HomeKarnatakaBIG NEWS: ವಿದೇಶದಿಂದ ಅಕ್ರಮವಾಗಿ ಹಾವುಗಳ ಸಾಗಾಟ; ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಆರೋಪಿ

BIG NEWS: ವಿದೇಶದಿಂದ ಅಕ್ರಮವಾಗಿ ಹಾವುಗಳ ಸಾಗಾಟ; ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಆರೋಪಿ

ಬೆಂಗಳೂರು: ವಿದೇಶದಿಂದ ಅಕ್ರಮವಾಗಿ ಹಾವುಗಳನ್ನು ಸಾಗಿಸುತ್ತಿದ್ದ ಪ್ರಯಾಣಿಕನನ್ನು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಕೋಬ್ರಾ ಹಾವನನ್ನು ಬಾಟಲ್ ನಲ್ಲಿಟ್ಟುಕೊಂಡು ವಿದೇಶದಿಂದ ಪ್ರಯಾಣಿಕನೊಬ್ಬ ಆಗಮಿಸಿದ್ದ. ಬ್ಯಾಂಕಾಕ್ ನ ಡಾನ್ ಮಿಯಾಂಗ್ ಏರ್ ಪೋರ್ಟ್ ನಿಂದ ಬೆಂಗಳೂರು ಏರ್ ಪೋರ್ಟ್ ಗೆ ಏರ್ ಏಷ್ಯಾ ವಿಮಾನದಲ್ಲಿ ಆಗಮಿಸಿದ್ದ.

ಏರ್ ಪೋರ್ಟ್ ನಲ್ಲಿ ತಪಾಸಣೆ ವೇಳೆ ಪ್ರಯಾಣಿಕ ಸಿಕ್ಕಿ ಬಿದ್ದಿದ್ದಾನೆ. ಬ್ಯಾಗ್ ನಲ್ಲಿ ಬ್ಯಾಟಲ್ ನಲ್ಲಿ ಕೋಬ್ರಾ ಹಾವನ್ನು ಇಟ್ಟು ಸಾಗಿಸುತ್ತಿರುವುದು ಪತ್ತೆಯಾಗಿದೆ. ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಲು ಪುರುಷೋತ್ತಮ್ ಎಂಬ ಪ್ರಯಾಣಿಕನನ್ನು ವಶಕ್ಕೆ ಪಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಾಣಿಗಳು, ಸರಿಸ್ರಪಗಳ ಸಾಗಾಟ ನಿಷೇಧ ಹಿನ್ನೆಲೆಯಲ್ಲಿ ಬಾಟಲ್ ನಲ್ಲಿದ್ದ ಹಾವಿನ ಸಮೇತ ಪ್ರಯಾಣಿಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular