HomeSportsಟಿ-20 ವಿಶ್ವಕಪ್: ಬಲಿಷ್ಠವಾದ ವೆಸ್ಟ್‌ ಇಂಡೀಸ್‌ ತಂಡ ಪ್ರಕಟ!

ಟಿ-20 ವಿಶ್ವಕಪ್: ಬಲಿಷ್ಠವಾದ ವೆಸ್ಟ್‌ ಇಂಡೀಸ್‌ ತಂಡ ಪ್ರಕಟ!

ಐಸಿಸಿ ಟಿ-20 ವಿಶ್ವಕಪ್ 2026ರ ಬಿಸಿ ಏರುತ್ತಿದೆ. ಪುರುಷರ ಟಿ-20 ವಿಶ್ವಕಪ್ ಪಂದ್ಯಾವಳಿಗೆ ವೆಸ್ಟ್ ಇಂಡೀಸ್ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ತಂಡವನ್ನು ಶೈ ಹೋಪ್ ನಾಯಕನಾಗಿ ಮುನ್ನಡೆಸಲಿದ್ದಾರೆ.

ಟಿ-20 ವಿಶ್ವಕಪ್ ಫೆಬ್ರವರಿ 7ರಂದು ಆರಂಭವಾಗಲಿದೆ. ಭಾರತ ಮತ್ತು ಶ್ರೀಲಂಕಾದಲ್ಲಿ ಪಂದ್ಯಗಳು ನಡೆಯಲಿದ್ದು, ಮಾರ್ಚ್ 8ಕ್ಕೆ ಫೈನಲ್ ಪಂದ್ಯವಿದೆ. ವೆಸ್ಟ್ ಇಂಡೀಸ್ ತಂಡವನ್ನು ಇಂಗ್ಲೆಂಡ್, ಇಟಲಿ, ಸ್ಕಾಟ್ಲೆಂಡ್ ಮತ್ತು ನೇಪಾಳದೊಂದಿಗೆ ‘ಸಿ’ ಗುಂಪಿಗೆ ಸೇರಿಸಲಾಗಿದೆ.

ತಂಡ ಫೆಬ್ರವರಿ 7ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಮೊದಲ ಪಂದ್ಯವನ್ನು ಆಡಳಿದೆ. ನಂತರ ಫೆಬ್ರವರಿ 11ರಂದು ಇಂಗ್ಲೆಂಡ್ ವಿರುದ್ಧ ಮತ್ತು ಫೆಬ್ರವರಿ 15ರಂದು ಮುಂಬೈನ ವಾಂಖೆಡೆಯಲ್ಲಿ ನೇಪಾಳ ವಿರುದ್ಧ ಪಂದ್ಯವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವೆಸ್ಟ್‌ ಇಂಡೀಸ್ ತಂಡ

  • ಶೈಯ್ ಹೋಪ್ (ನಾಯಕ)
  • ಜಾನ್ಸನ್ ಚಾರ್ಲ್ಸ್
  • ರೋಸ್ಟನ್ ಚೇಸ್
  • ಮ್ಯಾಥ್ಯೂ ಫೋರ್ಡ್
  • ಶಿಮ್ರಾನ್ ಹೆಟ್ಮೆಯರ್
  • ಜೇಸನ್ ಹೋಲ್ಡರ್   
  • ಅಕೀಲ್ ಹೊಸೈನ್
  • ಶಮರ್ ಜೋಸೆಫ್
  • ಬ್ರಾಂಡನ್ ಕಿಂಗ್
  • ಗುಡಕೇಶ್ ಮೋಟಿ
  • ರೋವ್ಮನ್ ಪೊವೆಲ್
  • ಶೆರ್ಫೇನ್ ರುದರ್ಫೋರ್ಡ್
  • ಕ್ವೆಂಟಿನ್ ಸ್ಯಾಂಪ್ಸನ್
  • ಜೇಡನ್ ಸೀಲ್ಸ್
  • ರೊಮಾರಿಯೋ ಶೆಫರ್ಡ್

ಕ್ರಿಕೆಟ್ ವೆಸ್ಟ್ ಇಂಡೀಸ್ ಕ್ರಿಕೆಟ್‌ ಮಂಡಳಿ ಪ್ರಕಟಣೆಯಲ್ಲಿ ಸಮಗ್ರ ಮೌಲ್ಯಮಾಪನದ ನಂತರ ಈ ಆಯ್ಕೆಯನ್ನು ಮಾಡಲಾಗಿದ್ದು ಎಲ್ಲಾ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ ಮತ್ತು ಉನ್ನತ ಮಟ್ಟದಲ್ಲಿ ಸ್ಥಿರವಾಗಿ ಪ್ರದರ್ಶನ ನೀಡುವ ಸಾಮರ್ಥ್ಯವಿರುವ ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದೆ.

2012, 2016 ರಲ್ಲಿ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಮುನ್ನಡೆಸಿದ್ದ ಮುಖ್ಯ ತರಬೇತುದಾರ ಡ್ಯಾರೆನ್ ಸಾಮಿ, “ಈ ತಂಡವು ಜಾಗತಿಕ ಮಟ್ಟದ ಪಂದ್ಯಾವಳಿಯಲ್ಲಿ ಯಶಸ್ವಿಯಾಗಲು ಬೇಕಾದ ಸ್ಪಷ್ಟ ಯೋಜನೆ ಮತ್ತು ತಿಳುವಳಿಕೆಯನ್ನು ಹೊಂದಿದೆ” ಎಂದು ಹೇಳಿದ್ದಾರೆ.

 “ನಾವು ಸಮತೋಲನ, ಅಪಾರ ಅನುಭವ ಮತ್ತು ಸ್ವಲ್ಪ ಮಟ್ಟಿನ ರಹಸ್ಯ ಕಾರ್ಯತಂತ್ರದ  ಅಂಶಗಳನ್ನು ಹೊಂದಿರುವ ತಂಡವನ್ನು ಆಯ್ಕೆ ಮಾಡಿದ್ದೇವೆ. ನಮ್ಮಲ್ಲಿ ಅಗತ್ಯವಿರುವ ಕಡೆ ಅನುಭವಿಗಳಿಗೆ ಪೈಪೋಟಿ ನೀಡುವ ಹೊಸಬರಿದ್ದಾರೆ ಮತ್ತು ದೇಶ ಹೆಮ್ಮೆಪಡುವಂತೆ ಮಾಡಲು ಹೋರಾಡಲು ಸಿದ್ಧವಿರುವ ತಂಡ ಇದು” ಎಂದರು.

“ಭಾರತ ಮತ್ತು ಶ್ರೀಲಂಕಾದಲ್ಲಿ ಗೆಲ್ಲಲು ಏನು ಬೇಕು? ಎಂಬುದರ ಬಗ್ಗೆ ನಾವು ದೀರ್ಘವಾಗಿ ಯೋಚಿಸಿದ್ದೇವೆ. ನಮ್ಮ ಗುರಿಯನ್ನು ತಲುಪಲು ನಮಗೆ ಸಹಾಯ ಮಾಡುವ ಅತ್ಯುತ್ತಮ ತಂಡವನ್ನು ನಾವು ರೂಪಿಸಿದ್ದೇವೆ ಮತ್ತು ನಾವು ಯಶಸ್ವಿಯಾಗುತ್ತೇವೆ ಎಂದು ನಾನು ದೃಢವಾಗಿ ನಂಬುತ್ತೇನೆ” ಎಂದು ತಿಳಿಸಿದ್ದಾರೆ.

ಗುಡಕೇಶ್ ಮೋಟಿ  ದಕ್ಷಿಣ ಆಫ್ರಿಕಾದಲ್ಲಿ ಶಿಬಿರದಲ್ಲಿ ಅಭ್ಯಾಸ ಪೂರ್ಣಗೊಳಿಸಿದ ನಂತರ, ಹೊಸ ಆತ್ಮವಿಶ್ವಾಸದೊಂದಿಗೆ ತಂಡಕ್ಕೆ ಮರಳಿದ್ದಾರೆ. ಜಾನ್ಸನ್ ಚಾರ್ಲ್ಸ್ ಅವರನ್ನು ತಂಡದ ಬ್ಯಾಕಪ್ ವಿಕೆಟ್‌ಕೀಪರ್ ಆಗಿ ಆಯ್ಕೆ ಮಾಡಲಾಗಿದೆ. ಲಭ್ಯವಿರುವ ಆಟಗಾರರ ಪೈಕಿ ಅವರ ಅಂತರಾಷ್ಟ್ರೀಯ ಅನುಭವ ಮತ್ತು ಪವರ್‌ಪ್ಲೇನಲ್ಲಿನ ಅವರ ಸಾಮರ್ಥ್ಯವು ಆರಂಭಿಕ ಆಟಗಾರನ ಸ್ಥಾನಕ್ಕೆ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗಿದೆ.

ಕ್ವೆಂಟಿನ್ ಸ್ಯಾಂಪ್ಸನ್‌ರನ್ನು ಮಧ್ಯಮ ಕ್ರಮಾಂಕದ ಆಯ್ಕೆಯಾಗಿ ಸೇರಿಸಿಕೊಳ್ಳಲಾಗಿದೆ. ವೇಗದ ಬೌಲರ್ ಅಲ್ಜಾರಿ ಜೋಸೆಫ್ ಗಾಯದ ನಂತರ ಚೇತರಿಸಿಕೊಂಡು ಮೈದಾನಕ್ಕೆ ಮರಳುತ್ತಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular