HomeBusinessಕೆಎಂಎಫ್ ಇತಿಹಾಸದಲ್ಲೇ ಹಾಲು ಸಂಗ್ರಹ, ಮಾರಾಟದಲ್ಲಿ ಸಾರ್ವಕಾಲಿಕ ದಾಖಲೆ

ಕೆಎಂಎಫ್ ಇತಿಹಾಸದಲ್ಲೇ ಹಾಲು ಸಂಗ್ರಹ, ಮಾರಾಟದಲ್ಲಿ ಸಾರ್ವಕಾಲಿಕ ದಾಖಲೆ

ಬೆಂಗಳೂರು: ರಾಜ್ಯದಲ್ಲಿ ಕೆಎಂಎಫ್‌ ಹಾಲು ಸಂಗ್ರಹದಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ. ಉತ್ತಮ ಮಳೆಯಿಂದಾಗಿ ಹೈನೋದ್ಯಮವು ಪುಟಿದೆದ್ದಿದ್ದು, ರಾಜ್ಯದಲ್ಲಿ ದಿನದ ಸರಾಸರಿ ಹಾಲು ಉತ್ಪಾದನೆ ಪ್ರಮಾಣವು ಕೋಟಿ ಲೀಟರ್‌ನ ಸನಿಹಕ್ಕೆ ಬಂದಿದೆ.

ಕೆಎಂಎಫ್‌ನ ಐದು ದಶಕಗಳ ಇತಿಹಾಸದಲ್ಲೇ ಜೂನ್‌ 18ರ ಮಂಗಳವಾರ ಒಂದೇ ದಿನ 98.87 ಲಕ್ಷ ಲೀಟರ್‌ ಹಾಲು ಸಂಗ್ರಹವಾಗಿದೆ. 2022ರ ಜೂನ್‌ 29ರಂದು 94.18 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗಿದ್ದು, ಇದು ಈವರೆಗಿನ ಗರಿಷ್ಠ ದಾಖಲೆಯಾಗಿತ್ತು.

ಕೆಎಂಎಫ್‌ನ ಇತಿಹಾಸದಲ್ಲೇ ಏಪ್ರಿಲ್‌ 11ರಂದು 51.60 ಲಕ್ಷ ಲೀಟರ್‌ ನಂದಿನಿ ಸ್ಯಾಚೆಟ್‌ ಹಾಲು ಮತ್ತು ಏಪ್ರಿಲ್‌ 6 ರಂದು 13.56 ಲಕ್ಷ ಲೀಟರ್‌ ಮೊಸರು ಮಾರಾಟವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular