HomeEntertainment'ಕ್ಲಾಂತ' ಚಿತ್ರದ ಮೆಲೋಡಿ ಹಾಡು ರಿಲೀಸ್

‘ಕ್ಲಾಂತ’ ಚಿತ್ರದ ಮೆಲೋಡಿ ಹಾಡು ರಿಲೀಸ್

ವೈಭವ್ ಪ್ರಶಾಂತ್ ನಿರ್ದೇಶನದ ಎಂ ವಿಘ್ನೇಶ್ ಅಭಿನಯದ ‘ಕ್ಲಾಂತ’ ಚಿತ್ರದ ”ಆ ಕರಿ ಮುಗಿಲು” ಎಂಬ ಮೆಲೋಡಿ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ವಿಜಯ್ ಪ್ರಕಾಶ್ ಮತ್ತು ನಯನ ನಾಗರಾಜ್ ಧ್ವನಿಯಾಗಿದ್ದು, ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರವನ್ನು ಅನುಗ್ರಹ ಪವರ್ ಮೀಡಿಯಾ ಬ್ಯಾನರ್ ನಲ್ಲಿ ಉದಯ ಅಮ್ಮಣ್ಣಯ್ಯ ನಿರ್ಮಾಣ ಮಾಡಿದ್ದು, ಎಂ ವಿಘ್ನೇಶ್ ಸೇರಿದಂತೆ ಸಂಗೀತಾ ಭರತ್ ವೀಣಾಸುಂದರ್, ಸಂಗೀತಾ, ಯುವ, ದೀಪಿಕಾ, ಪ್ರವೀಣ್ ಜೈನ್, ಸ್ವಪ್ನ, ಪಂಚಮಿ ವಾಮಂಜೂರು, ತಿಮ್ಮಪ್ಪ ಕುಲಾಲ್, ರಾಘವೇಂದ್ರ ಕಾರಂತ್, ವಾಮದೇವ ಪುಣಿಂಚತ್ತಾಯ  ತೆರೆ ಹಂಚಿಕೊಂಡಿದ್ದಾರೆ. ಎಸ್ಪಿ ಚಂದ್ರಕಾಂತ್ ಸಂಗೀತ ಸಂಯೋಜನೆ ನೀಡಿದ್ದು, ಪಿ ಆರ್ ಸೌಂದರ್ ರಾಜ್ ಸಂಕಲನ, ರಘು ಆರ್ ಜೆ ನೃತ್ಯ ಸಂಯೋಜನೆ, ವಿನೋದ್ ಎಂ ಸಾಹಸ ನಿರ್ಧೇಶನ, ಮೋಹನ್ ಲೋಕನಾಥನ್ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular