ಜ್ಯೋತಿಷ್ಯದಲ್ಲಿ ಗಜಕೇಸರಿ ಯೋಗಕ್ಕೆ ವಿಶೇಷ ಮಹತ್ವವಿದೆ. ಗುರು ಮತ್ತು ಚಂದ್ರನ ಸಂಯೋಗದಿಂದ ಈ ಯೋಗ ನಿರ್ಮಾಣವಾಗುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಈ ಯೋಗದಿಂದ ಹಣಕಾಸು, ಉದ್ಯೋಗ, ವ್ಯವಹಾರ ಮತ್ತು ಕುಟುಂಬ ಜೀವನದಲ್ಲಿ ಒಳ್ಳೆಯ ಬದಲಾವಣೆಗಳು ಆಗಬಹುದು ಎಂಬ ನಂಬಿಕೆ ಇದೆ.
ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ, ಸೆಪ್ಟೆಂಬರ್ 7, 2026ರಂದು ಚಂದ್ರನು ಕರ್ಕಾಟಕ ರಾಶಿಗೆ ಪ್ರವೇಶಿಸಲಿದ್ದಾನೆ. ಈಗಾಗಲೇ ಕರ್ಕಾಟಕದಲ್ಲಿ ಗುರು ಇರುವುದರಿಂದ ಚಂದ್ರನ ಪ್ರವೇಶದ ಬಳಿಕ ಗುರು-ಚಂದ್ರನ ಸಂಯೋಗ ಉಂಟಾಗಲಿದೆ. ಇದರಿಂದ ಗಜಕೇಸರಿ ಯೋಗ ರೂಪುಗೊಳ್ಳಲಿದೆ.
ಕರ್ಕಾಟಕ ರಾಶಿಯಲ್ಲೇ ಈ ಯೋಗ ನಿರ್ಮಾಣವಾಗುತ್ತಿರುವುದರಿಂದ ಕೆಲವು ರಾಶಿಯವರಿಗೆ ಇದರ ಪರಿಣಾಮ ಹೆಚ್ಚು ಅನುಕೂಲಕರವಾಗಿರಲಿದೆ ಎಂದು ಜ್ಯೋತಿಷ್ಯ ಹೇಳುತ್ತದೆ. ಹಣದ ವಿಚಾರದಲ್ಲಿ ಲಾಭ, ಕೆಲಸದಲ್ಲಿ ಪ್ರಗತಿ, ಹೊಸ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಹಾಗಾದರೆ ಯಾವ ರಾಶಿಯವರಿಗೆ ಈ ಯೋಗದಿಂದ ಹೆಚ್ಚು ಲಾಭ? ಇಲ್ಲಿದೆ ವಿವರ.
ವೃಷಭ ರಾಶಿ
ವೃಷಭ ರಾಶಿಯವರಿಗೆ ಗಜಕೇಸರಿ ಯೋಗ ಹಣಕಾಸಿನ ವಿಚಾರದಲ್ಲಿ ಉತ್ತಮ ಫಲ ನೀಡಬಹುದು. ಆದಾಯ ಹೆಚ್ಚಾಗುವ ಅವಕಾಶ ಸಿಗಲಿದ್ದು, ಈ ಹಿಂದೆ ಬಾಕಿ ಉಳಿದಿದ್ದ ಹಣವೂ ಕೈ ಸೇರುವ ಸಾಧ್ಯತೆ ಇದೆ.
ಉದ್ಯೋಗದಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ಹೊಸ ಜವಾಬ್ದಾರಿ ಅಥವಾ ಉತ್ತಮ ಅವಕಾಶ ದೊರೆಯುವ ಸಾಧ್ಯತೆಯೂ ಇದೆ. ಉದ್ಯಮಿಗಳಿಗೆ ಹೊಸ ಸಂಪರ್ಕಗಳು ಸಿಗಲಿದ್ದು, ಇದರಿಂದ ವ್ಯವಹಾರದಲ್ಲಿ ಲಾಭವಾಗಬಹುದು.
ಕುಟುಂಬದಲ್ಲೂ ಸಂತಸದ ವಾತಾವರಣ ಇರಲಿದೆ. ಮನೆಗೆ ಸಂಬಂಧಿಸಿದಂತೆ ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸಗಳು ಪೂರ್ಣಗೊಳ್ಳಬಹುದು.
ಕರ್ಕಾಟಕ ರಾಶಿ
ಗಜಕೇಸರಿ ಯೋಗ ನಿಮ್ಮದೇ ರಾಶಿಯಲ್ಲಿ ರೂಪುಗೊಳ್ಳುತ್ತಿರುವುದರಿಂದ ಕರ್ಕಾಟಕ ರಾಶಿಯವರಿಗೆ ಈ ಸಮಯ ವಿಶೇಷವಾಗಿರಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದ್ದು, ಹಲವು ವಿಚಾರಗಳಲ್ಲಿ ಅನುಕೂಲಕರ ಫಲಿತಾಂಶ ಸಿಗಬಹುದು.
ಬಹಳ ದಿನಗಳಿಂದ ಕಾಡುತ್ತಿದ್ದ ಕೆಲವು ಸಮಸ್ಯೆಗಳಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಪ್ರೀತಿ ಮತ್ತು ದಾಂಪತ್ಯ ಜೀವನದಲ್ಲೂ ಉತ್ತಮ ಬದಲಾವಣೆ ಕಂಡುಬರಬಹುದು. ಸಂಗಾತಿ ಮತ್ತು ಕುಟುಂಬದವರ ಬೆಂಬಲ ಸಿಗಲಿದೆ.
ಹಣಕಾಸಿನ ಸ್ಥಿತಿಯಲ್ಲೂ ಸುಧಾರಣೆ ಕಾಣಬಹುದು. ಜೀವನದಲ್ಲಿ ಕೆಲವು ಹೊಸ ಸೌಕರ್ಯಗಳು ಸೇರುವ ಸಾಧ್ಯತೆ ಇದ್ದು, ಒಟ್ಟಾರೆ ಈ ಅವಧಿ ನೆಮ್ಮದಿ ತರಬಹುದು.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಗಜಕೇಸರಿ ಯೋಗ ಹೊಸ ಅವಕಾಶಗಳನ್ನು ತರುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಉತ್ತಮ ಸಮಯವಾಗಬಹುದು.
ಉಳಿತಾಯ ಅಥವಾ ಹೂಡಿಕೆಗೆ ಸಂಬಂಧಿಸಿದಂತೆ ಕೈಗೊಳ್ಳುವ ನಿರ್ಧಾರಗಳು ಮುಂದಿನ ದಿನಗಳಲ್ಲಿ ಪ್ರಯೋಜನ ನೀಡಬಹುದು. ಉದ್ಯೋಗದಲ್ಲಿ ನಿಮ್ಮ ಪರಿಶ್ರಮಕ್ಕೆ ಮೆಚ್ಚುಗೆ ಸಿಗಲಿದ್ದು, ಹೊಸ ಜವಾಬ್ದಾರಿ ಸಿಗುವ ಸಾಧ್ಯತೆಯೂ ಇದೆ.
ಈ ಅವಧಿಯಲ್ಲಿ ಪ್ರಯಾಣ ಮಾಡುವ ಅವಕಾಶ ಬರಬಹುದು. ವೃತ್ತಿಯಲ್ಲಿ ನಿಮ್ಮ ಸ್ಥಾನ ಮತ್ತಷ್ಟು ಬಲವಾಗುವ ಸಾಧ್ಯತೆ ಇದೆ. ಭವಿಷ್ಯಕ್ಕಾಗಿ ಹಾಕಿಕೊಂಡಿರುವ ಕೆಲವು ಯೋಜನೆಗಳು ಕೂಡ ಮುಂದೆ ಸಾಗಬಹುದು.
ತುಲಾ ರಾಶಿ
ತುಲಾ ರಾಶಿಯವರಿಗೆ ಈ ಯೋಗ ಹಲವು ರೀತಿಯಲ್ಲಿ ಅನುಕೂಲ ತರಬಹುದು. ಮನೆಗೆ ಅಗತ್ಯವಿರುವ ವಸ್ತುಗಳು ಅಥವಾ ಹೊಸ ಸೌಕರ್ಯಗಳನ್ನು ಖರೀದಿಸುವ ಅವಕಾಶ ಸಿಗಬಹುದು.
ನಿಮ್ಮ ಮಾತು ಮತ್ತು ವ್ಯಕ್ತಿತ್ವದಿಂದ ಕೆಲಸದ ಸ್ಥಳದಲ್ಲಿ ಉತ್ತಮ ಹೆಸರು ಪಡೆಯುವ ಸಾಧ್ಯತೆ ಇದೆ. ಮೇಲಧಿಕಾರಿಗಳು ಹಾಗೂ ಸಹೋದ್ಯೋಗಿಗಳಿಂದ ಬೆಂಬಲ ಸಿಗಬಹುದು.
ವಿವಾಹದ ನಿರೀಕ್ಷೆಯಲ್ಲಿರುವವರಿಗೆ ಉತ್ತಮ ಸಂಬಂಧದ ಪ್ರಸ್ತಾಪ ಬರಬಹುದು. ಉದ್ಯೋಗದಲ್ಲಿರುವವರಿಗೆ ಹೊಸ ಅವಕಾಶಗಳು ಸಿಗುವ ಸಾಧ್ಯತೆ ಇದ್ದು, ಕುಟುಂಬದಲ್ಲೂ ಸಂತಸದ ವಾತಾವರಣ ಇರಲಿದೆ.
ಧನು ರಾಶಿ
ಧನು ರಾಶಿಯವರಿಗೆ ಗಜಕೇಸರಿ ಯೋಗ ವೃತ್ತಿ ಮತ್ತು ಹಣಕಾಸಿನ ವಿಚಾರದಲ್ಲಿ ಒಳ್ಳೆಯ ಫಲ ನೀಡಬಹುದು. ಉದ್ಯೋಗದಲ್ಲಿ ಪ್ರಗತಿಗೆ ಹೊಸ ಅವಕಾಶಗಳು ಸಿಗುವ ಸಾಧ್ಯತೆ ಇದೆ.
ನಿಮ್ಮ ಸಾಮರ್ಥ್ಯವನ್ನು ತೋರಿಸಲು ಈ ಸಮಯ ಸಹಕಾರಿಯಾಗಬಹುದು. ವ್ಯವಹಾರ ಮಾಡುತ್ತಿರುವವರಿಗೆ ಹೊಸ ಒಪ್ಪಂದಗಳು ಅಥವಾ ಲಾಭದಾಯಕ ಅವಕಾಶಗಳು ದೊರೆಯಬಹುದು.
ಆರ್ಥಿಕ ಸ್ಥಿತಿ ಬಲಗೊಳ್ಳುವ ಸಾಧ್ಯತೆ ಇದ್ದು, ಬಹಳ ದಿನಗಳಿಂದ ಮುಂದೂಡುತ್ತಿದ್ದ ಕೆಲಸಗಳು ಪೂರ್ಣಗೊಳ್ಳಬಹುದು. ಕುಟುಂಬದವರ ಬೆಂಬಲವೂ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಲಿದೆ.
ಸೂಚನೆ: ಇಲ್ಲಿ ನೀಡಿರುವ ಮಾಹಿತಿಯು ಜ್ಯೋತಿಷ್ಯ ನಂಬಿಕೆಗಳನ್ನು ಆಧರಿಸಿದೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು.

