HomeKarnatakaರಾಜಕೀಯದಿಂದ ದೂರ ಉಳಿದ ರಾಜ್ ಕುಮಾರ್ ‘ದೇವತಾಮನುಷ್ಯ’ರಾದರು ಎಂದು ಸುದೀಪ್ ಗೆ ಸಚಿವ ಕೆ.ಎನ್. ರಾಜಣ್ಣ...

ರಾಜಕೀಯದಿಂದ ದೂರ ಉಳಿದ ರಾಜ್ ಕುಮಾರ್ ‘ದೇವತಾಮನುಷ್ಯ’ರಾದರು ಎಂದು ಸುದೀಪ್ ಗೆ ಸಚಿವ ಕೆ.ಎನ್. ರಾಜಣ್ಣ ಕಿವಿಮಾತು

ದಾವಣಗೆರೆ: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ನಟ ಸುದೀಪ್ ಪ್ರಚಾರ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎನ್. ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ರಾಜನಹಳ್ಳಿ ವಾಲ್ಮೀಕಿ ಪೀಠದಲ್ಲಿ ಮಾತನಾಡಿದ ಸಚಿವರು, ಡಾ. ರಾಜಕುಮಾರ್ ರಾಜಕೀಯಕ್ಕೆ ಬಂದು ಏನು ಬೇಕಾದರೂ ಆಗಬಹುದಿತ್ತು. ರಾಜಕೀಯದಿಂದ ದೂರ ಉಳಿದಿದ್ದಕ್ಕೆ ಅವರು ದೇವತಾ ಮನುಷ್ಯರಾದರು. ಅವರನ್ನು ಎಲ್ಲಾ ಸಮುದಾಯದವರು ದೇವತಾ ಮನುಷ್ಯ ಎಂದು ಗುರುತಿಸುತ್ತಾರೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಿನಿಮಾ ನಟರು ರಾಜಕೀಯಕ್ಕೆ ಬಂದರೆ ಗೌರವ ಕಡಿಮೆಯಾಗುತ್ತದೆ. ಒಂದು ಸಮುದಾಯದ ಅಭ್ಯರ್ಥಿ ಪರ, ವಿರುದ್ಧ ಪ್ರಚಾರ ಮಾಡಿದರೆ ಆ ಸಮುದಾಯದವರೇ ನಿಮ್ಮ ಪರ ಮತ್ತು ವಿರುದ್ಧ ಆಗುತ್ತಾರೆ. ಅದಕ್ಕೆ ಅವಕಾಶ ಕೊಡಬೇಡಿ ಎಂದು ಕಿವಿಮಾತು ಹೇಳಿದ್ದೇನೆ ಎಂದು ನಟ ಸುದೀಪ್ ಅವರಿಗೆ ಸಚಿವ ರಾಜಣ್ಣ ಕಿವಿಮಾತು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular