ಲಾಸ್ ಏಂಜಲೀಸ್’ನಿಂದ ನೆವಾರ್ಕ್ ಲಿಬರ್ಟಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊರಟಿದ್ದ ಯುನೈಟೆಡ್ ಫ್ಲೈಟ್ 2127, ಸೋಮವಾರ ಬೆಳಿಗ್ಗೆ ಸ್ಥಳೀಯ ಕಾಲಮಾನ 11:20 ರ ಸುಮಾರಿಗೆ ತುರ್ತು ಭೂಸ್ಪರ್ಶ ಮಾಡಿತು. ವಿಮಾನ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಸೂಚನೆ (Fire Alarm) ಬಂದ ಹಿನ್ನೆಲೆಯಲ್ಲಿ ಪೈಲಟ್‌ಗಳು ಎರಡು ಎಂಜಿನ್‌ಗಳಲ್ಲಿ ಒಂದನ್ನು ಸ್ಥಗಿತಗೊಳಿಸಿ ವಿಮಾನವನ್ನು ಮರಳಿ ನಿಲ್ದಾಣಕ್ಕೆ ತಂದರು.
ಪೈಲಟ್‌ಗಳ ಸಮಯಪ್ರಜ್ಞೆ : ನಮಗೆ ಇನ್ನೂ ಬೆಂಕಿಯ ಸೂಚನೆಗಳು ಸಿಗುತ್ತಿವೆ, ಆದ್ದರಿಂದ ನಾವು ಪ್ರಯಾಣಿಕರನ್ನು ಸ್ಥಳಾಂತರಿಸಬೇಕಾಗಿದೆ” ಎಂದು ಪೈಲಟ್ ಒಬ್ಬರು ವಿಮಾನ ನಿಲ್ದಾಣದ ಅಗ್ನಿಶಾಮಕ ಸಿಬ್ಬಂದಿಗೆ ರೇಡಿಯೋ ಸಂದೇಶ ರವಾನಿಸಿರುವುದು ದಾಖಲಾಗಿದೆ. ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನದಲ್ಲಿ 256 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿ ಒಟ್ಟು 268 ಜನರಿದ್ದರು.
ಸ್ಥಳಾಂತರ ಪ್ರಕ್ರಿಯೆ: ರನ್‌ವೇ ಪಕ್ಕದ ಟ್ಯಾಕ್ಸಿವೇನಲ್ಲಿ ವಿಮಾನವನ್ನು ನಿಲ್ಲಿಸಿದ ತಕ್ಷಣ, ತುರ್ತು ಸ್ಲೈಡ್‌ಗಳು ಮತ್ತು ಮೊಬೈಲ್ ಮೆಟ್ಟಿಲುಗಳ ಮೂಲಕ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. “ಈ ಕಡೆ ಬನ್ನಿ! ಜಂಪ್ ಮಾಡಿ ಮತ್ತು ಸ್ಲೈಡ್ ಆಗಿ! ವಿಮಾನದಿಂದ ದೂರ ಹೋಗಿ! ಬ್ಯಾಗ್‌ಗಳನ್ನು ಅಲ್ಲೇ ಬಿಟ್ಟುಬನ್ನಿ!” ಎಂದು ವಿಮಾನ ಸಿಬ್ಬಂದಿ ಕೂಗುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿವೆ.ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಪ್ರಯಾಣಿಕರು ಪ್ರಾಣ ಉಳಿಸಿಕೊಳ್ಳಲು ಎದ್ದು ಬಿದ್ದು ಓಡಿದ್ದಾರೆ.
ಯಾರಿಗೂ ಗಾಯವಾಗಿಲ್ಲ: ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಪ್ರಯಾಣಿಕರನ್ನು ಬಸ್ ಮೂಲಕ ಟರ್ಮಿನಲ್‌ಗೆ ಕರೆದೊಯ್ಯಲಾಗಿದ್ದು, ನೆವಾರ್ಕ್‌ಗೆ ಹೋಗಲು ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ.
ತನಿಖೆ: ಎಡಭಾಗದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪೈಲಟ್‌ಗಳು ವಿಮಾನದಲ್ಲಿನ ಅಗ್ನಿಶಾಮಕ ಸಾಧನಗಳನ್ನು ಬಳಸಿದರೂ ಬೆಂಕಿಯ ಎಚ್ಚರಿಕೆ ಸೂಚನೆ ನಿಂತಿರಲಿಲ್ಲ. ಈ ಬಗ್ಗೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ತನಿಖೆ ನಡೆಸುತ್ತಿದೆ. ಘಟನೆಯಿಂದಾಗಿ LAX ವಿಮಾನ ನಿಲ್ದಾಣದ ಒಂದು ರನ್‌ವೇಯನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು, ಇದರಿಂದಾಗಿ ಇತರ ವಿಮಾನಗಳ ಸಂಚಾರದಲ್ಲಿ ವಿಳಂಬ ಉಂಟಾಯಿತು.

