HomeLatest Newsಟಾಕ್ಸಿಕ್ ನಲ್ಲಿ ಕಿಯಾರಾ ಅಬ್ಬರ: ಯಶ್ ಚಿತ್ರಕ್ಕಾಗಿ ಬಾಲಿವುಡ್ ಬ್ಯೂಟಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್...

ಟಾಕ್ಸಿಕ್ ನಲ್ಲಿ ಕಿಯಾರಾ ಅಬ್ಬರ: ಯಶ್ ಚಿತ್ರಕ್ಕಾಗಿ ಬಾಲಿವುಡ್ ಬ್ಯೂಟಿ ಪಡೆದ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ

ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಈಗ ಇಡೀ ದೇಶದ ಗಮನ ಸೆಳೆಯುತ್ತಿದೆ. 500 ಕೋಟಿ ಬಜೆಟ್‌ನ ಈ ಬಿಗ್ ಬಜೆಟ್ ಸಿನಿಮಾದಲ್ಲಿ ಬರೋಬ್ಬರಿ ಐದು ಮಂದಿ ನಾಯಕಿಯರಿದ್ದರೂ, ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಮಾತ್ರ ಸಂಭಾವನೆ ವಿಚಾರದಲ್ಲಿ ಹೊಸ ದಾಖಲೆ ಬರೆದಿದ್ದಾರೆ

ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರ ಈಗ ಬಣ್ಣದ ಲೋಕದಲ್ಲಿ ಸಂಚಲನ ಮೂಡಿಸಿದೆ. ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ಬರೋಬ್ಬರಿ 500 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಮಾಸ್ಟರ್‌ಪೀಸ್ ನಿರ್ಮಿಸುತ್ತಿವೆ. ಈಗಾಗಲೇ ಬಿಡುಗಡೆಯಾಗಿರುವ ಪೋಸ್ಟರ್ ಮತ್ತು ಟೀಸರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಕನ್ನಡದ ಕ್ರಶ್ ರುಕ್ಮಿಣಿ ವಸಂತ್, ಲೇಡಿ ಸೂಪರ್‌ಸ್ಟಾರ್ ನಯನತಾರಾ, ಬಾಲಿವುಡ್‌ನ ಹುಮಾ ಖುರೇಷಿ ಮತ್ತು ತಾರಾ ಸುತಾರಿಯಾ ಅಂತಹ ನಟಿಯರ ದಂಡೇ ಇಲ್ಲಿದೆ,ಇಷ್ಟೆಲ್ಲಾ ನಟಿಯರ ನಡುವೆ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಅವರು ಚಿತ್ರದ ವಿಶೇಷ ಆಕರ್ಷಣೆಯಾಗಿ ಮಿಂಚಲಿದ್ದಾರೆ. ಯಶ್ ಮತ್ತು ಕಿಯಾರಾ ಜೋಡಿಯನ್ನು ಪರದೆಯ ಮೇಲೆ ನೋಡಲು ಇಡೀ ಇಂಡಿಯಾ ಕಾಯುತ್ತಿದೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಿಯಾರಾ ವೃತ್ತಿಜೀವನದ ಬಿಗ್ ಡೀಲ್: ಈ ಹಿಂದೆ ಗೇಮ್ ಚೇಂಜರ್ಗಾಗಿ 7 ಕೋಟಿ ಹಾಗೂ ವಾರ್ 2 ಚಿತ್ರಕ್ಕಾಗಿ 13 ಕೋಟಿ ಪಡೆದಿದ್ದ ಕಿಯಾರಾ, ಈಗ ಟಾಕ್ಸಿಕ್ ಚಿತ್ರಕ್ಕಾಗಿ ಬರೋಬ್ಬರಿ 15 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ ಇದು ಅವರ ಕೆರಿಯರ್‌ನಲ್ಲೇ ಹೈಯೆಸ್ಟ್ ಎನ್ನಲಾಗುತ್ತಿದೆ.

ತಬಾಹಿ ಹಾಡಿನ ಹವಾ: ಇಂದು ಬಿಡುಗಡೆಯಾಗಿರುವ ಯಶ್ ಮತ್ತು ಕಿಯಾರಾ ಅವರ ತಬಾಹಿ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದೆ. ಇಬ್ಬರ ರೊಮ್ಯಾಂಟಿಕ್ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

ರಿಲೀಸ್ ಡೇಟ್ ಫಿಕ್ಸ್: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಈ ಸಿನಿಮಾ ಇದೇ ಮಾರ್ಚ್ 19 ರಂದು ಬೆಳ್ಳಿಪರದೆಗೆ ಅಪ್ಪಳಿಸಲಿದೆ.ರಾಕಿ ಬಾಯ್ ಅಂದ್ರೆ ಸುಮ್ನೇನಾ? ಸಿನಿಮಾ ಬಜೆಟ್ 500 ಕೋಟಿ ಅಂದ್ಮೇಲೆ ನಾಯಕಿಯರ ಸಂಭಾವನೆಯೂ ರೇಂಜ್ ಪಕ್ಕಾ ಇರಲೇಬೇಕು ಕಿಯಾರಾ ಅವರ ಈ 15 ಕೋಟಿ ಸಂಭಾವನೆ ಈಗ ಗಾಂಧಿನಗರದಿಂದ ಬಾಲಿವುಡ್‌ವರೆಗೆ ದೊಡ್ಡ ಚರ್ಚೆ ಹುಟ್ಟುಹಾಕಿದೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular