HomeKarnatakaKSRTC ಡಿವಿಜನಲ್ ಸೆಕ್ಯುರಿಟಿ ಇನ್ಸ್ ಪೆಕ್ಟರ್ ಬರ್ಬರ ಹತ್ಯೆ

KSRTC ಡಿವಿಜನಲ್ ಸೆಕ್ಯುರಿಟಿ ಇನ್ಸ್ ಪೆಕ್ಟರ್ ಬರ್ಬರ ಹತ್ಯೆ

ಬಳ್ಳಾರಿ: ಕೆ.ಎಸ್.ಆರ್.ಟಿ.ಸಿ ಡಿವಿಜನಲ್ ಸೆಕ್ಯುರಿಟಿ ಇನ್ಸ್ ಪೆಕ್ಟರ್ ನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಳ್ಳಾರಿ ನಗರದಲ್ಲಿ ನಡೆದಿದೆ.

54 ವರ್ಷದ ಹುಸೇನಪ್ಪ ಕೊಲೆಯಾದ ಸೆಕ್ಯುರಿಟಿ ಇನ್ಸ್ ಪೆಕ್ಟರ್. ದುಷ್ಕರ್ಮಿಗಳು ಬೈಕ್ ನಲ್ಲಿ ಬಂದು ಮಾರಕಾಸ್ತ್ರಗಳಿಂದ ಹುಸೇನಪ್ಪ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಹುಸೇನಪ್ಪ ಸಾವನ್ನಪ್ಪಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹುಸೇನಪ್ಪ ಕಳೆದ 20 ವರ್ಷಗಳಿಂದ ಕೆ.ಎಸ್.ಆರ್.ಟಿ.ಸಿಯಲ್ಲಿ ಕರ್ತವ್ಯನಿರ್ವಹಿಸುತ್ತಿದ್ದರು.ಬೀದರ್ ನಲ್ಲಿ ನಡೆಯುತ್ತಿದ್ದ ಚಾಲಕರ ನೇಮಕಾತಿ ಪರೀಕ್ಷೆಗೆ ತೆರಳುವವರಿದ್ದರು. ಮನೆಯಿಂದ ಬಸ್ ನಿಲ್ದಾಣಕ್ಕೆ ಹೋಗುವ ವೇಳೆ ಅವರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಕೊಲೆ ಮಾಡಿದ್ದಾರೆ.

ಸ್ಥಳಕ್ಕೆ ಎಸ್ ಪಿ ರಂಜಿತ್ ಕುಮಾರ್, ಕೆ.ಎಸ್.ಆರ್.ಟಿ.ಸಿ ಡಿಸಿ ದೇವರಾಜ್ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular