HomeEntertainmentಡಾನ್ಸರ್ ಕಿಶನ್ ಬೆಳಗಲಿ ಹಾಗೂ ನಟಿ ನಿವೇದಿತಾ ಗೌಡ ವಿರುದ್ಧ ದೂರು ದಾಖಲು

ಡಾನ್ಸರ್ ಕಿಶನ್ ಬೆಳಗಲಿ ಹಾಗೂ ನಟಿ ನಿವೇದಿತಾ ಗೌಡ ವಿರುದ್ಧ ದೂರು ದಾಖಲು

ಬೆಂಗಳೂರು: ಖ್ಯಾತ ಡಾನ್ಸರ್ ಕಿಶನ್ ಬೆಳಗಲಿ ಹಾಗೂ ನಟಿ ನಿವೇದಿತಾ ಗೌಡ ವಿರುದ್ಧ ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಹಳ್ಳಿ ಅರಣ್ಯ ಇಲಾಖೆಗೆ ದೂರು ನೀಡಿರುವ ಘಟನೆ ಬೆಳಕಿಗೆ ಬಂದಿದೆ.

ಕೆಲ ದಿನಗಳಿಂದ ಕಿಶನ್ ಬೆಳಗಲಿ ಹಾಗೂ ನಿವೇದಿತಾ ಅವರ ನವಿಲುಗರಿ ಉಡುಪು ಧರಿಸಿ ಮಾಡಿದ್ದ ರೀಲ್ಸ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಗಮನ ಸೆಳೆದಿತ್ತು. ಇದೀಗ ಈ ರೀಲ್ಸ್ ಗಾಗಿ ಕಿಶನ್ ಹಾಗೂ ನಿವೇದಿತಾ ಅವರು ಧರಿಸಿದ್ದ ನವಿಲುಗರಿ ವಿಚಾರವಾಗಿ ತನಿಖೆ ನಡೆಸುವಂತೆ ಕೋರಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೀಲ್ಸ್ ವಿಡಿಯೋದಲ್ಲಿ ಧರಿಸಿದ್ದ ನವಿಲುಗರಿ ನೈಜವಾಗಿರುವುದೇ? ಅಥವಾ ಕೃತಕ ನವಿಲುಗರಿಯೇ? ಎಂಬುದನ್ನು ತನಿಖೆ ನಡೆಸುವಂತೆ ಹಾಗೂ ಒಂದು ವೇಳೆ ನೈಜ ನವಿಲುಗರಿಗಳಾಗಿದ್ದರೆ ಅವುಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಳ್ಳುವಂತೆ ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ಒತ್ತಾಯಿಸಿದ್ದಾರೆ. ನೈಜ ನವಿಲುಗರಿಗಳಾಗಿದ್ದರೆ ಅವು ಸೊಕ್ಕಿದ್ದಾದರೂ ಹೇಗೆ? ಕಾನೂನು ಪ್ರಕಾಅರ ಇದು ಅಪರಾಧ ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೂರುನ ಹಿನ್ನೆಲೆಯಲ್ಲಿ ಅರಯ ಇಲಾಖೆ ಕೇಸ್ ದಾಖಲಿಸಿಕೊಂಡಿದೆ. ಕಿಶನ್ ಬೆಳಗಲಿ ಹಾಗೂ ನಿವೇದಿತಾ ಹಾಗೂ ಕಸ್ಟ್ಯೂಮ್ ಡಿಸೈನ್ ಮಾಡಿರುವವವರಿಗೂ ಸಂಕಷ್ಟ ಎದುರಾಗಿದೆ.

ಕಿಶನ್ ಬೆಳಗಲಿ ಹಾಗೂ ನಿವೇದಿತಾ, ರವಿಚಂದ್ರನ್ ಅಭಿನಯದ ಕಲಾವಿದ ಚಿತ್ರದ ನವಿಲೇ…ಹೇ ನವಿಲೇ…ಹೆಣ್ಣ ನವಿಲೇ…ನವಿಲೇ..ಹಾಡಿಗೆ ನವಿಲುಗರಿಯ ಉಡುಪು ಧರಿಸಿ ರೀಲ್ಸ್ ಮಾಡಿದ್ದರು. ಈ ರಿಲೀಲ್ಸ್ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಆದರೆ ನವಿಲುಗರಿ ಬಳಿಸಿದ ಕಾರಣಕ್ಕಾಗಿ ಇದೀಗ ದೂರು ದಾಖಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular