HomeKarnatakaಕುಕ್ಕೆ ಸುಬ್ರಹ್ಮಣ್ಯ ಆನ್​ಲೈನ್ ಪೂಜೆ ಹೆಸರಲ್ಲಿ ಹಣ ದೋಚುತ್ತಿದ್ದ ವಂಚಕರು: ದೂರು ದಾಖಲು

ಕುಕ್ಕೆ ಸುಬ್ರಹ್ಮಣ್ಯ ಆನ್​ಲೈನ್ ಪೂಜೆ ಹೆಸರಲ್ಲಿ ಹಣ ದೋಚುತ್ತಿದ್ದ ವಂಚಕರು: ದೂರು ದಾಖಲು

ಮಂಗಳೂರು: ರಾಜ್ಯಾದ್ಯಂತ ನಾಗರಪಂಚಮಿ ಹಬ್ಬವನ್ನು ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತಿದ್ದು, ದೇವಾಲಯಕ್ಕೆ ಭಕ್ತಸಾಗರವೇ ಹರಿದುಬರುತ್ತಿವೆ.

ನಾಗರಪಂಚಮಿ ಹಬ್ಬವನ್ನೇ ಬಂಡವಾಳ ಮಡಿಕೊಂಡಿರುವ ವಂಚಕರು ಆನ್ ಲೈನ್ ಮೂಲಕ ಹಣ ದೋಚಲು ಮುಂದಾಗಿದ್ದಾರೆ. ನಾಗರಪಂಚಮಿ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಹೆಸರಲ್ಲಿ AI ವಿಡಿಯೋ ಬಳಸಿ ‘ಆನ್‌ಲೈನ್ ಪೂಜಾ ಸೇವೆ’ ಹೆಸರಿನಲ್ಲಿ ವಂಚಿಸುತ್ತಿರುವುದು ಬೆಳಕಿಗೆ ಬಂದಿದೆ.

ಬುಕಿಂಗ್ ಆ್ಯಪ್ ಮೂಲಕ 751 ರೂ. ನೀಡಿ ಬುಕಿಂಗ್ ಮಾಡಿದರೆ ಪೂಜೆ ವಿಡಿಯೋ ಹಾಗೂ ಪ್ರಸಾದ ಕಳುಹಿಸುವುದಾಗಿ ಜಾಹೀರಾತು ನೀಡಲಾಗಿತ್ತು. ಈ ವಿಡಿಯೋಗೂ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿರುವ ಕಾರ್ಯನಿರ್ವಹಣಾಧಿಕಾರಿ, ವಂಚಕರ ವಿರುದ್ಧ ಕ್ರಮಕೈಗೊಳ್ಳುವಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular