HomeLatest Newsಪ್ರವಾಸಕ್ಕೆ ಹೋಗಿದ್ದಾಗ ದುರಂತ: ಕಶ್ಯಪಿ ಡ್ಯಾಂ ನಲ್ಲಿ ಮುಳುಗಿ ದಂಪತಿ ಹಾಗೂ ಇಬ್ಬರು ಮಕ್ಕಳು ದಾರುಣ...

ಪ್ರವಾಸಕ್ಕೆ ಹೋಗಿದ್ದಾಗ ದುರಂತ: ಕಶ್ಯಪಿ ಡ್ಯಾಂ ನಲ್ಲಿ ಮುಳುಗಿ ದಂಪತಿ ಹಾಗೂ ಇಬ್ಬರು ಮಕ್ಕಳು ದಾರುಣ ಸಾವು

ನಾಸಿಕ್: ಪ್ರವಾಸಕ್ಕೆಂದು ಹೋಗಿದ್ದ ಕುಟುಂಬವೊಂದು ಪ್ರಸಿದ್ಧ ಕಶ್ಯಪಿ ಜಲಾಸಯದಲ್ಲಿ ಮುಳುಗಿ ದುರಂತ ಅಂತ್ಯಕಂಡಿರುವ ಘಟನೆ ಮಹಾರಾಷ್ಟ್ರದ ನಾಸಿಕ್-ಹರ್ಸುಲ್ ಬಳಿ ನಡೆದಿದೆ.

ಕಶ್ಯಪಿ ಜಲಾಶಯದಲ್ಲಿ ಮುಳುಗಿ ದಂಪತಿ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ಸಿವಿಲ್ ಇಂಜಿನಿಯರ್ ಸಚಿನ್ ಥೋಂಬ್ರೆ , ಅವರ ಗರ್ಭಿಣಿ ಪತ್ನಿ ರೋಹಿಣಿ ಥೋಂಬ್ರೆ ಹಾಗೂ ಪಕ್ಕದ ಮನೆಯ ಇಬ್ಬರು ಬಾಲಕರು ನೀರ‍ಿನಲ್ಲಿ ಮುಳುಗಿ ಮೃತಪಟ್ಟವರು. ಥೋಂಬ್ರೆ ಕುಟುಂಬದ ಎರಡು ವರ್ಷದ ಮಗುವನ್ನು ಸಂಗೀತಾ ಎಂಬ ಮಹಿಳೆ ರಕ್ಷಿಸಿದ್ದಾರೆ.

ರಜಾ ದಿನಗಳನ್ನು ಕಳೆಯಲೆಂದು ಬಂದಿದ್ದ ವೇಳೆ ದಂಪತಿ ಹಾಗೂ ಮಕ್ಕಳು ಕಶ್ಯಪಿ ಜಲಾಯಶದ ಬಳಿ ಹೋಗಿದ್ದರು. ಈ ವೇಳೆ ನೀರಿಗೆ ಇಳಿದಿದ್ದಾಗ ಈ ಘಟನೆ ಸಂಭವಿಸಿದೆ. ನಾಸಿಕ್ ನ ಹರ್ಸುಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದು, ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular