HomeKarnatakaಮುಡಾ ಹಗರಣ: ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ; ಸರ್ಚ್ ವಾರೆಂಟ್ ಜಾರಿ ಮಾಡದ್ದನ್ನು ಸಚಿವರಿಗೆ ತಿಳಿಸಲಾಗಿದೆ: ಸ್ನೇಹಮಯಿ...

ಮುಡಾ ಹಗರಣ: ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ; ಸರ್ಚ್ ವಾರೆಂಟ್ ಜಾರಿ ಮಾಡದ್ದನ್ನು ಸಚಿವರಿಗೆ ತಿಳಿಸಲಾಗಿದೆ: ಸ್ನೇಹಮಯಿ ಕೃಷ್ಣ ಆರೋಪ

ಮೈಸೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಸಂಸ್ಥೆಯೇ ಅಪರಾಧಿ ಸ್ಥಾನದಲ್ಲಿದೆ ಎಂದು ಆರ್ ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಮತ್ತೊಂದು ಆರೋಪ ಮಾಡಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ನೇಹಮಯಿ ಕೃಷ್ಣ, ಲೋಕಾಯುಕ್ತ ಅಧಿಕಾರಿಗಳ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಜೂನ್ 28ರಂದು ಲೋಕಾಯುಕ್ತ ಕಚೇರಿ ಮೇಲೆ ದಾಳಿ ನಡೆಸಲು ಸರ್ಚ್ ವಾರೆಂಟ್ ಜಾರಿಯಾಗಿದ್ದರೂ ಡಿವೈಎಸ್ ಪಿ ಮಾಲತೇಶ್ ಎಸ್ ಕೆ ಆದೇಶವನ್ನು ಪಾಲಿಸಿಲ್ಲ. ದಾಳಿಗೆ ಮೊದಲೇ ವಿಷಯವನ್ನು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರಿಗೆ ತಿಳಿಸಲಾಗಿದೆ. ಅವರು ಚಾಪರ್ ನಲ್ಲಿ ಬಂದು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular