HomeIndiaBREAKING: ಕಂದಕಕ್ಕೆ ಉರುಳಿದ ಬಸ್; ಐವರಿಗೆ ಗಂಭೀರ ಗಾಯ

BREAKING: ಕಂದಕಕ್ಕೆ ಉರುಳಿದ ಬಸ್; ಐವರಿಗೆ ಗಂಭೀರ ಗಾಯ

ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಒಂದು ಕಂದಕಕ್ಕೆ ಉರುಳಿದ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ನಡೆದಿದೆ.

ತಿರುವನಂತಪುರಂನಿಂದ ಮುನ್ನಾರ್ ಗೆ ತೆರಳುತ್ತಿದ್ದ ಈ ಬಸ್ಸು ಇಂದು ಬೆಳಗ್ಗೆ 8:00 ಗಂಟೆ ಸುಮಾರಿಗೆ ಇಡುಕ್ಕಿ ಜಿಲ್ಲೆಯ ನೆರಿಯಮಂಗಲಂ ಬಳಿ ಕಂದಕಕ್ಕೆ ಉರುಳಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದರಿಂದ ಪ್ರಯಾಣಿಕರು ಗಾಯಗೊಂಡಿದ್ದು, ಈ ಪೈಕಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಅತಿ ವೇಗವಾಗಿ ಬರುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular