HomeCrimeಜೂಜು ಅಡ್ಡೆ ಮೇಲೆ ದಾಳಿ ವೇಳೆ ದುರಂತ; ಕಟ್ಟಡದಿಂದ ಬಿದ್ದು ಪೊಲೀಸ್ ಅಧಿಕಾರಿ ಸಾವು

ಜೂಜು ಅಡ್ಡೆ ಮೇಲೆ ದಾಳಿ ವೇಳೆ ದುರಂತ; ಕಟ್ಟಡದಿಂದ ಬಿದ್ದು ಪೊಲೀಸ್ ಅಧಿಕಾರಿ ಸಾವು

ಕರ್ತವ್ಯದಲ್ಲಿದ್ದ ವೇಳೆ ಕಟ್ಟಡದಿಂದ ಬಿದ್ದು ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿರೋ ದುರದೃಷ್ಟಕರ ಘಟನೆ ಕೇರಳದ ಕೊಟ್ಟಾಯಂನ ಪಾಲಾದಲ್ಲಿ ನಡೆದಿದೆ.

ಮೃತರನ್ನು ರಾಮಪುರಂ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಕುರವಿಲಂಗಾಡ್ ಮೂಲದ ಜೋಬಿ ಜಾರ್ಜ್ ಎಂದು ಗುರುತಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಮಪುರಂನ ಬಸ್ ಡಿಪೋ ಬಳಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ ಈ ಪ್ರದೇಶದಲ್ಲಿ ಜೂಜಾಟದ ಗ್ಯಾಂಗ್ ಇದೆ ಎಂಬ ಮಾಹಿತಿಯ ಮೇರೆಗೆ ಜಾರ್ಜ್ ಕಟ್ಟಡಕ್ಕೆ ಆಗಮಿಸಿದ್ದರು. ಆದರೆ ಅಧಿಕಾರಿ ಕಾರಿಡಾರ್ ನಲ್ಲಿ ಜಾರಿದ ಪರಿಣಾಮ ಕಟ್ಟಡದಿಂದ ಕೆಳಗೆ ಬಿದ್ದಿದ್ದಾರೆ.

ಕೂಡಲೇ ಜಾರ್ಜ್ ಅವರನ್ನು ಅವರ ಸಹೋದ್ಯೋಗಿಗಳು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular