HomeEntertainmentರಿಲೀಸ್ ಆಯ್ತು ‘ಪುಷ್ಪ 2’ ಚಿತ್ರದ 'ಕಿಸ್ಸಿಕ್' ಲಿರಿಕಲ್ ಹಾಡು

ರಿಲೀಸ್ ಆಯ್ತು ‘ಪುಷ್ಪ 2’ ಚಿತ್ರದ ‘ಕಿಸ್ಸಿಕ್’ ಲಿರಿಕಲ್ ಹಾಡು

ನಿನ್ನೆ ಚೆನ್ನೈನಲ್ಲಿ ಪುಷ್ಪ ಚಿತ್ರದ ‘ಕಿಸ್ಸಿಕ್’ ಎಂಬ ಲಿರಿಕಲ್ ಹಾಡನ್ನು ತೆಲುಗು ತಮಿಳು ಹಾಗೂ ಹಿಂದಿಯಲ್ಲಿ ಬಿಡುಗಡೆ ಮಾಡಲಾಗಿದ್ದು, ಯೂಟ್ಯೂಬ್ ನಲ್ಲಿ ಭರ್ಜರಿ ವೀಕ್ಷಣೆ ಕಂಡಿದೆ. ಈ ಹಾಡಿನಲ್ಲಿ ಅಲ್ಲು ಅರ್ಜುನ್ ಜೊತೆ ಡ್ಯಾನ್ಸಿಂಗ್ ಕ್ವೀನ್ ಶ್ರೀಲೀಲಾ ಹೆಜ್ಜೆ ಹಾಕಿದ್ದು, ಸುಬ್ಲಹ್ಶಿನಿ ಅವರ ಗಾಯನ ಹಾಗೂ ದೇವಿ ಶ್ರೀ ಪ್ರಸಾದ್ ಸಂಗೀತವಿದೆ. ಇನ್ನುಳಿದಂತೆ ಚಂದ್ರಬೋಸ್ ಅವರ ಸಾಹಿತ್ಯವಿದೆ.

ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಲ್ಲಿ ನವೀನ್ ಯೆರ್ನೇನಿ ಮತ್ತು ವೈ. ರವಿಶಂಕರ್ ನಿರ್ಮಾಣ ಮಾಡಿದ್ದು, ಸುಕುಮಾರ್ ನಿರ್ದೇಶಸಿದ್ದಾರೆ. ಅಲ್ಲು ಅರ್ಜುನ್ ಸೇರಿದಂತೆ ರಶ್ಮಿಕಾ ಮಂದಣ್ಣ, ಧನಂಜಯ್, ರಾವ್ ರಮೇಶ್, ಸುನಿಲ್, ಅನಸೂಯಾ ಭಾರದ್ವಾಜ್ ಮತ್ತು ಅಜಯ್ ಘೋಷ್ ಬಣ್ಣ ಹಚ್ಚಿದ್ದಾರೆ. ನವೀನ್ ನೂಲಿ ಸಂಕಲನ ಹಾಗೂ ಮಿರೋಸ್ಲಾವ್ ಕುಬಾ ಬ್ರೋಜೆಕ್ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular