HomeLatest Newsಕೊಹ್ಲಿ ದಾಖಲೆ ಹಿಂದಿಕ್ಕಿದ ಕೆ.ಎಲ್. ರಾಹುಲ್: ಟಿ20ಯಲ್ಲಿ ಅತಿ ವೇಗವಾಗಿ 7 ಸಾವಿರ ರನ್

ಕೊಹ್ಲಿ ದಾಖಲೆ ಹಿಂದಿಕ್ಕಿದ ಕೆ.ಎಲ್. ರಾಹುಲ್: ಟಿ20ಯಲ್ಲಿ ಅತಿ ವೇಗವಾಗಿ 7 ಸಾವಿರ ರನ್

ಲಖನೌ: ಐಪಿಎಲ್ ನಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಹಾಗೂ ಟೀಂ ಇಂಡಿಯಾ ಮಾಜಿ ಉಪನಾಯಕ ಕೆ.ಎಲ್. ರಾಹುಲ್ ಟಿ20 ಮಾದರಿಯಲ್ಲಿ ಅತಿ ವೇಗವಾಗಿ 7 ಸಾವಿರ ರನ್ ಗಳಿಸಿದ ದಾಖಲೆ ಬರೆದಿದ್ದಾರೆ.

ಶನಿವಾರ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೆ.ಎಲ್. ರಾಹುಲ್ 61 ರನ್ ಗಳಿಸಿದ್ದಾರೆ. ಅವರು ಟಿ20 ಆವೃತ್ತಿಯಲ್ಲಿ 7,000 ರನ್ ಪೂರೈಸುವ ಮೂಲಕ ಅತಿ ವೇಗವಾಗಿ ಈ ಸಾಧನೆ ಮಾಡಿದ ಭಾರತೀಯ ಬ್ಯಾಟರ್ ಎನ್ನಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆಯನ್ನು ಕೆ.ಎಲ್. ರಾಹುಲ್ ಅಳಿಸಿ ಹಾಕಿದ್ದಾರೆ. ಕೆ.ಎಲ್. ರಾಹುಲ್ 197 ಇನಿಂಗ್ಸ್ ಗಳಲ್ಲಿ 7 ಸಾವಿರ ರನ್ ಪೂರೈಸಿದ್ದಾರೆ. ವಿರಾಟ್ ಕೊಹ್ಲಿ 212 ಇನಿಂಗ್ಸ್, ಗಳಲ್ಲಿ 7000 ರನ್ ಗಳಿಸಿದ್ದಾರೆ. ಶಿಖರ್ ಧವನ್ 246, ಸುರೇಶ್ ರೈನಾ 251, ರೋಹಿತ್ ಶರ್ಮಾ 258 ಇನ್ನಿಂಗ್ಸ್ ಗಳಲ್ಲಿ 7000 ರನ್ ಗಳಿಸಿದ್ದಾರೆ. ಪಾಕಿಸ್ತಾನದ ಬಾಬರ್ ಅಜಂ 187, ವಿಂಡೀಸ್ ನ ಕ್ರಿಸ್ ಗೇಲ್ 192 ಇನಿಂಗ್ಸ್ ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

 

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular