗಳು: 4,46,00,369 – 80.46%
ಎಎಸ್‌ಡಿಡಿಒ ಎಂದು ಗುರುತಿಸಲಾದ ಮತದಾರರ ಸಂಖ್ಯೆ: 1,08,31,945 – 19.54%
ಮತದಾರರು ಆನ್‌ಲೈನ್‌ನಲ್ಲಿ ಸಲ್ಲಿಸಿದ ಇಎಫ್‌ಗಳು: 7,11,712 (1.28%)
ಪತ್ತೆಯಾಗದ / ಗೈರುಹಾಜರಾದ ಮತದಾರರು: 15,28,985 – 2.76%
ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು: 65,61,607 – 11.84%
ಮರಣ ಹೊಂದಿದ ಮತದಾರರು: 16,38,839 – 2.96%
ಈಗಾಗಲೇ ದಾಖಲಾಗಿರುವ ಮತದಾರರು: 7,07,792 – 1.28%
ಇತರರು: 3,94,722 – 0.71%

