HomeIndiaಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಚೆಲ್ಲಿ ಕೂತಿದೆ: ಕುಡಿಯುವ ನೀರಿನ ಹಾಹಾಕಾರವನ್ನು ಮನವರಿಕೆ ಮಾಡಲು ಅಧಿಕಾರಿಗಳು...

ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಚೆಲ್ಲಿ ಕೂತಿದೆ: ಕುಡಿಯುವ ನೀರಿನ ಹಾಹಾಕಾರವನ್ನು ಮನವರಿಕೆ ಮಾಡಲು ಅಧಿಕಾರಿಗಳು ವಿಫಲರಾಗಿದ್ದಾರೆ: ಸಂಸದ ಬೊಮ್ಮಾಯಿ ವಾಗ್ದಾಳಿ

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಅಬ್ಂಧಿಸಿದಂತೆ ಪ್ರಾಧೀಕಾರದ ಸಭೆಯಲ್ಲಿ ಪ್ರತಿಭಾರಿ ಕರ್ನಾಟಕಕೆ ಹಿನ್ನಡೆಯಾಗುತ್ತಿರುವುದಕ್ಕೆ ಬಿಜೆಪಿ ಸಂಸದ ಬಸವರಾಜ್ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾವೇರಿ ನೀರಿನ ಹಂಚಿಕೆಯಲ್ಲಿ ನಿರಂತರವಾಗಿ ಕರ್ನಾಟಕ ಸಂಕಷ್ಟ ಎದುರಿಸಬೇಕಾಗಿದೆ. ನಮ್ಮ ಸಮಸ್ಯೆ ನಮ್ಮ ಕೂಗನ್ನು ಸಿಡಬ್ಲ್ಯೂಆರ್‌ಸಿ ಮತ್ತು ಸಿಡಬ್ಲ್ಯೂಎಂಎಗೆ ಪರಿಣಾಮಕಾರಿಯಾಗಿ ಒತ್ತಿ ಹೇಳಲು ವಿಫಲವಾಗಿರುವಂತದ್ದು ಬಹಳ ಸ್ಪಷ್ಟ. ಅಧಿಕಾರಿಗಳು ಏನೇ ಹೇಳಿದರೂ ಕೂಡ ಇಲ್ಲಿರುವಂತಹ ವಸ್ತು ಪರಿಸ್ಥಿತಿ ಮುಂಬರುವಂತಹ ಕುಡಿಯುವ ನೀರಿನ ಅಭಾವ ನಮ್ಮ ರೈತರಿಗೆ ನೀರು ಬಿಡದೆ ಇರುವಂತದ್ದು ಅದರ ಪರಿಣಾಮ ರೈತರಿಗೆ ಆಗುವಂತಹ ನಷ್ಟ ಕುಡಿಯುವ ನೀರಿಗಾಗಿ ಉಂತಾಗುತ್ತಿರುವ ಹಾಹಾಕಾರವನ್ನು ಮನವರಿಕೆ ಮಾಡಲು ನಮ್ಮ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈಗ ಕೊಟ್ಟಿರುವಂತಹ ಆದೇಶ 6000 ಕ್ಯೂಸೆಕ್ಸ್ 15 ದಿವಸ ಅಂದರೆ ಸುಮಾರು ಏಳೂವರೆ ಟಿಎಂಸಿ ನೀರನ್ನು ಬಿಡಬೇಕಾಗುತ್ತದೆ. ಈಗಾಗಲೇ ಕಬಿನಿ ನೀರಿನ ಸಂಗ್ರಹ ಅರ್ಧಕ್ಕೆ ಇಳಿದಿದೆ. ಕೆ.ಆರ್.ಎಸ್ ಕೂಡ ಈಗ ಪ್ರತಿ ದಿವಸ ಸುಮಾರು ಐದರಿಂದ 6000 ಕ್ಯೂಸೆಕ್ಸ್ ಬಿಡುವುದರಿಂದ ಪ್ರತಿ ದಿವಸ ಅರ್ಧ ಟಿಎಂಸಿ ನೀರು ಕಡಿಮೆ ಆಗುತ್ತಿದೆ. ಇನ್ನು 15 ದಿನ ಅಂದರೆ ಸುಮಾರು 7 1/2 ಟಿಎಂಸಿ ನೀರು ಕಡಿಮೆ ಆಗುತ್ತದೆ. ಮಳೆ ಬರುವಂತಹ ಲಕ್ಷಣಗಳು ಕೂಡ ಇಲ್ಲ. ರಾಜ್ಯ ಸರ್ಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು ಎಂದಿದ್ದಾರೆ.

ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಕೈಚೆಲ್ಲಿ ಕೂತಿದೆ ಅಂತ ಭಾವನೆ ನಮ್ಮ ರೈತರಲ್ಲಿ, ಈ ಭಾಗದ ಜನರಲ್ಲಿ ಬರ್ತಾ ಇದೆ. ರಾಜ್ಯ ಸರ್ಕಾರ ಕೂಡಲೇ ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋಗಬೇಕು. ಪ್ರತಿ ಬಾರಿ ನಾವು ತಮಿಳುನಾಡಿನ ಅರ್ಜಿಗೆ ಉತ್ತರ ಕೊಡುವ ರೆಸ್ಪಾಂಡೆಂಟ್ ಆಗಿ ಇರುವುದಕ್ಕಿಂತ ನಾವು ಪಿಟಿಷನರ್ ಆಗಬೇಕು. ನಮ್ಮ ಸಮಸ್ಯೆಗಳನ್ನು ಕೇವಲ ಅಂಕಿ ಅಂಶಗಳು ಅಷ್ಟೇ ಅಲ್ಲ ಅದರಿಂದ ಆಗುವಂತಹ ಅನಾಹುತದ ಸತ್ಯ ಮತ್ತು ಅದರ ಹಿಂದಿರುವಂತಹ ಭಾವನೆಗಳನ್ನು ಸುಪ್ರೀಂ ಕೋರ್ಟಿಗೆ ಮನವರಿಕೆ ಮಾಡಿಕೊಡಬೇಕು ಎಂದಿದ್ದಾರೆ.

ನನಗೆ ಅನಿಸುವ ಪ್ರಕಾರ ಒಬ್ಬ ವಿಶೇಷ ಹಿರಿಯ ನ್ಯಾಯವಾದಿಗಳನ್ನು ನಾವು ಇದಕ್ಕೆ ನೇಮಿಸಬೇಕಾಗಿದೆ. ಈಗಿರುವಂತಹ ವ್ಯವಸ್ಥೆ ನಮಗೆ ಪರಿಹಾರ ದೊರಕಿಸಿ ಕೊಟ್ಟಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೇ ಇದಕ್ಕೆ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಂತ್ರಿಮಂಡಲ ರಚನೆಗೆ ಹಲವಾರು ಬಾರಿ ಹೋಗುವ ಮುಖ್ಯಮಂತ್ರಿಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿಗೆ ಹೋಗಿ ಕುಳಿತುಕೊಂಡು ಕಾನೂನು ತಜ್ಞರ ಜೊತೆಗೆ ತಾಂತ್ರಿಕ ತಜ್ಞರ ಜೊತೆಗೆ ಬದಲಾದ ಪರಿಸ್ಥಿತಿಯ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡಿ ಅದಕ್ಕೆ ನ್ಯಾಯಾಂಗ ತಂಡಕ್ಕೆ ಹೊಸ ಶಕ್ತಿಯನ್ನು ತುಂಬಿ ಇದನ್ನು ಮಾಡದೆ ಇದ್ದರೆ ಬರುವಂತಹ ದಿನಗಳಲ್ಲಿ ಕಾವೇರಿ ಜಲಾನಯನ ಪ್ರದೇಶ ಬೆಂಗಳೂರು ನೀರಿನ ಹಾಹಾಕಾರದಲ್ಲಿ ಮುಳುಗುತ್ತದೆ ಎಂದು ಎಚ್ಚರಿಸಿದಾರೆ.

ತಮಿಳುನಾಡಿನವರು ಒಟ್ಟು ಮೆಟ್ಟೂರಿಂದ 40 ಟಿಎಂಸಿ ಮತ್ತು ಒಟ್ಟು 80 ಟಿಎಂಸಿ ನೀರನ್ನು ಬಿಡುವಂತಹ ಕಾರ್ಯಕ್ರಮ ಹಾಕಿಕೊಂಡಿದ್ದಾರೆ. ಅವರು ಮೂರನೇ ಬೆಳೆಗೆ ನೀರು ಕೊಡುತ್ತೇವೆ ಅಂತ ಅಲ್ಲಿನ ಮಂತ್ರಿಗಳೇ ಉದ್ದಟತನದ ಮಾತನ್ನಾಡಿದ್ದಾರೆ. ಇದೆಲ್ಲವನ್ನು ಕೂಡ ಸುಪ್ರೀಂ ಕೋರ್ಟಿನ ಗಮನಕ್ಕೆ ತಂದು ನಾವು ಬೇಡುತ್ತಿರುವಂತದ್ದು ಬದುಕುವ ಸಲುವಾಗಿ ಅವರು ಬೇಡ್ತಾ ಇರೋದು ಮೂರನೆಯ ಆ ತಮ್ಮ ಸಾಂಬಾರ್ ಮತ್ತು ಕುರುವೈ ಬೆಳೆ ಸಲುವಾಗಿ ಹೀಗಾಗಿ ಈ ಕಟುಸತ್ಯವನ್ನು ಹೇಳಿ ನಮ್ಮ ಜನರ ಸಂಕಷ್ಟವನ್ನು ಪಾರು ಮಾಡಬೇಕು. ಇಲ್ಲದೆ ಇದ್ದರೆ ಈ ಭಾಗದ ಜನ ಶಾಪವನ್ನು ಹಾಕುವುದು ಅಷ್ಟೇ ಅಲ್ಲ ಬರುವಂತಹ ದಿನಗಳಲ್ಲಿ ಯಾರು ನಿಮಗೆ ಕಳೆದ ಬಾರಿ ಬೆಂಬಲ ಕೊಟ್ಟಿದ್ದರು, ಆ ಬೆಂಬಲ ಶೂನ್ಯ ಆಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular