HomeKarnatakaಇಂದು ಕೇತುಗ್ರಸ್ತ ಚಂದ್ರಗ್ರಹಣ : ರಾಜ್ಯದ ಪ್ರಮುಖ ದೇವಾಲಯಗಳ ದರ್ಶನದ ಸಮಯ ಬದಲಾವಣೆ

ಇಂದು ಕೇತುಗ್ರಸ್ತ ಚಂದ್ರಗ್ರಹಣ : ರಾಜ್ಯದ ಪ್ರಮುಖ ದೇವಾಲಯಗಳ ದರ್ಶನದ ಸಮಯ ಬದಲಾವಣೆ

ಇಂದು (ಮಾರ್ಚ್ 3) ಸಂಭವಿಸಲಿರುವ ವರ್ಷದ ಮೊದಲ ಚಂದ್ರಗ್ರಹಣ ಹಾಗೂ ಹೋಳಿ ಹುಣ್ಣಿಮೆಯ ಹಿನ್ನೆಲೆಯಲ್ಲಿ ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರಗಳ ಪೂಜಾ ಕೈಂಕರ್ಯ ಮತ್ತು ಸಾರ್ವಜನಿಕ ದರ್ಶನದ ಸಮಯದಲ್ಲಿ ಭಾರಿ ಬದಲಾವಣೆ ಮಾಡಲಾಗಿದೆ.

ಧರ್ಮಸ್ಥಳ, ಬೇಲೂರು ಚನ್ನಕೇಶವ ಮತ್ತು ಬೆಂಗಳೂರಿನ ಪ್ರಮುಖ ದೇವಾಲಯಗಳಾದ ಗವಿಗಂಗಾಧರೇಶ್ವರ, ಬನಶಂಕರಿ ದೇಗುಲಗಳಲ್ಲಿ ಗ್ರಹಣದ ಅವಧಿಯಲ್ಲಿ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತಿದ್ದು, ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಆದರೆ, ಮಲೆ ಮಹದೇಶ್ವರ ಬೆಟ್ಟ, ಮಂತ್ರಾಲಯ ಮತ್ತು ಬಂಡೆ ಮಹಾಂಕಾಳಿ ದೇವಾಲಯಗಳಲ್ಲಿ ಗ್ರಹಣದ ನಡುವೆಯೂ ದೇವರ ದರ್ಶನಕ್ಕೆ ಮುಕ್ತ ಅವಕಾಶ ಕಲ್ಪಿಸಿರುವುದು ವಿಶೇಷವಾಗಿದೆ. ಗ್ರಹಣ ಮುಕ್ತಾಯದ ನಂತರ ಎಲ್ಲಾ ದೇವಾಲಯಗಳಲ್ಲಿ ಸಂಪ್ರೋಕ್ಷಣೆ ಮತ್ತು ಶುದ್ಧೀಕರಣ ಪೂಜೆಗಳು ನೆರವೇರಲಿದ್ದು, ತಡರಾತ್ರಿ ಅಥವಾ ಮರುದಿನದಿಂದ ಎಂದಿನಂತೆ ದರ್ಶನ ಲಭ್ಯವಿರಲಿದೆ.

ದೇವಾಲಯಗಳ ದರ್ಶನ ಸಮಯದ ವಿವರ:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
  • ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಾಲಯ: ಮಧ್ಯಾಹ್ನ 1:30ಕ್ಕೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಸಂಜೆ 7:00 ಗಂಟೆಗೆ ಪುನಃ ಬಾಗಿಲು ತೆರೆಯಲಿದ್ದು, ರಾತ್ರಿ 7:30ರ ನಂತರ ಭಕ್ತರಿಗೆ ದರ್ಶನ ಮತ್ತು ಅನ್ನಪ್ರಸಾದದ ವ್ಯವಸ್ಥೆ ಇರಲಿದೆ.
  • ಮಲೆ ಮಹದೇಶ್ವರ ಬೆಟ್ಟ (ಚಾಮರಾಜನಗರ): “ಮಾದಪ್ಪನಿಗೆ ಗ್ರಹಣ ತಟ್ಟುವುದಿಲ್ಲ” ಎಂಬ ನಂಬಿಕೆಯಂತೆ ಇಲ್ಲಿ ದೇವಾಲಯದ ಬಾಗಿಲು ಬಂದ್ ಆಗುವುದಿಲ್ಲ. ಗ್ರಹಣದ ಅವಧಿಯಲ್ಲೂ ಭಕ್ತರು ಎಂದಿನಂತೆ ದರ್ಶನ ಪಡೆಯಬಹುದು.
  • ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠ: ಗ್ರಹಣದ ಸಮಯದಲ್ಲಿ ರಾಯರ ದರ್ಶನಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಆದರೆ ಪೂಜಾ ವಿಧಿವಿಧಾನಗಳಲ್ಲಿ ಕೆಲವು ಬದಲಾವಣೆಗಳಿರಲಿವೆ.
  • ಬೇಲೂರು ಚನ್ನಕೇಶವಸ್ವಾಮಿ ದೇವಾಲಯ: ಬೆಳಿಗ್ಗೆ 9 ಗಂಟೆಗೆ ಗರ್ಭಗುಡಿ ಬಂದ್ ಮಾಡಲಾಗುತ್ತದೆ. ಸಂಜೆ 7 ಗಂಟೆಯ ನಂತರ ಶುದ್ಧೀಕರಣ ನಡೆಸಿ ಪೂಜೆ ಸಲ್ಲಿಸಲಾಗುತ್ತದೆ. ಪ್ರವಾಸಿಗರಿಗೆ ಹೊರಭಾಗದ ಶಿಲ್ಪಕಲೆ ವೀಕ್ಷಿಸಲು ಅವಕಾಶವಿದೆ.
  • ಬೆಂಗಳೂರು ಹಲಸೂರು ಸೋಮೇಶ್ವರ ದೇವಾಲಯ: ಬೆಳಿಗ್ಗೆ 11 ಗಂಟೆಗೆ ಬಾಗಿಲು ಮುಚ್ಚಲಾಗುತ್ತದೆ. ಸಂಜೆ 7 ಗಂಟೆಗೆ ತೆರೆದು ಶುದ್ಧೀಕರಣ ಮಾಡಿದ ನಂತರ ರಾತ್ರಿ 9 ಗಂಟೆಗೆ ಮುಚ್ಚಲಾಗುತ್ತದೆ. ಗ್ರಹಣದ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ.
  • ಬಂಡೆ ಮಹಾಂಕಾಳಿ ದೇವಾಲಯ: ಇಲ್ಲಿಯೂ ಕೂಡ ಗ್ರಹಣದ ಅವಧಿಯಲ್ಲಿ ಬಾಗಿಲು ಮುಚ್ಚುವುದಿಲ್ಲ. ಬೆಳಿಗ್ಗೆ 6 ರಿಂದ ರಾತ್ರಿ 9ರ ವರೆಗೆ ಸತತವಾಗಿ ದರ್ಶನಕ್ಕೆ ಅವಕಾಶವಿದ್ದು, ಗ್ರಹಣ ದೋಷ ನಿವಾರಣೆಗಾಗಿ ವಿಶೇಷ ಹೋಮಗಳು ನಡೆಯಲಿವೆ.
  • ಬಿಳಿಗಿರಿ ರಂಗನಾಥ ಸ್ವಾಮಿ ದೇವಾಲಯ: ಬೆಳಿಗ್ಗೆ 11 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ.

ಗವಿಗಂಗಾಧರೇಶ್ವರ ದೇವಾಲಯ, ಬೆಂಗಳೂರು

  • ಬೆಳಿಗ್ಗೆ: 6 ಗಂಟೆಯಿಂದ ಜಲಾಭಿಷೇಕ ಮತ್ತು ವಿಶೇಷ ಪೂಜೆಗಳು ನಡೆಯಲಿವೆ.
  • ಬಂದ್: ಬೆಳಿಗ್ಗೆ 9 ಗಂಟೆಗೆ ಗರ್ಭಗುಡಿಯನ್ನು ದರ್ಬೆಯಿಂದ ಬಂಧಿಸಿ ದೇವಾಲಯವನ್ನು ಮುಚ್ಚಲಾಗುತ್ತದೆ.
  • ಸಂಜೆ: ಸಂಜೆ 7:30ಕ್ಕೆ ದೇವಾಲಯವನ್ನು ಮತ್ತೆ ತೆರೆದು ಸ್ವಾಮಿಗೆ ಜಲಾಭಿಷೇಕ ಮಾಡಲಾಗುತ್ತದೆ.
  • ಶುದ್ಧೀಕರಣ: ಬುಧವಾರ ಬೆಳಿಗ್ಗೆ ದೇವಾಲಯದ ಶುಚಿಗೊಳಿಸುವ ಕಾರ್ಯ ನಡೆಯಲಿದೆ.

 ಕಾಡುಮಲ್ಲಿಕಾರ್ಜುನ ದೇವಾಲಯ(ಮಲ್ಲೇಶ್ವರಂ):

  • ದರ್ಶನ: ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ಭಕ್ತರಿಗೆ ದರ್ಶನಕ್ಕೆ ಅವಕಾಶವಿರುತ್ತದೆ.
  • ಬಂದ್: ಮಧ್ಯಾಹ್ನ 12 ಗಂಟೆಗೆ ಗರ್ಭಗುಡಿ ಬಂದ್ ಮಾಡಲಾಗುತ್ತದೆ.
  • ಸಂಜೆ: ಸಂಜೆ 7 ಗಂಟೆಗೆ ಬಾಗಿಲು ತೆರೆದು ಪುಣ್ಯಃಶುಚಿತ್ವ ಕಾರ್ಯ ನಡೆಯಲಿದೆ. ಚಂದ್ರನಿಗೆ ಮತ್ತು ಕಾಡುಮಲ್ಲೇಶ್ವರನಿಗೆ ಕ್ಷೀರಾಭಿಷೇಕ ನಡೆಯಲಿದ್ದು, ರಾತ್ರಿ 9:30ರ ವರೆಗೆ ದರ್ಶನಕ್ಕೆ ಅವಕಾಶವಿರಲಿದೆ.
  • ವಿಶೇಷ: ಮರುದಿನ ‘ನವಗ್ರಹ ಶಾಂತಿ ಹೋಮ’ ನೆರವೇರಲಿದೆ.

3. ಬನಶಂಕರಿ ದೇವಾಲಯ, ಬೆಂಗಳೂರು

  • ಬೆಳಿಗ್ಗೆ: ಬೆಳಿಗ್ಗೆ 5 ಗಂಟೆಯಿಂದಲೇ ಪೂಜೆಗಳು ಆರಂಭವಾಗಲಿವೆ. ಹುಣ್ಣಿಮೆ ಪ್ರಯುಕ್ತ ವಿಶೇಷ ಅಭಿಷೇಕಗಳು ನಡೆದು 8:30ಕ್ಕೆ ಮಹಾಮಂಗಳಾರತಿ ನಡೆಯಲಿದೆ.
  • ಬಂದ್: ಮಧ್ಯಾಹ್ನ 12:30ಕ್ಕೆ ದೇವಾಲಯದ ಬಾಗಿಲು ಹಾಕಲಾಗುತ್ತದೆ.
  • ಸಂಜೆ: ಗ್ರಹಣ ಮುಕ್ತವಾದ ನಂತರ ಸಂಜೆ 7 ಗಂಟೆಗೆ ದೇವಾಲಯ ತೆರೆದು ಶುದ್ಧಿ ಕಾರ್ಯ ಮತ್ತು ವಿಶೇಷ ಪೂಜೆ ನೆರವೇರಿಸಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.

ಗ್ರಹಣದ ವಿಶೇಷತೆ: ಈ ಬಾರಿ ಚಂದ್ರಗ್ರಹಣವು ಹೋಳಿ ಹುಣ್ಣಿಮೆಯ ದಿನದಂದು ಸಂಭವಿಸುತ್ತಿದ್ದು, ಇದನ್ನು ‘ಬ್ಲಡ್ ಮೂನ್’ ಎನ್ನಲಾಗುತ್ತದೆ. ಜ್ಯೋತಿಷಿಗಳ ಪ್ರಕಾರ ಸಿಂಹ ರಾಶಿಯವರಿಗೆ ಮತ್ತು ಇತರ ಕೆಲವು ರಾಶಿಯವರಿಗೆ ಈ ಗ್ರಹಣದ ಪ್ರಭಾವ ಹೆಚ್ಚಿರಲಿದೆ ಎಂದು ವರದಿಯಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular