HomeKarnatakaಪಿಯುಸಿ ವಿದ್ಯಾರ್ಥಿನಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಪೊಲೀಸ್ ಠಾಣೆ ಎದುರು ಯುವತಿ ಪ್ರತಿಭಟನೆ

ಪಿಯುಸಿ ವಿದ್ಯಾರ್ಥಿನಿಗೆ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಪೊಲೀಸ್ ಠಾಣೆ ಎದುರು ಯುವತಿ ಪ್ರತಿಭಟನೆ

ಕೊಪ್ಪಳ: ದ್ವಿತೀಯ ಪಿಯುಸಿ ಓದುತ್ತಿದ್ದ ಯುವತಿಯೊಬ್ಬಳನ್ನು ಪರಿಚಯಿಸಿಕೊಂಡಿದ್ದ ಯುವಕ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಮೋಸ ಮಡಿರುವುದಾಗಿ ಯುವತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಕೊಪ್ಪಳದ ಗಂಗಾವತಿ ತಾಲೂಕಿನ ದ್ವಿತೀಯ ಪಿಯು ಓದುತ್ತಿದ್ದ ಯುವತಿಯನ್ನು ರವಿರಾಜ್ ಎಂಬಾತ ಮದುವೆಯಾಗುವುದಾಗಿ ಹೇಳಿ ತನ್ನ ಪೋಷಕರಿಗೂ ಒಪ್ಪಿಸಿದ್ದಾನೆ. ಎರಡು ಕುಟುಂಬದವರು ವಿವಾಹ ನಿಶ್ಚಯ ಮಾಡಿದ್ದಾರೆ. ನಿಶ್ಚಿತಾರ್ಥದ ಬಳಿಕ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಗೆ ಬಂದ ರವಿರಾಜ್ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಅಲ್ಲದೇ ಮದುವೆಗೆ ನಿರಾಕರಿಸಿದ್ದಾನೆ.

ಇದರಿಂದ ನೊಂದ ಯುವತಿ ಆರೋಪಿಯನ್ನು ಬಂಧಿಸಿ, ತನ್ನೊಂದಿಗೆ ವಿವಾಹ ಮಾಡಿಸುವಂತೆ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿದ್ದಾಳೆ. ಯುವತಿ ಹೇಳುವ ಪ್ರಕಾರ ರವಿರಾಜ್ ನಿಂದ ತಾನು ಗರ್ಭಣಿಯಾಗಿದ್ದು, ಗರ್ಭಪಾತವನ್ನೂ ಮಾಡಿಸಿದ್ದಾನೆ. ಈಗ ಮದುವೆಯಾಗುವುದಿಲ್ಲ ಎಂದು ನಾಪತ್ತೆಯಾಗಿದ್ದಾನೆ. ಎರಡು ಕುಟುಂಬದವರು ಹಲವು ಬಾರಿ ಪಂಚಾಯಿತಿ ಮಾಡಿಸಿದರೂ ರವಿರಾಜ್ ಒಪ್ಪಿಲ್ಲ. ತೀವ್ರವಾಗಿ ಮನನೊಂದ ಸಂತ್ರಸ್ತೆ ಎರಡು ಬಾರಿ ಆತ್ಮಹತ್ಯೆಗೂ ಯತ್ನಿಸಿದ್ದಳು. ಇದೀಗ ಅಂತಿಮವಾಗಿ ಪೊಲೀಸ್ ಠಾಣೆ ಎದಿರು ಧರಣಿ ನಡೆಸಿದ್ದು, ಆರೋಪಿ ರವಿರಾಜ್ ನನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular