HomeIndiaBIG NEWS: ಕೇದಾರನಾಥ ಯಾತ್ರೆಗೆ ತೆರಳಿದ್ದ ಕೊಪ್ಪಳದ ಅರ್ಚಕ ಹೃದಯಾಘಾತದಿಂದ ದುರ್ಮರಣ

BIG NEWS: ಕೇದಾರನಾಥ ಯಾತ್ರೆಗೆ ತೆರಳಿದ್ದ ಕೊಪ್ಪಳದ ಅರ್ಚಕ ಹೃದಯಾಘಾತದಿಂದ ದುರ್ಮರಣ

ಋಷಿಕೇಶ: ಕೇದಾರನಾಥ ಯಾತ್ರೆಗೆ ತೆರಳಿದ್ದ ಕೊಪ್ಪಳ ಮೂಲದ ಅರ್ಚಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.

ಕೊಪ್ಪಳ ನಿವಾಸಿ ಸಿದ್ದಯ್ಯ ಹಿರೇಮಠ (32) ಮೃತ ದುರ್ದೈವಿ. ಜೂನ್ 10ರಂದು ಅರ್ಚಕ ಸಿದ್ದಯ್ಯ ಕೇದಾರನಾಥ ಯಾತ್ರೆಗೆ ತೆರಳಿದ್ದರು. ಹತ್ತು ದಿನಗಳಿಂದ ಧಾರ್ಮಿಕ ಸ್ಥಳಗಳ ದರ್ಶನ ಪಡೆಯುತ್ತಿದ್ದರು. ಕೇದಾರನಾಥ ದರ್ಶನ ಮುಗಿಸಿ ಋಷಿಕೇಶಗೆ ಬಂದಾಗ ಸಿದ್ದಯ್ಯ ಅವರಿಗೆ ಹೃದಯಾಘಾತವಾಗಿದೆ. ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.

ಸಿದ್ದಯ್ಯ ಹಿರೇಮಠ ಈ ಮೊದಲು ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಅರ್ಚಕರಾಗಿದ್ದರು. ಪ್ರಸ್ತುತ ಕೊಪ್ಪಳದ ಶಿವರಾತ್ರೇಶ್ವರ ದೇವಸ್ಥಾನದಲ್ಲಿ ಅರ್ಚಕರಾಗಿದ್ದರು ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular