HomeEntertainment'ಕಾಟೇರ' ಚಿತ್ರದ ''ಅನುರಾಗವ ಕಲಿಸಲು'' ಗೀತೆ ರಿಲೀಸ್

‘ಕಾಟೇರ’ ಚಿತ್ರದ ”ಅನುರಾಗವ ಕಲಿಸಲು” ಗೀತೆ ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಚಿತ್ರದ ”ಅನುರಾಗವ ಕಲಿಸಲು” ಎಂಬ ಸುಮಧುರವಾದ ವಿಡಿಯೋ ಹಾಡು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ವಾಣಿ ಹರಿಕೃಷ್ಣ ಧ್ವನಿಯಾಗಿರುವ ಈ ಹಾಡಿಗೆ ಯೋಗರಾಜ್ ಭಟ್ ಸಾಹಿತ್ಯವಿದೆ.

ತರುಣ್ ಸುಧೀರ್ ನಿರ್ದೇಶಿಸಿರುವ ಈ ಚಿತ್ರವನ್ನು ರಾಕ್ ಲೈನ್ ವೆಂಕಟೇಶ್ ತಮ್ಮ ರಾಕ್ಲೈನ್ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ನಿರ್ಮಾಣ ಮಾಡಿದ್ದು, ವಿ ಹರಿಕೃಷ್ಣ ಸಂಗೀತ ಸಂಯೋಜನೆ ನೀಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಆರಾಧನಾ ಸೇರಿದಂತೆ  ಜಗಪತಿ ಬಾಬು, ಶೃತಿ, ವೈಜನಾಥ ಬಿರಾದಾರ್, ಡ್ಯಾನಿಶ್ ಅಖ್ತರ್ ಸೈಫಿ, ಪದ್ಮಾ ವಾಸಂತಿ, ಮಾಸ್ಟರ್ ರೋಹಿತ್, ಅವಿನಾಶ್, ಶ್ರೀನಿವಾಸ ಮೂರ್ತಿ, ರವಿ ಚೇತನ್, ಶ್ವೇತಾ ಪ್ರಸಾದ್, ತೆರೆ ಹಂಚಿಕೊಂಡಿದ್ದಾರೆ. ಕೆಎಂ ಪ್ರಕಾಶ್ ಸಂಕಲನ, ಸುಧಾಕರ್ ಛಾಯಾಗ್ರಾಹಣವಿದ್ದು, ಮಾಸ್ತಿ ಡೈಲಾಗ್ ಬರೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular