HomeKarnatakaರೈಲು ಪ್ರಯಾಣಿಕರ ಗಮನಕ್ಕೆ : ಕಾರವಾರ-ಮಡಗಾಂವ ರೈಲು 5 ದಿನ ತಾತ್ಕಾಲಿಕ ಸ್ಥಗಿತ

ರೈಲು ಪ್ರಯಾಣಿಕರ ಗಮನಕ್ಕೆ : ಕಾರವಾರ-ಮಡಗಾಂವ ರೈಲು 5 ದಿನ ತಾತ್ಕಾಲಿಕ ಸ್ಥಗಿತ

ಕಾರವಾರ : ರೈಲು ಪ್ರಯಾಣಿಕರಿಗೆ ಕೊಂಕಣ ರೈಲ್ವೆ ಮಹತ್ವದ ಮಾಹಿತಿ ನೀಡಿದ್ದು, ಡಿಸೆಂಬರ್‌ 17 ರಿಂದ 21 ರವರೆಗೆ ಕಾರವಾರ ಮತ್ತು ಗೋವಾದ ಮಡಗಾಂವ ಸಂಪರ್ಕಿಸುವ ವಿಶೇಷ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಹಾಸನ ಬಳಿಯ ರೈಲು ಹಳಿ ದುರಸ್ತಿ ಕಾರಣಕ್ಕೆ ತಾತ್ಕಾಲಿಕವಾಗಿ ಈ ಎರಡು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಾರವಾರದಿಂದ ಮಢಗಾಂವ ಜಂಕ್ಷನ್‌ ಗೆ ಹೋಗುವ ಮತ್ತು ಮಢಗಾಂವದಿಂದ ಕಾರವಾರ ಜಂಕ್ಷನ್‌ ಗೆ ಬರುವ ರೈಲನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬೆಂಗಳೂರಿನಿಂದ ಕಾರವಾರಕ್ಕೆ ಬರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಕ್ಸ್‌ ಪ್ರೆಸ್‌ ಮತ್ತು ಪಂಚಗಂಗಾ ಎಕ್ಸ್‌ ಪ್ರೆಸ್‌ ರೈಲುಗಳು ಐದು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular