HomeIndiaಚಲಿಸುತ್ತಿದ್ದ ಆಟೋದಿಂದ ಉಗುಳಿದ ಬಾಲಕನ ಶರ್ಟ್ ತೆಗೆದು ಸ್ವಚ್ಛಗೊಳಿಸುವಂತೆ ಚಾಲಕ ಬಲವಂತ

ಚಲಿಸುತ್ತಿದ್ದ ಆಟೋದಿಂದ ಉಗುಳಿದ ಬಾಲಕನ ಶರ್ಟ್ ತೆಗೆದು ಸ್ವಚ್ಛಗೊಳಿಸುವಂತೆ ಚಾಲಕ ಬಲವಂತ

ವಡಕರ: ವಾಹನ ಕ್ಲೀನ್ ಮಾಡಲು 5 ವರ್ಷದ ಬಾಲಕನ ಶರ್ಟ್ ತೆಗೆಯುವಂತೆ ಒತ್ತಾಯಿಸಿದ ಆರೋಪದ ಮೇಲೆ ಆಟೋರಿಕ್ಷಾ ಚಾಲಕನನ್ನು ಕೇರಳದ ವಡಕರ ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ.

ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ 5 ವರ್ಷ ಬಾಲಕ ರಸ್ತೆಗೆ ಉಗುಳಿದ್ದು, ಆಟೋ ಚಲಿಸುತ್ತಿದ್ದರಿಂದ ವಾಹನದ ಹಿಂಬದಿಯ ಮೇಲೆ ಬಿದ್ದಿದೆ. ಸಿಟ್ಟಿಗೆದ್ದ ಚಾಲಕ ಆಟೋ ನಿಲ್ಲಿಸಿ ಬಾಲಕ ತಾನು ತೊಟ್ಟಿದ್ದ ಶರ್ಟ್ ಬಳಸಿ ಸ್ಥಳವನ್ನು ಸ್ವಚ್ಛಗೊಳಿಸಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮರುದಿನ ಮಗುವಿನ ತಾಯಿ ಆಟೋರಿಕ್ಷಾ ಚಾಲಕನನ್ನು ಕರೆದು ಸಂಭಾಷಣೆಯನ್ನು ರೆಕಾರ್ಡ್ ಮಾಡಿದಾಗ ಘಟನೆ ಬೆಳಕಿಗೆ ಬಂದಿದೆ. ತನ್ನ ವಾಹನವನ್ನು ಸ್ವಚ್ಛಗೊಳಿಸುವಂತೆ ಮಗುವಿಗೆ ಬಲವಂತ ಮಾಡಿದ್ದ ಬಗ್ಗೆ ಚಾಲಕ ತಪ್ಪೊಪ್ಪಿಕೊಂಡ ವಿಡಿಯೊದಲ್ಲಿನ ಭಾಗವನ್ನು ವಡಕರದಲ್ಲಿ ವಾಟ್ಸಾಪ್‌ ನಲ್ಲಿ ಹಂಚಿಕೊಳ್ಳಲಾಗಿದೆ. ವಿಡಿಯೋ ವೈರಲ್ ಆದ ನಂತರ ಮತ್ತು ಚಾಲಕನ ವಿರುದ್ಧ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾದ ನಂತರ ಪೊಲೀಸರು ಅವನನ್ನು ಕರೆದು ವಿಚಾರಿಸಿದ್ದಾರೆ.

ಇದೇ ವೇಳೆ ತಾಯಿ ಕೂಲ್ ಆಗಿ ಡ್ರೈವರ್ ಮಾಡಿದ್ದು ತಪ್ಪಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಹುಡುಗನಿಗೆ ಕೇವಲ 5 ವರ್ಷ ಮತ್ತು ಅವನ ವಯಸ್ಸಿನ ಮಕ್ಕಳು ಅಂತಹ ತಪ್ಪುಗಳನ್ನು ಮಾಡುವ ಸಾಧ್ಯತೆಯಿದೆ ಎಂದು ಅವಳು ಚಾಲಕನಿಗೆ ಹೇಳಿದ್ದಾಳೆ. ಶರ್ಟ್ ತೆಗೆದು ಸ್ಥಳವನ್ನು ಸ್ವಚ್ಛಗೊಳಿಸುವಂತೆ ಕೇಳುವ ಬದಲು ಚಾಲಕನು ತನ್ನ ವಾಹನವನ್ನು ಸ್ವಚ್ಛಗೊಳಿಸಲು ಬರುವಂತೆ ಹೇಳಬಹುದಿತ್ತು ಎಂದು ಮಹಿಳೆ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಚಾಲಕ ಮಕ್ಕಳಿಗೆ ಇಂತಹ ವಿಷಯಗಳನ್ನು ಹೇಳಿಕೊಡಬೇಕು ಎಂಬ ಮಾತು ಕೇಳಿಬಂದಿದೆ.

ಮಗುವಿನ ಕುಟುಂಬದವರು ದೂರು ದಾಖಲಿಸದ ಕಾರಣ ಆಟೋರಿಕ್ಷಾ ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿಲ್ಲ. ಶಾಲಾ ಅಧಿಕಾರಿಗಳು ಆ ವ್ಯಕ್ತಿಯನ್ನು ಮಗುವಿನ ಮನೆಗೆ ಕರೆದೊಯ್ದು ಕುಟುಂಬದವರಲ್ಲಿ ಕ್ಷಮೆಯಾಚಿಸಿದರು ಎಂದು ಹೇಳಲಾಗಿದೆ.

ಕುಟುಂಬದಿಂದ ಇಬ್ಬರು ಮಕ್ಕಳನ್ನು ಶಾಲೆಗೆ ಕರೆದೊಯ್ಯುವ ಜವಾಬ್ದಾರಿಯನ್ನು ಚಾಲಕನಿಗೆ ವಹಿಸಲಾಗಿದ್ದು, ಅವನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ್ದರಿಂದ ಮಗುವಿನ ಪೋಷಕರು ದೂರು ಕೊಟ್ಟಿಲ್ಲ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular