HomeBeautyಲೆಗ್ಗಿಂಗ್ ಖರೀದಿಗೂ ಮುನ್ನ ತಿಳಿಯಿರಿ ಈ ವಿಷಯ

ಲೆಗ್ಗಿಂಗ್ ಖರೀದಿಗೂ ಮುನ್ನ ತಿಳಿಯಿರಿ ಈ ವಿಷಯ

ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಪ್ಯಾಂಟ್ ಬದಲು ಲೆಗ್ಗಿಂಗ್, ಪಲಾಜೋ ಇಷ್ಟಪಡ್ತಾರೆ. ಕುರ್ತಾ ಜೊತೆ ಲೆಗ್ಗಿಂಗ್ ಅಥವಾ ಪಲಾಜೋ ಆರಾಮದ ಅನುಭವ ನೀಡುತ್ತದೆ. ಜೊತೆಗೆ ಫ್ಯಾಷನ್ ಕೂಡ ಹೌದು. ಆದ್ರೆ ಲೆಗ್ಗಿಂಗ್ ಅಥವಾ ಪಲಾಜೋ ಖರೀದಿ ಮಾಡುವ ವೇಳೆ ಕೆಲವೊಂದು ಸಂಗತಿಗಳ ಬಗ್ಗೆ ಗಮನವಿಡಬೇಕು.

ಲಾಂಗ್ ಕುರ್ತಾ ಧರಿಸುವವರು ನೀವಾಗಿದ್ದರೆ ಅದ್ರ ಜೊತೆ ಯಾವಾಗ್ಲೂ ಪಲಾಜೋ ಧರಿಸಿ. ಶಾರ್ಟ್ ಕುರ್ತಾ ಜೊತೆ ಪಲಾಜೋ ಅಷ್ಟು ಹೊಂದಿಕೆಯಾಗುವುದಿಲ್ಲ. ಅದು ನಿಮ್ಮ ಲುಕ್ ಹಾಳು ಮಾಡುವ ಸಾಧ್ಯತೆಯಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲೆಗ್ಗಿಂಗ್ ಕೂಡ ಲಾಂಗ್ ಕುರ್ತಾಕ್ಕೆ ಹೊಂದಿಕೆಯಾಗುತ್ತದೆ. ಶಾರ್ಟ್ ಕುರ್ತಾ ಜೊತೆ ಲೆಗ್ಗಿಂಗ್ ಧರಿಸಿದ್ರೆ ನಿಮ್ಮ ಫ್ಯಾಷನ್ ಹಾಳಾಗುತ್ತದೆ. ಲೆಗ್ಗಿಂಗ್ ಖರೀದಿ ವೇಳೆ ಬಣ್ಣದ ಬಗ್ಗೆಯೂ ಹೆಚ್ಚು ಗಮನ ನೀಡಿ. ಸ್ಕಿನ್ ಕಲರ್ ಲೆಗ್ಗಿಂಗ್ ಖರೀದಿ ಮಾಡಿದ್ದರೆ ಅದ್ರ ಬಣ್ಣದ ಬಗ್ಗೆ ಗಮನ ನೀಡಿ. ನೀವು ಲೆಗ್ಗಿಂಗ್ ಧರಿಸಿದ್ದಿರಿ ಎಂಬುದು ಜನರಿಗೆ ಗೊತ್ತಾಗುವಂತಿರಲಿ.

ಫ್ಯಾಷನ್ ಮಾಡುವ ಮೊದಲು ಫ್ಯಾಷನ್ ಬಗ್ಗೆ ತಿಳಿದುಕೊಂಡಿರುವುದು ಒಳ್ಳೆಯದು. ಶಾರ್ಟ್ ಕುರ್ತಾ ಜೊತೆ ಪಲಾಜೋ ಅಥವಾ ಲೆಗ್ಗಿಂಗ್ ಧರಿಸಿ ಸೌಂದರ್ಯ ಹಾಳು ಮಾಡಿಕೊಳ್ಳಬೇಡಿ. ಕುರ್ತಾಕ್ಕೆ ಹೊಂದುವ ಪಲಾಜೋ ಅಥವಾ ಲೆಗ್ಗಿಂಗ್ ಖರೀದಿ ಮಾಡುವುದು ಕೂಡ ಮುಖ್ಯವಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular