HomeKarnatakaBIG NEWS : 'ಬುರ್ಖಾ ಧರಿಸಿದ್ರೆ ಮಾತ್ರ ಬಸ್ ಹತ್ತಿಸ್ತೀನಿ' : ವಿದ್ಯಾರ್ಥಿನಿಯರಿಗೆ ಧಮ್ಕಿ ಹಾಕಿದ್ದ...

BIG NEWS : ‘ಬುರ್ಖಾ ಧರಿಸಿದ್ರೆ ಮಾತ್ರ ಬಸ್ ಹತ್ತಿಸ್ತೀನಿ’ : ವಿದ್ಯಾರ್ಥಿನಿಯರಿಗೆ ಧಮ್ಕಿ ಹಾಕಿದ್ದ ಡ್ರೈವರ್ ಅಮಾನತು

ಕಲಬುರಗಿ : ಬುರ್ಖಾ ಧರಿಸಿದರೆ ಮಾತ್ರ ಬಸ್ ಹತ್ತಿಸ್ತೀನಿ ಎಂದು ವಿದ್ಯಾರ್ಥಿನಿಯರಿಗೆ ಧಮ್ಕಿ ಹಾಕಿದ್ದ ಚಾಲಕನನ್ನು ಅಮಾನತು ಮಾಡಲಾಗಿದೆ.

ಕಲಬುರಗಿ ಜಿಲ್ಲೆಯ ಕಮಲಾಪುರ ಬಸ್ ನಿಲ್ದಾಣದಲ್ಲಿ ಘಟನೆ ನಡೆದಿದ್ದು, ಚಾಲಕ ಮತ್ತು ವಿದ್ಯಾರ್ಥಿಗಳು, ಶಿಕ್ಷಕರ ನಡುವಿನ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬುರ್ಖಾ ಧರಿಸಿ ಬಂದರೆ ಮಾತ್ರ ಬಸ್ ಹತ್ತಿಸುತ್ತೇನೆ ಎಂದು ವಿದ್ಯಾರ್ಥಿನಿಗೆ ಚಾಲಕ ಧಮ್ಕಿ ಹಾಕಿದ್ದಾನೆ ಎನ್ನಲಾಗಿತ್ತು. ಜೊತೆಗೆ ನನ್ನನ್ನು ಸೇರಿ ಇತರ ವಿದ್ಯಾರ್ಥಿನಿಗಳನ್ನು ಬಸ್ ಗೆ ಹತ್ತಿಸಿಕೊಳ್ಳಲಿಲ್ಲ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಳು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಕಲಬುರಗಿ ಬಸ್ ಡಿಪೋ-3ರ ಚಾಲಕ ಮೆಹಬೂಬ್ ಪಟೇಲ್ ವಿರುದ್ಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಯಾಣಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ KKRTC ಕಲಬುರಗಿ ವಿಭಾಗದ ಡಿಸಿ ಚಾಲಕನನ್ನ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಂದರ್ಭಿಕ ಚಿತ್ರ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular