HomeLatest News"ನಿಮ್ಮ ಪ್ರೀತಿಯನ್ನು ಲಘುವಾಗಿ ಪರಿಗಣಿಸಿಲ್ಲ" ಫ್ಯಾನ್ಸ್‌ಗೆ ಭಾವುಕ ಪೋಸ್ಟ್ ಹಾಕಿದ ಕಿಚ್ಚ ಸುದೀಪ್:ಜೂನ್ 26ರಿಂದ BRB...

“ನಿಮ್ಮ ಪ್ರೀತಿಯನ್ನು ಲಘುವಾಗಿ ಪರಿಗಣಿಸಿಲ್ಲ” ಫ್ಯಾನ್ಸ್‌ಗೆ ಭಾವುಕ ಪೋಸ್ಟ್ ಹಾಕಿದ ಕಿಚ್ಚ ಸುದೀಪ್:ಜೂನ್ 26ರಿಂದ BRB ಅಖಾಡ ಆರಂಭ

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ನೆಪೋಟಿಸಂ ಕುರಿತು ಬಿರುಸಿನ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಬುಧವಾರ ಬೆಳ್ಳಂಬೆಳಗ್ಗೆ ತಮ್ಮ ಕೋಟ್ಯಂತರ ಅಭಿಮಾನಿಗಳಿಗೆ ಭರ್ಜರಿ ಡಿಜಿಟಲ್ ಧಮಾಕಾ ನೀಡಿದ್ದಾರೆ

ತಮ್ಮ ಬಹುನಿರೀಕ್ಷಿತ ಮಾರ್ಕ್ ಸಿನಿಮಾದ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಬಳಿಕ ಸುದೀಪ್ ಚಿತ್ರರಂಗದಿಂದ ಕೊಂಚ ಬಿಡುವು ಪಡೆದುಕೊಂಡಿದ್ದರು. ಕಿಚ್ಚನ ಮುಂದಿನ ಸಿನಿಮಾ ಯಾವುದು? ಶೂಟಿಂಗ್ ಯಾವಾಗ? ಎಂದು ಸೋಶಿಯಲ್ ಮೀಡಿಯಾದಲ್ಲಿ ದಿನರಾತ್ರಿ ಪ್ರಶ್ನೆ ಮಾಡುತ್ತಿದ್ದ ಅಭಿಮಾನಿಗಳ ಕುತೂಹಲಕ್ಕೆ ಸ್ವತಃ ಸುದೀಪ್ ಅವರೇ ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಹಾಕುವ ಮೂಲಕ ತೆರೆ ಎಳೆದಿದ್ದಾರೆ. ಇಷ್ಟು ದಿನ ಕಾಯುತ್ತಿದ್ದ ಫ್ಯಾನ್ಸ್‌ಗೆ ಈ ಒಂದೇ ಒಂದು ಪೋಸ್ಟ್ ಈಗ ಹಬ್ಬದ ವಾತಾವರಣ ತಂದಿದೆ

ನಿಮ್ಮ ಪ್ರೀತಿಯನ್ನು ನಾನೆಂದೂ ಲಘುವಾಗಿ ಪರಿಗಣಿಸಿಲ್ಲ ಭಾವುಕರಾದ ಕಿಚ್ಚ

ತಮ್ಮ ಪೋಸ್ಟ್‌ನಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಸಖತ್ ಇಂಟರೆಸ್ಟಿಂಗ್ ವಿಷಯ ಹಂಚಿಕೊಂಡಿರುವ ಸುದೀಪ್, “ನಿಮ್ಮೆಲ್ಲರ ಮಾತುಗಳು ನನಗೆ ಕೇಳಿಸುತ್ತಿವೆ. ನನ್ನನ್ನು ನಾನು ಬೇರೆ ಕೆಲಸಗಳಲ್ಲಿ ಬ್ಯುಸಿ ಇಟ್ಟುಕೊಂಡಿದ್ದೆ ಎಂದರೆ, ನಿಮ್ಮ ಪ್ರೀತಿಯನ್ನಾಗಲಿ ಅಥವಾ ಈ ಸುಂದರವಾದ ಚಿತ್ರರಂಗದ ವೃತ್ತಿಜೀವನವನ್ನಾಗಲಿ ನಾನು ಲಘುವಾಗಿ ಪರಿಗಣಿಸಿದ್ದೇನೆ ಎಂದರ್ಥವಲ್ಲ. ನನಗೆ ಸಿನಿಮಾಗಳನ್ನು ಮಾಡುವುದು, ಕಥೆಗಳನ್ನು ಹೇಳುವುದು ಮತ್ತು ನಿಮ್ಮನ್ನು ರಂಜಿಸುವುದಕ್ಕಿಂತ ಹೆಚ್ಚಾಗಿ ನಾನು ಯಾವುದನ್ನೂ ಪ್ರೀತಿಸುವುದಿಲ್ಲ. ನಿಮ್ಮ ಈ ವೇಕ್ ಅಪ್ ಪ್ರಯತ್ನಗಳು ನನ್ನ ಕೆಲಸದ ಮೇಲಿರುವ ನಿಮ್ಮ ಪ್ರೀತಿಯನ್ನು ತೋರಿಸುತ್ತವೆ, ಎಲ್ಲರಿಗೂ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಬ್ರೇಕ್ ತಗೊಂಡಿದ್ದರ ಅಸಲಿ ರಹಸ್ಯ ಇಲ್ಲಿದೆ:

ಇಷ್ಟು ದಿನ ತಾವು ಸಿನಿಮಾದಿಂದ ದೂರ ಉಳಿಯಲು ಇದ್ದ ಅಸಲಿ ಕಾರಣವನ್ನು ಬಿಚ್ಚಿಟ್ಟ ಕಿಚ್ಚ, “ನನ್ನ ಉಪಸ್ಥಿತಿ ಮತ್ತು ಬೆಂಬಲದ ಅಗತ್ಯವಿದ್ದ ಕೆಲವು ವ್ಯಕ್ತಿಗಳು ಮತ್ತು ಪರಿಸ್ಥಿತಿಗಳು ಎದುರಾಗಿದ್ದವು. ಹೀಗಾಗಿ ಈ ಸಣ್ಣ ಬ್ರೇಕ್‌ನಲ್ಲೂ ನಾನು ಒಂದು ಜವಾಬ್ದಾರಿಯುತ ಕೆಲಸದಲ್ಲೇ ಬ್ಯುಸಿಯಾಗಿದ್ದೆ” ಎಂದು ಸ್ಪಷ್ಟಪಡಿಸಿದ್ದಾರೆ.

ಜೂನ್ 26ರಿಂದ BRB ಅಖಾಡ ಆರಂಭ; 4 ಮೆಗಾ ಸ್ಕ್ರಿಪ್ಟ್ ಲಾಕ್

ಇದೇ ಪೋಸ್ಟ್‌ನಲ್ಲಿ ಇಡೀ ಚಿತ್ರರಂಗವೇ ಕಾಯುತ್ತಿದ್ದ ಸಾಲು ಸಾಲು ಬಿಗ್ ಅನೌನ್ಸ್‌ಮೆಂಟ್ ಮಾಡಿರುವ ಕಿಚ್ಚ ಸುದೀಪ್, ಬ್ಯಾಕ್ ಟು ಬ್ಯಾಕ್ ಸಿನಿಮಾಗಳ ಲೈನ್-ಅಪ್ ಪ್ರಕಟಿಸಿದ್ದಾರೆ:

ಬಿಲ್ಲಾ ರಂಗ ಭಾಷ (BRB) ಶೂಟಿಂಗ್ ಫಿಕ್ಸ್: ಇದೇ ತಿಂಗಳು ಜೂನ್ 26ರಿಂದ ಸುದೀಪ್ ಅವರ ಮೋಸ್ಟ್ ಅವೈಟೆಡ್ ‘ಬಿಆರ್‌ಬಿ’ (ಬಿಲ್ಲಾ ರಂಗ ಭಾಷ) ಸಿನಿಮಾದ ಶೂಟಿಂಗ್ ಅಧಿಕೃತವಾಗಿ ಆರಂಭವಾಗಲಿದೆ.

2026ರಲ್ಲೇ ರಿಲೀಸ್ ಧಮಾಕಾ ಬಿಆರ್‌ಬಿ ಚಿತ್ರ ಇದೇ ವರ್ಷ ಅಂದರೆ 2026ರಲ್ಲೇ ಅತ್ಯಂತ ರೋಚಕವಾಗಿ ತೆರೆಗೆ ಬರಲಿದೆ ಎಂದು ಕಿಚ್ಚ ಪಕ್ಕಾ ಹಸಿಬಿಸಿ ಸುದ್ದಿ ನೀಡಿದ್ದಾರೆ.
ಈಗಾಗಲೇ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗಾಗಿ ಭರ್ಜರಿ 4 ಪ್ರಮುಖ ಸ್ಕ್ರಿಪ್ಟ್‌ಗಳನ್ನು (ಕಥೆಗಳನ್ನು) ಸುದೀಪ್ ಲಾಕ್ ಮಾಡಿಕೊಂಡಿದ್ದು, ಶೀಘ್ರದಲ್ಲೇ ಅದರ ಸಂಪೂರ್ಣ ಮಾಹಿತಿ ನೀಡಲಿದ್ದಾರೆ.

ಈ ಇಡೀ ಲೈನ್-ಅಪ್‌ನಲ್ಲಿ ಅಭಿಮಾನಿಗಳಿಗೆ ಅತ್ಯಂತ ಎಕ್ಸೈಟಿಂಗ್ ನ್ಯೂಸ್ ಎಂದರೆ, ಈ ಚಿತ್ರಗಳ ಪೈಕಿ ಸುದೀಪ್ ಅವರೇ ಖುದ್ದಾಗಿ ನಿರ್ದೇಶನ (Direction) ಮಾಡಲಿದ್ದಾರೆ ಹೌದು, ಸೂಪರ್ ಹಿಟ್ ‘ಮಾಣಿಕ್ಯ’ ಚಿತ್ರದ ಬಳಿಕ ಕಿಚ್ಚ ನಟನೆ ಜೊತೆಗೆ ಮಗದೊಮ್ಮೆ ಮೆಗಾ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ವದಂತಿ ಗಾಂಧಿನಗರದಲ್ಲಿ ದಟ್ಟವಾಗಿ ಹರಡಿತ್ತು. ಆ ಇನ್ಸೈಡ್ ಸುದ್ದಿಯನ್ನು ಈಗ ಸ್ವತಃ ಸುದೀಪ್ ಅವರೇ ಖಚಿತಪಡಿಸಿದ್ದು, ಅಭಿಮಾನಿಗಳ ಸಂತೋಷ ದುಪ್ಪಟ್ಟಾಗಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular