HomeKarnatakaಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ: FDA, SDA, ಮುಖ್ಯ ಶಿಕ್ಷಕರು, ಇಂಜಿನಿಯರ್ ಸೇರಿ 2 ಸಾವಿರ ಹುದ್ದೆಗಳಿಗೆ...

ಉದ್ಯೋಗಾಕಾಂಕ್ಷಿಗಳಿಗೆ ಶುಭ ಸುದ್ದಿ: FDA, SDA, ಮುಖ್ಯ ಶಿಕ್ಷಕರು, ಇಂಜಿನಿಯರ್ ಸೇರಿ 2 ಸಾವಿರ ಹುದ್ದೆಗಳಿಗೆ KPSC ನೇಮಕಾತಿ

ಬೆಂಗಳೂರು: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಎರಡು ಸಾವಿರ ಹುದ್ದೆಗಳ ನೇಮಕಾತಿಗೆ ಇಲಾಖೆಗಳಿಂದ ಬಂದಿರುವ ಬಾಕಿ ಇರುವ ಪ್ರಸ್ತಾವನೆ ವಿವರಗಳನ್ನು ಕರ್ನಾಟಕ ಲೋಕಸೇವಾ ಆಯೋಗ ಪ್ರಕಟಿಸಿದೆ.

ಪಶುವೈದ್ಯಾಧಿಕಾರಿಗಳು 400 ಹುದ್ದೆ, ಕೃಷಿ ಸಹಾಯಕ ಅಧಿಕಾರಿಗಳ 300 ಹುದ್ದೆ, ಶಿಕ್ಷಣ ಇಲಾಖೆಯಲ್ಲಿ 140 ಮುಖ್ಯ ಶಿಕ್ಷಕರ ಹುದ್ದೆ, ಜಲ ಸಂಪನ್ಮೂಲ ಇಲಾಖೆಯಲ್ಲಿ 100 ಸಹಾಯಕ ಇಂಜಿನಿಯರ್ ಹುದ್ದೆ, ಬಿಬಿಎಂಪಿಯಲ್ಲಿ 100 ಸಹಾಯಕ ಇಂಜಿನಿಯರ್ ಹುದ್ದೆ, ಸಾರಿಗೆ ಇಲಾಖೆಯಲ್ಲಿ 76 ಮೋಟಾರ್ ವಾಹನ ನಿರೀಕ್ಷಕರ ಹುದ್ದೆ, ಜಲಸಂಪನ್ಮೂಲ ಇಲಾಖೆಯಲ್ಲಿ ಕಿರಿಯ ಇಂಜಿನಿಯರ್ ಗಳ 300 ಹುದ್ದೆ, ಗೆಜೆಟೆಡ್ ಪ್ರೊಬೇಷನರಿ 40 ಹುದ್ದೆಗಳು, ವಿವಿಧ ಇಲಾಖೆಗಳಲ್ಲಿ ಎಪ್.ಡಿ.ಎ., ಎಸ್‌ಡಿಎ, ಶೀಘ್ರ ಲಿಪಿಕಾರ ಸುಮಾರು 2000 ಹುದ್ದೆಗಳ ಪ್ರಸ್ತಾವನೆಗಳ ವಿವರಗಳನ್ನು ಕೆಪಿಎಸ್ಸಿ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರದ ವಿವಿಧ ಇಲಾಖೆಗಳು ಪ್ರಸ್ತಾವನೆಯನ್ನು ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ ಎಂದು ಕೆ.ಪಿ.ಎಸ್.ಸಿ. ಕಾರ್ಯದರ್ಶಿ ಲತಾ ಕುಮಾರಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular