HomeLatest Newsಒಂದೇ ಒಂದು ಗ್ರಾಂ ಚಿನ್ನವಿಲ್ಲ, ಆರ್ಟಿಫಿಶಿಯಲ್ ಜ್ಯುವೆಲ್ಲರಿಯೂ ಇಲ್ಲ ಕೇರಳದ ಈ ನವವಧುವಿನ ಸಿಂಪ್ಲಿಸಿಟಿಗೆ ಫಿದಾ...

ಒಂದೇ ಒಂದು ಗ್ರಾಂ ಚಿನ್ನವಿಲ್ಲ, ಆರ್ಟಿಫಿಶಿಯಲ್ ಜ್ಯುವೆಲ್ಲರಿಯೂ ಇಲ್ಲ ಕೇರಳದ ಈ ನವವಧುವಿನ ಸಿಂಪ್ಲಿಸಿಟಿಗೆ ಫಿದಾ ಆದ ನೆಟ್ಟಿಗರು

ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ದಿನವೂ ನೂರಾರು ಸಂಗತಿಗಳು ಟ್ರೆಂಡ್ ಆಗುತ್ತಿರುತ್ತವೆ. ಅವುಗಳ ನಡುವೆ ಈಗ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ಕೇರಳದ ಒಂದು ಮದುವೆ ವಿಡಿಯೋ ಇಡೀ ದೇಶದ ಗಮನ ಸೆಳೆದಿದೆ.ಸದ್ಯ ಅಂತಹದ್ದೇ ಒಂದು ಅಪರೂಪದ ಮದುವೆಯ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಸದ್ದು ಮಾಡುತ್ತಿದ್ದು, ದೇಶಾದ್ಯಂತ ವ್ಯಾಪಕ ಮೆಚ್ಚುಗೆ ಗಳಿಸುತ್ತಿದೆ

ಒಂದು ಕಿವಿಯೋಲೆಯೂ ಇಲ್ಲದೆ ಹಸೆಮಣೆ ಏರಿದ ವಧು

ಸಾಮಾನ್ಯವಾಗಿ ಭಾರತೀಯ ಮದುವೆಗಳಲ್ಲಿ ಅದರಲ್ಲೂ ಕರಾವಳಿ ಮತ್ತು ಕೇರಳದ ಭಾಗದಲ್ಲಿ ಮದುವೆ ಎಂದರೆ ವಧುವನ್ನು ಚಿನ್ನದ ಒಡವೆಗಳಿಂದ ಮುಚ್ಚಿಡಲಾಗುತ್ತದೆ. ನೂರಾರು ಗ್ರಾಂ ಚಿನ್ನದ ಆಭರಣಗಳನ್ನು ಧರಿಸುವುದು ಅಲ್ಲಿನ ಸಂಪ್ರದಾಯ. ಆದರೆ, ಈಗ ವೈರಲ್ ಆಗಿರುವ ವಿಡಿಯೋದಲ್ಲಿನ ಯುವತಿ ಒಂದೇ ಒಂದು ಗ್ರಾಂ ಚಿನ್ನ ಕೂಡ ಧರಿಸದೆ ಮದುವೆಯಾಗಿದ್ದಾರೆ. ಅಷ್ಟೇ ಏಕೆ, ಚಿನ್ನದ ಬದಲು ಆರ್ಟಿಫಿಶಿಯಲ್ ಜ್ಯುವೆಲ್ಲರಿ (Artificial Jewellery) ಕೂಡ ಹಾಕಿಲ್ಲ. ಕನಿಷ್ಠ ಒಂದು ಕಿವಿಯೋಲೆಯನ್ನೂ ಧರಿಸದೆ ಈ ಯುವತಿ ಹಸೆಮಣೆ ಏರಿದ್ದಾರೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಂದದ ಕೆಂಪು ಬಣ್ಣದ ಸೀರೆ ಉಟ್ಟು, ಗ್ರ್ಯಾಂಡ್ ವರ್ಕ್ ಇರುವ ರೆಡ್ ಬ್ಲೌಸ್ ಹಾಗೂ ಕೆಂಬಣ್ಣದ ದುಪಟ್ಟಾವನ್ನು ಧರಿಸಿ, ಸುಂದರವಾದ ಹೇರ್ ಸ್ಟೈಲ್ ಮತ್ತು ಮೇಕಪ್‌ನೊಂದಿಗೆ ವಧು ಕಂಗೊಳಿಸುತ್ತಿದ್ದಾರೆ. ಆದರೆ ಮೈಮೇಲೆ ಯಾವುದೇ ಆಭರಣಗಳಿಲ್ಲ. ಇವರ ಈ ನೋ ಗೋಲ್ಡ್, ನೋ ಜ್ಯುವೆಲ್ಲರಿ (No Gold, No Jewellery) ವೆಡ್ಡಿಂಗ್ ಕನ್ಸೆಪ್ಟ್‌ಗೆ ಇಂದಿನ ಜೆನ್-ಝೀ (Gen Z) ತಲೆಮಾರು ಅಂತೂ ಫುಲ್ ಫಿದಾ ಆಗಿದ್ದು, ಜೈ ಎಂದಿದ್ದಾರೆ.

View this post on Instagram

A post shared by Rilwan Husain (@rilwanhusain)

ಗಗನಕ್ಕೇರಿರುವ ಚಿನ್ನದ ಬೆಲೆಯ ಮಧ್ಯೆ ಮಾದರಿ ನಡೆ

ಕಳೆದ ಕೆಲವು ತಿಂಗಳುಗಳಿಂದ ಚಿನ್ನದ ಬೆಲೆ ದಿಢೀರ್ ಏರಿಕೆಯಾಗಿ, ಸದ್ಯ ಸಾಮಾನ್ಯ ಜನರಿಗೆ ಬಂಗಾರ ಕೊಳ್ಳುವುದು ದೊಡ್ಡ ಹೊರೆಯಾಗಿದೆ. ಭಾರತೀಯ ಮದುವೆಗಳಲ್ಲಿ ಬಹುತೇಕ ಎಲ್ಲಾ ಧರ್ಮ ಮತ್ತು ಸಮುದಾಯಗಳಲ್ಲಿ ಮದುವೆಯ ಸಮಯದಲ್ಲಿ ಹೆಣ್ಣಿಗೆ ಚಿನ್ನ ನೀಡುವುದು ಒಂದು ಅಲಿಖಿತ ನಿಯಮದಂತಾಗಿದೆ. ಕೇರಳದ ಮುಸ್ಲಿಂ ಸಮುದಾಯದಲ್ಲೂ ಹೆಣ್ಣನ್ನು ಮದುವೆ ಮಾಡಿಕೊಡುವಾಗ ರಾಶಿ ರಾಶಿ ಚಿನ್ನ ನೀಡುವ ಪದ್ಧತಿ ಇದೆ. ಇಂತಹ ಸಂದರ್ಭದಲ್ಲಿ ಆಡಂಬರಕ್ಕೆ ಬ್ರೇಕ್ ಹಾಕಿ, ಒಂದೇ ಒಂದು ಗ್ರಾಂ ಚಿನ್ನವಿಲ್ಲದೆ ಮದುವೆಯಾದ ಈ ಯುವತಿಯ ನಡೆ ಎಲ್ಲರಿಗೂ ಮಾದರಿಯಾಗಿದೆ.

ಹೆಚ್ಚಾಗಲಿ ಇಂಥಹ ಪಾಸಿಟಿವ್ ಟ್ರೆಂಡ್‌ಗಳು

ದಿನಬೆಳಗಾದರೆ ಲಕ್ಷಾಂತರ ರೂಪಾಯಿ ಖರ್ಚು ಮಾಡುವ, ದುಬಾರಿ ಪ್ರಿ-ವೆಡ್ಡಿಂಗ್ ಶೂಟ್‌ಗಳ ಟ್ರೆಂಡ್‌ಗಳೇ ವೈರಲ್ ಆಗುವ ಈ ದಿನಗಳಲ್ಲಿ, ಇಂತಹ ಒಂದು ಸರಳ ನಡೆ ಸಮಾಜಕ್ಕೆ ತುಂಬಾ ಅಗತ್ಯವಿದೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. “ನಿಜವಾಗಿಯೂ ಟ್ರೆಂಡ್ ಆಗಬೇಕಾದ ಕಂಟೆಂಟ್ ಇದು. ಪ್ರತಿಯೊಬ್ಬರೂ ನೋಡಿ ಅಳವಡಿಸಿಕೊಳ್ಳಬೇಕಾದ ವಿಚಾರ” ಎಂದು ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೇವಲ ವಧು ಮಾತ್ರವಲ್ಲದೆ, ಆಕೆಯ ಈ ನಿರ್ಧಾರಕ್ಕೆ ಬೆಂಬಲ ನೀಡಿದ ಪೋಷಕರು ಮತ್ತು ವರನ ಕುಟುಂಬಕ್ಕೂ ಇಂಟರ್ನೆಟ್‌ನಲ್ಲಿ ಹಾರೈಕೆಗಳ ಮಹಾಪೂರವೇ ಹರಿದುಬರುತ್ತಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular