HomeKarnatakaKEA ಮೂಲಕ 4,699 ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್: ಇಲಾಖೆವಾರ ಹುದ್ದೆಗಳ ಸಂಪೂರ್ಣ ವಿವರ...

KEA ಮೂಲಕ 4,699 ಹುದ್ದೆಗಳ ಭರ್ತಿಗೆ ಸರ್ಕಾರದ ಗ್ರೀನ್ ಸಿಗ್ನಲ್: ಇಲಾಖೆವಾರ ಹುದ್ದೆಗಳ ಸಂಪೂರ್ಣ ವಿವರ ಇಲ್ಲಿದೆ

ಬೆಂಗಳೂರು: ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ಖಾಲಿ ಇರುವ 4,699 ಹುದ್ದೆಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಸಿದ್ಧತೆ ನಡೆಸಿದೆ. ಪದವಿ, ಪಿಯುಸಿ ಹಾಗೂ ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿಯಲ್ಲಿ ಅವಕಾಶ ಸಿಗಲಿದೆ.

ಈ ಸಂಬಂಧ ಅಧಿಕೃತ ಅಧಿಸೂಚನೆ ಸೆಪ್ಟೆಂಬರ್‌ನಲ್ಲಿ ಪ್ರಕಟವಾಗುವ ಸಾಧ್ಯತೆ ಇದ್ದು, ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಲಿಖಿತ ಪರೀಕ್ಷೆ ನಡೆಸಲು ಕೆಇಎ ತೀರ್ಮಾನಿಸಿದೆ. ಅಧಿಸೂಚನೆ ಪ್ರಕಟವಾದ ಬಳಿಕ ಹುದ್ದೆಗಳ ಸಂಖ್ಯೆ, ಅರ್ಹತೆ, ವಯೋಮಿತಿ, ಅರ್ಜಿ ಸಲ್ಲಿಕೆ ದಿನಾಂಕ ಸೇರಿದಂತೆ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ.

ಒಟ್ಟು 4,699 ಹುದ್ದೆಗಳು

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೇಮಕಾತಿಯಲ್ಲಿ ಪದವಿ ಮಟ್ಟದ 2,421 ಹುದ್ದೆಗಳು, ಪಿಯುಸಿ ಮಟ್ಟದ 2,062 ಹುದ್ದೆಗಳು ಹಾಗೂ ಡಿಪ್ಲೊಮಾ ಮಟ್ಟದ 216 ತಾಂತ್ರಿಕ ಹುದ್ದೆಗಳು ಸೇರಿವೆ.

ಪದವಿ ಮಟ್ಟದ ತಾಂತ್ರಿಕೇತರ ಹುದ್ದೆಗಳು: RPC – 1,912 KK – 509 ಒಟ್ಟು – 2,421

ಪಿಯುಸಿ ಮಟ್ಟದ ತಾಂತ್ರಿಕೇತರ ಹುದ್ದೆಗಳು: RPC – 1,548 KK – 514 ಒಟ್ಟು – 2,062

ಡಿಪ್ಲೊಮಾ ಮಟ್ಟದ ತಾಂತ್ರಿಕ ಹುದ್ದೆಗಳು: RPC – 185 KK – 31 ಒಟ್ಟು – 216

ಒಟ್ಟು ಹುದ್ದೆಗಳು: RPC – 3,645 KK – 1,054 ಒಟ್ಟು – 4,699

ಪದವೀಧರರಿಗೆ ಯಾವ ಹುದ್ದೆಗಳು?

ಪದವಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ವಿವಿಧ ಇಲಾಖೆಗಳ ಹಲವು ಹುದ್ದೆಗಳು ಲಭ್ಯವಿವೆ. ಪ್ರಮುಖ ಹುದ್ದೆಗಳ ಪೈಕಿ:

ಲೆಕ್ಕ ಸಹಾಯಕರು – 502

ವಾರ್ಡನ್ / ನಿಲಯ ಮೇಲ್ವಿಚಾರಕರು – 705ಕ್ಕೂ ಹೆಚ್ಚು

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-1 – 184

ಪ್ರಥಮ ದರ್ಜೆ ಸಹಾಯಕರು – 500ಕ್ಕೂ ಹೆಚ್ಚು

ವಾಣಿಜ್ಯ ತೆರಿಗೆ ಪರಿವೀಕ್ಷಕರು – 50

ಸಚಿವಾಲಯ ಸಹಾಯಕರು – 42

ಸಹಕಾರ ಸಂಘಗಳ ಲೆಕ್ಕಪರಿಶೋಧಕರು – 502

ಪಿಯುಸಿ ಅಭ್ಯರ್ಥಿಗಳಿಗೂ ಅವಕಾಶ

ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಕೂಡ ಹಲವು ಹುದ್ದೆಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ:

ದ್ವಿತೀಯ ದರ್ಜೆ ಸಹಾಯಕರು, ವಾಣಿಜ್ಯ ತೆರಿಗೆ ಇಲಾಖೆ – 590

ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಗ್ರಾಮೀಣಾಭಿವೃದ್ಧಿ ಸಹಾಯಕ ಗ್ರೇಡ್-2 – 322

ದ್ವಿತೀಯ ದರ್ಜೆ ಸಹಾಯಕರು, ಗ್ರಾಮೀಣಾಭಿವೃದ್ಧಿ ಇಲಾಖೆ – 309

ಕಿರಿಯ ಲೆಕ್ಕ ಸಹಾಯಕರು – 223

ಡಿಪ್ಲೊಮಾ ಅಭ್ಯರ್ಥಿಗಳಿಗೆ 216 ಹುದ್ದೆ

ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವವರಿಗೆ ಒಟ್ಟು 216 ತಾಂತ್ರಿಕ ಹುದ್ದೆಗಳು ಇವೆ. ಇದರಲ್ಲಿ ಸಹಾಯಕ ನಗರ ಯೋಜಕರು ಸೇರಿದಂತೆ ವಿವಿಧ ತಾಂತ್ರಿಕ ಹುದ್ದೆಗಳು ಸೇರಿವೆ.

ಸಹಾಯಕ ನಗರ ಯೋಜಕರು – 119

ಜೂನಿಯರ್ ಎಂಜಿನಿಯರ್ (ಸಿವಿಲ್) – 85

ಇತರೆ ಡಿಪ್ಲೊಮಾ ಮಟ್ಟದ ತಾಂತ್ರಿಕ ಹುದ್ದೆಗಳು

ಎರಡು ಪತ್ರಿಕೆಗಳ ಪರೀಕ್ಷೆ

ಪದವಿ ಮತ್ತು ಪಿಯುಸಿ ಮಟ್ಟದ ತಾಂತ್ರಿಕೇತರ ಹುದ್ದೆಗಳಿಗೆ ಎರಡು ಪತ್ರಿಕೆಗಳ ಪರೀಕ್ಷೆ ನಡೆಯಲಿದೆ. ಕರ್ನಾಟಕ ನಾಗರಿಕ ಸೇವಾ ನಿಯಮಗಳು-2021ರ ಅನ್ವಯ ಪತ್ರಿಕೆ-1 ಸಾಮಾನ್ಯ ಜ್ಞಾನ ಮತ್ತು ಪತ್ರಿಕೆ-2 ಸಂವಹನ/ವಿಷಯಾಧಾರಿತ ಪರೀಕ್ಷೆ ಇರಲಿದೆ.ಡಿಪ್ಲೊಮಾ ಮಟ್ಟದ ತಾಂತ್ರಿಕ ಹುದ್ದೆಗಳಿಗೆ ಪತ್ರಿಕೆ-1 ಸಾಮಾನ್ಯ ಪತ್ರಿಕೆಯಾಗಿದ್ದು, ಪತ್ರಿಕೆ-2 ಸಂಬಂಧಿತ ವಿಷಯಾಧಾರಿತ ಪರೀಕ್ಷೆಯಾಗಿರಲಿದೆ.

ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಪ್ರಕಟವಾದ ಬಳಿಕ ಅರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಪರೀಕ್ಷಾ ದಿನಾಂಕ ಹಾಗೂ ಇತರ ವಿವರಗಳನ್ನು ಪರಿಶೀಲಿಸಬೇಕು. ನೇಮಕಾತಿಗೆ ಸಂಬಂಧಿಸಿದ ಅಧಿಕೃತ ಮಾಹಿತಿಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ ಗಮನಿಸುವುದು ಸೂಕ್ತ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular