ಕೊಪ್ಪಳ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಲಾಗುವ ಪ್ರೋತ್ಸಾಹ ಧನಕ್ಕಾಗಿ ನಕಲಿ ಸೃಷ್ಟಿಫಿಕೇಟ್ ಸೃಷ್ಟಿಸಿ ದಾಅಖಲೆ ಸಲ್ಲಿಸಿರುವ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.
ಕೊಪ್ಪಳ ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ನಕಲಿ ಅಂಕಪಟ್ಟಿಗಳನ್ನು ಸೃಷ್ಟಿಸಿ ಅರ್ಜಿ ಸಲ್ಲಿಸಿರುವುದು ಬಯಲಾಗಿದೆ. ಝೆರಾಕ್ಸ್ ಅಂಗಡಿಗಳಲ್ಲಿ ಅಂಕಗಳನ್ನು ತಿದ್ದಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದಂತೆ ನಕಲಿ ಪ್ರತಿಗಳನ್ನು ಸಲ್ಲಿಸಿರುವ ಕಳ್ಳಾಟ ಬೆಳಕಿಗೆ ಬಂದಿದೆ. ಎಲ್ಲಾ ನಕಲಿ ಅರ್ಜಿಗಳನ್ನು ತಿರಸ್ಕರಿಸಿ ತಪ್ಪು ಎಸಗಿದ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಬುದ್ಧಿವಾದ ಹೇಳಿ ಕಳುಹಿಸಲಾಗಿದೆ.
ಪರಿಶಿಷ್ಟ ಜಾತಿಯ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ 30 ಸಾವಿರ ರೂ., ಸ್ನಾತಕ 25 ಸಾವಿರ ರೂ., ಪಿಯುಸಿ 20 ಸಾವಿರ ರೂ., ಎಸ್ಸೆಸ್ಸೆಲ್ಸಿ 15 ಸಾವಿರ ರೂ. ಗಳನ್ನು ಪ್ರೋತ್ಸಾಹ ಧನವನ್ನಾಗಿ ಇಲಾಖೆ ನೀಡುತ್ತಾ ಬಂದಿದೆ. ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳಿಗೆ, ಪ್ರಥಮ ಶ್ರೇಣಿಯಲ್ಲಿ ಪಾಸಾಗುವ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ಜೀವನಕ್ಕೆ ಅನುಕೂಲವಾಗಲಿ ಎಂದು ಸಮಾಜ ಕಲ್ಯಾಣ ಇಲಾಖೆಯ ಮೂಲಕ ಸರ್ಕಾರ ಈ ಸ್ಕಾಲರ್ ಶಿಪ್ ಹಣ ವಿತರಿಸುತ್ತದೆ.
ಆದರೆ, 2025-26ನೇ ಹಾಗೂ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾದಂತೆ ಅಂಕಪಟ್ಟಿ ಗಳನ್ನು ತಿದ್ದಿ, ಹಲವು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ನಕಲಿ ಅಂಕಪಟ್ಟಿ ಎಂಬುದು ದೃಢವಾಗುತ್ತಿದ್ದಂತೆಯೇ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.
ಪ್ರಥಮ ಶ್ರೇಣಿಯಲ್ಲಿ ಪಾಸಾಗುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರೋತ್ಸಾಹ ಧನ ನೀಡುವುದರಿಂದ ವಿದ್ಯಾರ್ಥಿಗಳು ಕಡ್ಡಾಯವಾಗಿ ಅರ್ಜಿಯೊಂದಿಗೆ ಅಂಕಪಟ್ಟಿಯ ಝೆರಾಕ್ಸ್ ಪ್ರತಿ ಸಲ್ಲಿಸಿರುತ್ತಾರೆ. ಯುಸಿಎಂಎಸ್‌ನಲ್ಲಿ ವಿದ್ಯಾರ್ಥಿಗಳ ಅಂಕ ಪಟ್ಟಿ ನಂಬರ್ ಹಾಕಿದ ಕೂಡಲೇ ವಾಸ್ತವವಾಗಿ ವಿದ್ಯಾರ್ಥಿ ಪಡೆದಿರುವ ಅಂಕವೆಷ್ಟು ಎಂಬುದು ನಿಖರವಾಗಿ ಗೊತ್ತಾಗಲಿದೆ. ಈ ರೀತಿ ಕಳೆದ ವರ್ಷ ಹಾಗೂ ಪ್ರಸಕ್ತ ಸಾಲಿನಲ್ಲಿ ಬಂದ ಅರ್ಜಿಗಳಲ್ಲಿ ಅಂಕಪಟ್ಟಿ ಪರಿಶೀಲಿಸಿದಾಗ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಾವು ಪ್ರಥಮ ಶ್ರೇಣಿಯಲ್ಲಿ ಪಾಸಾಗದಿದ್ದರೂ ಪಾಸಾದವರಂತೆ ಅಂಕಪಟ್ಟಿ ತಿದ್ದುಪಡಿ ಮಾಡಿ, ಅರ್ಜಿ ಸಲ್ಲಿಸಿದ್ದಾರೆ. 50 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಇಂತಹ ವಿದ್ಯಾಅರ್ಥಿಗಳನ್ನು ಪತ್ತೆ ಮಾಡಿ ಅವರನ್ನು ಕರೆದು ಇನ್ನೊಮ್ಮೆ ಈ ರೀತಿ ತಪ್ಪು ಮಾಡದಂತೆ ಬುದ್ಧಿವಾದ ಹೇಳಿ ಅಧಿಕಾಅರಿಗಳು ಕಳುಹಿಸಿದ್ದಾರೆ.
ನಕಲಿ ಔಷಧ ದಂಧೆ: ಎಸ್‌ಐಟಿ ತನಿಖೆಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗ: ಒಂದೂವರೆ ವರ್ಷದಲ್ಲಿ 15 ಸಾವಿರ ನಕಲಿ ಆ್ಯಂಟಿಬಯೋಟಿಕ್ ವಯಲ್ ವಿತರಣೆ
ಬೆಂಗಳೂರು: ರಾಅಜ್ಯದಲ್ಲಿ ಪತ್ತೆಯಾಗಿರುವ ನಕಲಿ ಔಷಧ ದಂಧೆ ಜಾಲದ ಬಗ್ಗೆ ಎಸ್‌ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ತನಿಖೆಯಲ್ಲಿ ಆಘಾತಕಾರಿ ಮಾಅಹಿತಿಗಳು ಬಯಲಾಗಿವೆ.
ನಕಲಿ ಔಷಧ ಜಾಲ ಕಳೆದ ಒಂದೂವರೆ ವರ್ಷದಲ್ಲಿ ಎರಡು ನಕಲಿ ಆ್ಯಂಟಿಬಯೋಟಿಕ್‌ಗಳ ಸುಮಾರು 15 ಸಾವಿರ ವಯಲ್‌ಗಳನ್ನು ವಿತರಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ.
ಜವಿಸೆಫ್ಟಾ ಮತ್ತು ಎಮ್ಬ್ಲಾವಿಯೋ ಹೆಸರಿನ ಈ ಔಷಧಿಗಳ ಮಾರಾಟ ಹಕ್ಕು ಫೈಜರ್ ಸಂಸ್ಥೆಯದ್ದಾಗಿದೆ. ಆರೋಪಿಗಳು 2025ರ ಏಪ್ರಿಲ್‌ನಿಂದ ಈ ಜಾಲವನ್ನು ನಡೆಸುತ್ತಿದ್ದರು. ಅಸಲಿ ಔಷಧದ ಬದಲು ಜೆನೆರಿಕ್ ಔಷಧವನ್ನು ವಯಲ್‌ಗಳಲ್ಲಿ ತುಂಬಿ, ಅವು ಅಸಲಿ ಔಷಧಗಳಂತೆ ಕಾಣುವಂತೆ ಫೈಜರ್ ಹೆಸರಿನ ಲೇಬಲ್‌ಗಳನ್ನು ಬಳಸುತ್ತಿದ್ದರು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಟರ್ಕಿಯಲ್ಲಿರುವ ಫೈಜರ್‌ನ ಉತ್ಪಾದನಾ ಘಟಕದಿಂದ ಮೂಲ ಕಂಪನಿಯ ಲೇಬಲ್‌ಗಳನ್ನು ಆರೋಪಿಗಳು ಪಡೆದುಕೊಳ್ಳುತ್ತಿದ್ದರು.
ನಕಲಿ ಔಷಧಿಗಳಲ್ಲಿರುವ ರಾಸಾಯನಿಕ ಅಂಶಗಳನ್ನು ಪತ್ತೆಹಚ್ಚಲು ಪ್ರಯೋಗಾಲಯದ ವರದಿಗಾಗಿ ಕಾಯಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಯಲ್‌ಗಳ ವಿತರಣಾ ಜಾಲವನ್ನೂ ಪತ್ತೆಹಚ್ಚಲಾಗಿದೆ ಎಂದು ಅವರು ಹೇಳಿದ್ದಾರೆ.
ಆರೋಪಿಗಳು ಖರೀದಿಸಿದ ಔಷಧ ಪ್ರಮಾಣ, ಮಾರಾಟ ಮಾಡಿದ ಪ್ರಮಾಣ, ಪಡೆದ ಹಾಗೂ ವಿತರಿಸಿದ ದಾಸ್ತಾನು ಸೇರಿದಂತೆ ಪ್ರತಿಯೊಂದು ಹಂತದ ಮಾಹಿತಿಯನ್ನು ತಾಳೆ ಹಾಕಿ ಪರಿಶೀಲಿಸಲಾಗುತ್ತಿದೆ. ಆರೋಪಿಗಳು ಔಷಧಿಗಳನ್ನು ಕೆಲವು ಸಂಸ್ಥೆಗಳಿಗೆ ಮಾರಾಟ ಮಾಡಿದ್ದು, ಆ ಸಂಸ್ಥೆಗಳು ಮುಂದೆ ಯಾರಿಗೆ ಪೂರೈಸಿವೆ ಎಂಬುದನ್ನೂ ಎಸ್‌ಐಟಿ ತನಿಖೆ ನಡೆಸುತ್ತಿದೆ. ವಿತರಣಾ ಜಾಲದ ಪ್ರತಿಯೊಂದು ಹಂತವನ್ನು ಪೊಲೀಸರು ಹಾಗೂ ಆರೋಗ್ಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಸದ್ಯದ ತನಿಖೆಯಲ್ಲಿ ಕ್ಯಾನ್ಸರ್ ಔಷಧಿಗಳ ನಕಲಿ ತಯಾರಿಕೆಗೆ ಸಂಬಂಧಿಸಿದ ಯಾವುದೇ ಸಾಕ್ಷ್ಯ ಪತ್ತೆಯಾಗಿಲ್ಲ. ಆದರೂ ಈ ಕುರಿತು ತನಿಖೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜವಿಸೆಫ್ಟಾ ಮತ್ತು ಎಮ್ಬ್ಲಾವಿಯೋ ಗಂಭೀರ ಬ್ಯಾಕ್ಟೀರಿಯಾ ಸೋಂಕುಗಳ ಚಿಕಿತ್ಸೆಗೆ ಬಳಸುವ ಪ್ರಿಸ್ಕ್ರಿಪ್ಷನ್ ಆ್ಯಂಟಿಬಯೋಟಿಕ್‌ಗಳಾಗಿವೆ. ಜವಿಸೆಫ್ಟಾ ಒಂದು ವಯಲ್‌ಗೆ ಸುಮಾರು ₹5,500ರಿಂದ ₹6,000 ಹಾಗೂ ಎಮ್ಬ್ಲಾವಿಯೋ ಒಂದು ವಯಲ್‌ಗೆ ₹6,000ರಿಂದ ₹6,500ರವರೆಗೆ ಬೆಲೆ ಇದೆ. ಆರೋಪಿಗಳು ಕಡಿಮೆ ವೆಚ್ಚದಲ್ಲಿ ನಕಲಿ ಔಷಧ ತಯಾರಿಕೆಗೆ ಬೇಕಾದ ವಸ್ತುಗಳನ್ನು ಖರೀದಿಸಿ, ಅವುಗಳನ್ನು ಬ್ರ್ಯಾಂಡೆಡ್ ಔಷಧಗಳಂತೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಕಳೆದ ಕೆಲವು ತಿಂಗಳಲ್ಲಿ ₹10 ಕೋಟಿಗೂ ಅಧಿಕ ಲಾಭ ಗಳಿಸಿರಬಹುದು ಎಂಬ ಶಂಕೆಯನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಹೈದರಾಬಾದ್, ಚೆನ್ನೈ, ಉತ್ತರಾಖಂಡ್ ಸೇರಿದಂತೆ ವಿವಿಧ ರಾಜ್ಯಗಳಿಂದ ನಕಲಿ ಔಷಧ ತಯಾರಿಕೆಗೆ ಬೇಕಾದ ವಸ್ತುಗಳನ್ನು ತರಲಾಗುತ್ತಿತ್ತು ಎನ್ನಲಾಗಿದೆ. ಬಳಿಕ ಅವುಗಳನ್ನು ವಯಲ್‌ಗಳಲ್ಲಿ ತುಂಬಿ, ಫೈಜರ್ ಉತ್ಪನ್ನಗಳೆಂದು ಲೇಬಲ್ ಮಾಡಿ ಡಿಎಂ ಫಾರ್ಮಾ ಮೂಲಕ ವಿತರಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಎಂ ಫಾರ್ಮಾ ಸಂಸ್ಥೆ ಚೆನ್ನೈನ ಬಾಲಸುಬ್ರಮಣಿ ಹಾಗೂ ಶಿವಮೊಗ್ಗ ಮೂಲದ, ಪ್ರಮುಖ ಆರೋಪಿ ಆರ್. ಪ್ರಶಾಂತ್ ಬಾಬು ಪತ್ನಿ ಪ್ರಿಯಾಂಕಾ ಹೆಸರಿನಲ್ಲಿ ನೋಂದಣಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಶಾಂತ್ ಬಾಬು ಮೆಡಿಕಲ್ ರೆಪ್ರೆಸೆಂಟೇಟಿವ್ ಆಗಿ ಕೆಲಸ ಮಾಡಿದ್ದ.
ಈ ಔಷಧಿಗಳನ್ನು ವೀರೇಶ್ ಕುಮಾರ್ ಜೈನ್ ಮಾಲೀಕತ್ವದ ಕೃಪಾ ಫಾರ್ಮಾಗೆ ಪೂರೈಸಲಾಗುತ್ತಿತ್ತು. ಬಳಿಕ ಕೃಪಾ ಫಾರ್ಮಾ ಇತರೆ ಔಷಧ ಕಂಪನಿಗಳು ಮತ್ತು ಆಸ್ಪತ್ರೆಗಳಿಗೆ ಅಸಲಿ ಔಷಧಿಗಳ ಜತೆಗೆ ನಕಲಿ ಔಷಧಿಗಳನ್ನೂ ಪೂರೈಸುತ್ತಿತ್ತು. ನಕಲಿ ಔಷಧ ತಯಾರಿಕೆಗಾಗಿ ಪ್ರಶಾಂತ್ ಬಿದಡಿ ಸಮೀಪದ ಫಾರ್ಮ್‌ಹೌಸ್‌ವೊಂದನ್ನು ಬಾಡಿಗೆಗೆ ಪಡೆದಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಏಳು ಮಂದಿಯನ್ನು ಎಸ್‌ಐಟಿ ಬಂಧಿಸಿದೆ.

