HomeIndiaರೇಡಿಯಂನಂತೆ ಬೆಳಕು ಚೆಲ್ಲುವ ಅಣಬೆ ಪತ್ತೆ..... ಅಚ್ಚರಿಗೊಂಡ ವಿಜ್ಞಾನಿಗಳು

ರೇಡಿಯಂನಂತೆ ಬೆಳಕು ಚೆಲ್ಲುವ ಅಣಬೆ ಪತ್ತೆ….. ಅಚ್ಚರಿಗೊಂಡ ವಿಜ್ಞಾನಿಗಳು

ಕಾಸರಗೋಡು: ರೇಡಿಯಂನಂತೆ ಬೆಳಕುಸೂಸುವ ಅಪರೂಪದ ಅಣಬೆ ಕೇರಳದ ಕಾಸರಗೋಡಿನಲ್ಲಿ ಪತ್ತೆಯಾಗಿದೆ. ಈ ಅಣಬೆಯನ್ನು ಕಂಡು ವಿಜ್ಞಾನಿಗಳೇ ಅಚ್ಚರಿ ಪಟ್ಟಿದ್ದಾರೆ.

‘ಫಿಲೋಬೊಲೆಟಸ್ ಮ್ಯಾನಿಪುಲಾರಿಸ್’ ಎಂದು ಕರೆಯಲ್ಪಡುವ ಈ ಅಣಬೆ ರಾತ್ರಿ ಕತ್ತಲಿನಲ್ಲಿ ರೇಡಿಯಂನಂತೆ ಹೊಳೆಯುತ್ತದೆ. ಈ ಅಪರೂಪದ ಅಣಬೆಯನ್ನು ಸಂಸೋಧಕರು ಕಾಸರಗೋಡಿನ ಅರಣ್ಯದಲ್ಲಿ ಪತ್ತೆ ಮಾಡಿದ್ದಾರೆ.

ಕೇರಳ ಅರಣ್ಯ ಹಾಗೂ ವನ್ಯಜೀವಿ ಇಲಾಖೆ ಕಾಸರಗೋಡು ವಿಭಾಗ ಹಾಗೂ ಮಶ್ರೂಮ್ಸ್ ಆಫ್ ಇಂಡಿಯಾ ಕಮ್ಯುನಿಟಿ ಜಂಟಿಯಾಗಿ ಕೇರಳದ ರಾಣಿಪುರಂ ಅರಣ್ಯದಲ್ಲಿ ಮೈಕ್ರೋ ಫಂಗಲ್ ಸಮೀಕ್ಷೆ ನಡೆಸಿದ್ದು, ಈ ವೇಳೆ ಈ ಭಾಗದಲ್ಲಿ ರಾತ್ರಿ ಬೆಳಗುವ ಅಣಬೆಗಳು ಇರುವುದು ಕಂಡು ಬಂದಿವೆ. ಅಷ್ಟೇ ಅಲ್ಲ 50ಕ್ಕೂ ಹೆಚ್ಚು ವಿಧದ ಅಣಬೆಗಳು ಕಂಡುಬಂದಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಫಿಲೋಬೊಲೆಟಸ್ ಮ್ಯಾನಿಪುಲಾರಿಸ್ ಎಂಬ ರಾತ್ರಿ ಬೆಳಕು ಚೆಲ್ಲುವ ಅಣಬೆಗಳು ತಿನ್ನಲು ಯೋಗವಾಗಿಲ್ಲ. ಈ ಅಣಬೆಗಳು ತನ್ನ ಜೀವಕೋಶಗಳಲ್ಲಿನ ರಾಸಾಯನಿಕ ಕ್ರಿಯೆಗಳಿಂದ ಕತ್ತಲಿನಲ್ಲಿ ಪ್ರಕಾಶಮಾನವಾಗಿ ಹಸಿರುಬಣ್ಣದಲ್ಲಿ ರೇಡಿಯಂ ನಂತೆ ಹೊಳೆಯುತ್ತವೆ. ಇವು ಹೆಚ್ಚಾಗಿ ಉಷ್ಣವಲಯದ, ಆರ್ದ್ರತೆ ಇರುವ ಪ್ರದೇಶಗಳಲ್ಲಿ ಕಂಡುಬರುತ್ತವೆ.

ದಟ್ಟಾರಣ್ಯದಲ್ಲಿ ಬಿದ್ದ ಎಲೆಗಳು ಹಾಗೂ ಕೊಳೆತ ಎಲೆಗಳಿಂದ ನಿರ್ಮಿತವಾದ ಸಾವಯವ ಕಾಂಪೋಸ್ಟ್ ಗಳು ಹೆಚ್ಚಿರುವುದರಿಂದ ಸಮೃದ್ಧ ತೇವಾಂಶವುಳ್ಳ ಪರಿಸರ ಈ ಅಣಬೆಗಳ ಬೆಳವಣಿಗೆಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತವೆ. ಇಂತಹ ವಾತಾವರಣ ಅಣಬೆಗಳು ಹೊಳೆಯುವ ವಿಶಿಷ್ಟ ಸಾಮರ್ಥ್ಯವನ್ನು ನೀಡುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular