ಬೆಂಗಳೂರು: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಪ್ರಕಟಿಸಿದೆ.
ಈ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳಿಗೆ ಎಲ್ಲ ನಾಲ್ಕು ಚಾಯ್ಸ್ ಆಯ್ಕೆಗೂ ಅವಕಾಶ ನೀಡಲಾಗಿದೆ.
ಹಂಚಿಕೆಯಾಗಿರುವ ಸೀಟು ಇಷ್ಟ ಆಗಿರುವವರು ಚಾಯ್ಸ್-1 ಆಯ್ಕೆ ಮಾಡಿಕೊಂಡು ಕಾಲೇಜಿನಲ್ಲಿ ಪ್ರವೇಶ ಪಡೆಯಲು ಸೆ.4 ಕೊನೆ ದಿನ. ಚಾಯ್ಸ್ ಆಯ್ಕೆಗೆ ಸೆ.2 ಹಾಗೂ ಶುಲ್ಕ ಪಾವತಿಸಲು ಸೆ.3ರವರೆಗೆ ಅವಕಾಶ ನೀಡಲಾಗಿದೆ.
ಸೀಟು ಅಪ್ ಗ್ರೆಡೇಷನ್ ಗೆ ಹೋಗುವವರು ಚಾಯ್ಸ್-2 ಆಯ್ಕೆ ಮಾಡಿಕೊಳ್ಳಬಹುದು. ಸಿಕ್ಕಿರುವ ಸೀಟು ಬೇಡವೇ ಬೇಡ ಎನ್ನುವವರು ಚಾಯ್ಸ್-3 ಆಯ್ಕೆ ಮಾಡಿಕೊಂಡು ಮುಂದಿನ ಸುತ್ತಿನಲ್ಲಿ ಭಾಗವಹಿಸಬಹುದು. ಕೌನ್ಸೆಲಿಂಗ್ ಪ್ರಕ್ರಿಯೆಯಿಂದ ಹೊರ ಹೋಗಲು ಇಚ್ಛಿಸುವವರು ಚಾಯ್ಸ್- 4 ಆಯ್ಕೆ ಮಾಡಿಕೊಳ್ಳಬಹುದು.
ಚಾಯ್ಸ್ ಆಯ್ಕೆ ಸಂದರ್ಭದಲ್ಲಿ ಎಚ್ಚರ ವಹಿಸಲು ಮತ್ತು ಪೋಷಕರ ಜತೆ ಸಮಾಲೋಚನೆ ಮಾಡಿಯೇ ತೀರ್ಮಾನಿಸಿ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
#UGNEET-26: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆ ಅಂತಿಮ ಫಲಿತಾಂಶವನ್ನು #KEA ಪ್ರಕಟಿಸಿದೆ.
ಈ ಸುತ್ತಿನಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳಿಗೆ ಎಲ್ಲ ನಾಲ್ಕು ಚಾಯ್ಸ್ ಆಯ್ಕೆಗೂ ಅವಕಾಶ ನೀಡಲಾಗಿದೆ.
ಹಂಚಿಕೆಯಾಗಿರುವ ಸೀಟು ಇಷ್ಟ ಆಗಿರುವವರು ಚಾಯ್ಸ್-1 ಆಯ್ಕೆ ಮಾಡಿಕೊಂಡು… pic.twitter.com/yemUH3aYRQ
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) August 28, 2026

