HomeLatest Newsನಟಿ ಕಾವ್ಯಾ ಗೌಡ ಹಾಗೂ ಪತಿ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ನಟಿ ಕಾವ್ಯಾ ಗೌಡ ಹಾಗೂ ಪತಿ ಮೇಲೆ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಬೆಂಗಳೂರು: ರಾಧಾ ರಮಣ, ಗಾಂಧಾರಿ ಧಾರಾವಾಹಿ ಖ್ಯಾತಿಯ ನಟಿ ಕಾವ್ಯಾ ಗೌಡ ಕುಟುಂಬದ ಆಸ್ತಿ ಕಲಹ ಬೀದಿಗೆ ಬಂದಿದೆ. ಕಾವ್ಯಾ ಗೌಡ ಹಾಗೂ ಆಕೆಯ ಪತಿ ಸೋಮಶೇಖರ್ ಮೇಲೆ ಹಲ್ಲೆ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.

ನಟಿ ಕಾವ್ಯಾ ಗೌಡ, ಪತಿ ಸೋಮಶೇಖರ್ ಸಂಬಂಧಿಕರೇ ನನ್ನ ಹಾಗೂ ನನ್ನ ಪತಿ ಮೇಲೆ ಹಲ್ಲೆ ನಡೆಸಿದ್ದಾರೆ. ನಮ್ಮ ಜನಪ್ರಿಯತೆಯನ್ನು ಸಹಿಸದೇ ನನ್ನ ಹಾಗೂ ಪತಿ ಸೋಮಶೇಖರ್ ಮೇಲೆ ಹಲ್ಲೆ ನಡೆದಿದ್ದು, ಪತಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಆರೋಪಿಸಿದ್ದರು. ಪ್ರೇಮಾ, ನಂದೀಶ್, ರವಿಕುಮಾರ್, ಪ್ರಿಯಾ ಎಂಬುವರು ಹಲ್ಲೆ ನಡೆಸಿದ್ದಾಗಿ ಆರೋಪಿಸಿದ್ದಾರೆ. ಅಲ್ಲದೇ ರವಿಕುಮಾರ್ ಎಂಬಾತ ತನ್ನ ಮೇಲೆ ಹಲ್ಲೆ ನಡೆಸಿ, ನನಗೆ ಪೊಲಿಟಿಕಲ್ ಬ್ಯಾಕ್ ಗ್ರೌಂಡ್ ಇದೆ. ನೂರು ಜನರ ಮುಂದೆ ನಿನ್ನ ಮೇಲೆ ರೇಪ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಗಿ ಕಾವ್ಯಾ ಗೌಡ ಆರೋಪಿಸಿದ್ದರು. ಈ ಬಗ್ಗೆ ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ಕೂದ ದಾಖಲಿಸಿದ್ದಾರೆ. ಇದೇ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದಿದೆ.

ಹಲ್ಲೆ ಆರೋಪ ಎದುರಿಸುತ್ತಿರುವ ನಂದೀಶ್ ಹಾಗೂ ಪತ್ನಿ ಪ್ರೇಮಾ ದಂಪತಿ, ಕಾವ್ಯಾ ಗೌಡ ಅವರ ಪತಿ ಸೋಮಶೇಖರ್ ಅವರ ಸಹೋದರನ ಕುಟುಂಬ. ನಂದೀಶ್, ಸೋಮಶೇಖರ್ ಅವರ ಅಣ್ಣ ಎಂದು ತಿಳಿದುಬಂದಿದೆ. ಕಾವ್ಯಾ ಗೌಡ ಹಾಗೂ ಪತಿ ಸೋಮಶೇಖರ್ ವಿರುದ್ಧ ನಂದೀಶ್ ಹಾಗೂ ಪತ್ನಿ ಪ್ರೇಮಾ ಹಲ್ಲೆ ಆರೋಪ ಮಾಡಿ ರಾಮಮೂರ್ತಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಎರಡೂ ಕಡೆಗಳಿಂದಲೂ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಪ್ರೇಮಾ, ಮನೆಯ ವಿಚಾರವಾಗಿಯೇ ಕಾವ್ಯಾ ಹಾಗೂ ಅಕೆಯ ಪತಿ ಪದೇ ಪದೇ ಜಗಳವಾಡುತ್ತಿದ್ದಾರೆ. ನಮ್ಮದು ಕೂಡುಕುಟುಂಬ ದೊಡ್ಡ ಮನೆ. ಮನೆಯ ಗ್ರೌಂಡ್ ಫ್ಲೋರ್ ನಲ್ಲಿ ನಾವು ಹಾಗೂ ಮೊದಲ ಮಹಡಿಯಲ್ಲಿ ಕಾವ್ಯಾ ಹಾಗೂ ಆಕೆಯ ಪತಿ-ಮಗಳು, ಎರಡನೇ ಮಹಡಿಯಲ್ಲಿ ಅತ್ತೆ-ಮಾವ ಹೀಗೆ ಮೂರು ಕುಟುಂಬಗಳು ಒಂದೇ ಮನೆಯ ಕಟ್ಟಡದಲ್ಲಿ ಬೇರೆ ಬೇರೆ ಫ್ಲೋರ್ ನಲ್ಲಿ ವಾಸವಾಗುತ್ತಿದ್ದೇವೆ. ಬೇರೆ ಬೇರೆ ಫ್ಲೋರ್ ನಲ್ಲಿಯೇ ವಾಸವಾಗುತ್ತಿರುವುದರಿಂದ ಅವರವ ಕುಟುಂಬಕ್ಕೆ ಪ್ರತ್ಯೇಕ ಅಡುಗೆ ಮನೆ ಎಲ್ಲಾ ವ್ಯವಸ್ಥೆಗಳೂ ಇವೆ. ಕೆಲಸದವರೂ ಬೇರೆಯೇ ಇದ್ದಾರೆ. ಆದರೆ ಇಡೀ ಮನೆಯನ್ನು ತಮಗೆ ಬಿಟ್ಟುಕೊಡಬೇಕು ಎಂಬುದು ಕಾವ್ಯಾ ಗೌಡ ಹಾಗೂ ಆಕೆಯ ಪತಿಯ ವಾದ. ಇದೇ ವಿಚಾರವಾಗಿ ಆಗಾಗ ಕ್ಷುಲ್ಲಕ ಕಾರಣಕ್ಕೆ ಕ್ಯಾತೆ ತೆಗೆಯುತ್ತಿರುತ್ತಾರೆ.

ನಿನ್ನೆ ಮಧ್ಯಾಹ್ನ ನಾವು ಊಟ ಮಾಡುತ್ತಿದ್ದಾಗ ಕಾವ್ಯಾ ಮನೆಗೆ ಬಂದು ಗಲಾಟೆ ಮಾಡ್ಲಾರಂಭಿಸಿದ್ದಾಳೆ. ಇದು ನಮ್ಮ ಮನೆ ಇಲ್ಲಿಂದ ಹೊರ ಹೋಗುವಂತೆ ಜಗಳ ಮಾಡಿದ್ದಾಳೆ. ಆಕೆಯ ಪತಿಯೂ ಸಾಥ್ ನೀಡಿದ್ದು, ನಮ್ಮನ್ನು ಮನೆಯಿಂದ ಹೊರ ಹೋಗುವಂತೆ ಜಗಳವಾಡಿದ್ದಾರೆ. ಅಲ್ಲದೇ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಕಾವ್ಯಾಳ ಪತಿ ಸೋಮಶೇಖರ್ ನನ್ನ ತಂಗಿಯ ಮೇಲೆ ಹಲ್ಲೆ ನಡೆಸಿದ್ದಲ್ಲದೇ ರೇಪ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಅವರು ಬೈದು ಹಲ್ಲೆ ನಡೆಸಿರುವ ವಿಡಿಯೋ ಕೂಡ ಇದೆ. ಆದರೆ ಕಾವ್ಯಾ ಗೌಡ ತನ್ನ ಮೇಲೆ ರೇಪ್ ಮಾಡುವುದಾಗಿ ಬೆದರಿಕೆ ಹಾಕಿದದಗಿ, ಹಲ್ಲೆ ನಡೆಸಿದ್ದಾಗಿ ಆರೋಪಿಸುತ್ತಿದ್ದಾರೆ. ಇದು ಸುಳ್ಳು. ಕಾವ್ಯಾ ಹಾಗೂ ಆಕೆಯ ಪತಿ ಮಾಡಿರುವ ಹಲ್ಲೆ ಹಾಗೂ ಬೆದರಿಕೆಯನ್ನು ನಮ್ಮ ಮೇಲೆ ಹೊರಿಸುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಕಾವ್ಯಾ ಗೌಡ ಅವರ ಮಾವ ಚಳ್ಳಕೆರೆಯಲ್ಲಿ ಜಮೀನ್ದಾರರಾಗಿದ್ದು, ಅಲ್ಲಿ ಬೃಹತ್ ಬಂಗಲೆಯನ್ನು ಕಟ್ಟಿಸಿ ವಾಸವಾಗಿದ್ದಾರೆ. ಒಂದೇ ಮನೆಯ ಬೇರೆ ಬೇರೆ ಮಹಡಿಗಳಲ್ಲಿ ಮೂರು ಕುಟುಂಬಗಳು ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಆಸ್ತಿ ವಿಚಾರವಾಗಿ ಕಾವ್ಯಾ ಪತಿ ಸೋಮಶೇಖರ್ ಹಾಗೂ ಸಹೋದರ ನಂದೀಶ್ ನಡುವೆ ನಡೆಯುತ್ತಿದ್ದ ಮನಸ್ತಾಪ ಈಗ ದೊಡ್ದಮಟ್ಟಕ್ಕೆ ತಲುಪಿದ್ದು, ಮನೆಯಲ್ಲಿಯೇ ಹೊಡೆದಾಡಿಕೊಳ್ಳುವ ಹಂತ ತಲುಪಿದೆ ಎನ್ನಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular