ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಮಾರ್ಚ್/ಏಪ್ರಿಲ್ 2026ರಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ (SSLC) ಪರೀಕ್ಷೆ-1ರ ಅಂತಿಮ ಪ್ರವೇಶ ಪತ್ರಗಳನ್ನು (Hall Tickets) ಅಧಿಕೃತವಾಗಿ ಬಿಡುಗಡೆ ಮಾಡಿದೆ.
ಶಾಲಾ ಮುಖ್ಯೋಪಾಧ್ಯಾಯರು ಮಂಡಳಿಯ ಶಾಲಾ ಲಾಗಿನ್ ಮೂಲಕ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಂಡು ವಿದ್ಯಾರ್ಥಿಗಳಿಗೆ ವಿತರಿಸಬೇಕೆಂದು ಸೂಚಿಸಲಾಗಿದೆ.CCEPF, CCEPR ಮತ್ತು CCERR ವಿದ್ಯಾರ್ಥಿಗಳು ತಮ್ಮದೇ ಆದ ವಿದ್ಯಾರ್ಥಿ ಲಾಗಿನ್ ಮೂಲಕವೂ ಪ್ರವೇಶ ಪತ್ರವನ್ನು ಪಡೆಯಬಹುದು. ಆದರೆ, ಶಾಲಾ ಮುಖ್ಯಸ್ಥರಿಂದ ಸಹಿ ಮತ್ತು ಮೊಹರು ಪಡೆಯುವುದು ಕಡ್ಡಾಯವಾಗಿದೆ.
ತಿದ್ದುಪಡಿಗಳು: ಪ್ರವೇಶ ಪತ್ರದಲ್ಲಿ ಭಾವಚಿತ್ರ ಅಥವಾ ಇತರ ಮಾಹಿತಿಯಲ್ಲಿ ವ್ಯತ್ಯಾಸವಿದ್ದಲ್ಲಿ, ಪರೀಕ್ಷೆಗಿಂತ ಮುಂಚಿತವಾಗಿಯೇ ಸರಿಪಡಿಸಿಕೊಳ್ಳಲು ಅವಕಾಶವಿದೆ. ಪರೀಕ್ಷೆಯ ನಂತರ ಯಾವುದೇ ಬದಲಾವಣೆಗೆ ಅವಕಾಶವಿರುವುದಿಲ್ಲ.
ವಿತರಣೆಯಲ್ಲಿ ವಿಳಂಬ: ಪ್ರವೇಶ ಪತ್ರ ವಿತರಿಸುವಲ್ಲಿ ಅನಗತ್ಯ ವಿಳಂಬ ಮಾಡುವ ಶಾಲಾ ಮುಖ್ಯಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮಂಡಳಿ ಎಚ್ಚರಿಸಿದೆ.
ತಾಂತ್ರಿಕ ನೆರವು: ಡೌನ್‌ಲೋಡ್ ಮಾಡುವಾಗ ಯಾವುದೇ ತಾಂತ್ರಿಕ ಸಮಸ್ಯೆ ಎದುರಾದಲ್ಲಿ ಮಂಡಳಿಯ ಸಹಾಯವಾಣಿ ಸಂಖ್ಯೆ 080-29720438 ಗೆ ಸಂಪರ್ಕಿಸಬಹುದು.
| ಕ್ರ.ಸಂ | ಜಿಲ್ಲೆಗಳು | ಸಂಪರ್ಕ ಸಂಖ್ಯೆ |
| 1 | ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ, ಮಧುಗಿರಿ | 9480021609 |
| 2 | ಬೆಂಗಳೂರು ಉತ್ತರ, ರಾಮನಗರ, ತುಮಕೂರು, ಶಿವಮೊಗ್ಗ | 9900190492 |
| 3 | ಚಾಮರಾಜನಗರ, ಮಂಡ್ಯ, ಮೈಸೂರು, ಉಡುಪಿ | 9620213336 |
| 4 | ದಕ್ಷಿಣ ಕನ್ನಡ, ಹಾಸನ, ಚಿಕ್ಕಮಗಳೂರು, ಕೊಡಗು | 6363822574 |
| 5 | ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ | 9482012392 |
| 6 | ಧಾರವಾಡ, ಶಿರಸಿ, ಉತ್ತರ ಕನ್ನಡ, ಹಾವೇರಿ | 9740289879 |
| 7 | ಬಳ್ಳಾರಿ, ವಿಜಯನಗರ, ಯಾದಗಿರಿ, ರಾಯಚೂರು | 9945025039 |
| 8 | ಕಲಬುರಗಿ, ಬೀದರ್, ಕೊಪ್ಪಳ | 9742164849 |
| 9 | ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಚಿತ್ರದುರ್ಗ, ಗದಗ | 9845314029 |



