HomeKarnatakaಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಶುಭ ಸುದ್ದಿ: 2400 KSRP ಪೊಲೀಸರ ನೇಮಕಾತಿಗೆ ಸರ್ಕಾರ ಆದೇಶ

ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಶುಭ ಸುದ್ದಿ: 2400 KSRP ಪೊಲೀಸರ ನೇಮಕಾತಿಗೆ ಸರ್ಕಾರ ಆದೇಶ

ಬೆಂಗಳೂರು: ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಶುಭ ಸುದ್ದಿ ಇಲ್ಲಿದೆ. 2400 ಕೆ.ಎಸ್.ಆರ್.ಪಿ. ಪೋಲೀಸರ ನೇಮಕಾತಿಗೆ ಸರ್ಕಾರ ಆದೇಶಿಸಿದೆ.

ಸಶಸ್ತ್ರ ಮೀಸಲು ಪಡೆಯ ಎರಡು ಹೊಸ ಬೆಟಾಲಿಯನ್ ಆರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ದೇವನಹಳ್ಳಿ ಮತ್ತು ಕೆಜಿಎಫ್ ಬಳಿ 2,400 ಪೊಲೀಸರ ಬಲವುಳ್ಳ ಎರಡು ಬೆಟಾಲಿಯನ್ ಆರಂಭಕ್ಕೆ ಅಧಿಕೃತವಾಗಿ ಶುಕ್ರವಾರ ಸರ್ಕಾರ ಆದೇಶಿಸಿದೆ.

ಪ್ರಸ್ತುತ 12 ಕೆ.ಎಸ್.ಆರ್.ಪಿ., ಎರಡು ಐ.ಆರ್.ಬಿ. ಬೆಟಾಲಿಯನ್ ಗಳು ಇದ್ದು, ಮತ್ತಷ್ಟು ಬೆಟಾಲಿಯನ್ ಆರಂಭಿಸುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದು, ಸರ್ಕಾರ ಸಮ್ಮತಿಸಿದೆ. ದೇವನಹಳ್ಳಿ ಸಮೀಪ ನೂರು ಎಕರೆ, ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನಲ್ಲಿ 50 ಎಕರೆ ಜಾಗದಲ್ಲಿ ಹೊಸ ಬೆಟಾಲಿಯನ್ ಆರಂಭಿಸಲಿದ್ದು, ಇಲ್ಲಿ ತಲಾ ಓರ್ವ ಕಮಾಂಡೆಂಟ್ ಸೇರಿ 1200 ಪೊಲೀಸರಂತೆ 2400 ಪೊಲೀಸರ ನೇಮಕಾತಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular