ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು 2025ನೇ ಸಾಲಿನ ಗೌರವ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ ಹಾಗೂ 2024ನೇ ಸಾಲಿನ ವಿವಿಧ ಸಾಹಿತ್ಯ ಪ್ರಕಾರಗಳ ಪುಸ್ತಕ ಬಹುಮಾನಗಳನ್ನು ಪ್ರಕಟಿಸಿದೆ. ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್. ಮುಕುಂದರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಸದಸ್ಯರ ಸಭೆಯಲ್ಲಿ ಈ ಆಯ್ಕೆಯನ್ನು ಸರ್ವಾನುಮತದಿಂದ ಮಾಡಲಾಗಿದೆ.
1. 2025 ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು (5 ಮಂದಿ):
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಸುದೀರ್ಘ ಸೇವೆಯನ್ನು ಪರಿಗಣಿಸಿ ಈ ಕೆಳಗಿನ ಹಿರಿಯ ಸಾಹಿತ್ಯಗಳಿಗೆ ಗೌರವ ಪ್ರಶಸ್ತಿ ನೀಡಲಾಗಿದೆ. ಈ ಪ್ರಶಸ್ತಿಯು 50,000 ರೂ. ನಗದು, ಫಲಕ ಹಾಗೂ ಶಾಲನ್ನು ಒಳಗೊಂಡಿದೆ.
- ಪ್ರೊ. ಶಿವರಾಮಯ್ಯ – ಬೆಂಗಳೂರು
- ಶ್ರೀ ಚಂದ್ರಶೇಖರ ತಾಳ್ಯ – ಚಿತ್ರದುರ್ಗ
- ಡಾ. ಚಂದ್ರಕಾಂತ ಪೋಕಳೆ – ಬೆಳಗಾವಿ
- ಡಾ. ವಸುಂಧರಾ ಭೂಪತಿ – ಬಳ್ಳಾರಿ
- ಡಾ. ಎಸ್. ತುಕಾರಾಂ – ಮೈಸೂರು
2. 2025 ನೇ ಸಾಲಿನ ‘ಸಾಹಿತ್ಯಶ್ರೀ’ ಪ್ರಶಸ್ತಿ ಪುರಸ್ಕೃತರು (10 ಮಂದಿ):
50 ರಿಂದ 60ರ ವಯೋಮಾನದ ಸಾಹಿತಿಗಳಿಗೆ ನೀಡಲಾಗುವ ಈ ಪ್ರಶಸ್ತಿಯು 25,000 ರೂ. ನಗದು ಮತ್ತು ಗೌರವವನ್ನು ಒಳಗೊಂಡಿದೆ.
- ಡಾ. ನಿಷ್ಠಿ ರುದ್ರಪ್ಪ (ಬಳ್ಳಾರಿ), ಡಾ. ವೀರೇಶ ಬಡಿಗೇರ (ಬಾಗಲಕೋಟೆ), ಡಾ. ಸಿ.ಜಿ. ಲಕ್ಷ್ಮೀಪತಿ (ತುಮಕೂರು), ಶ್ರೀ ಕೆಂಪಾಡಿಗೇ ನಾರಾಯಣ (ಬೆಂಗಳೂರು), ಶ್ರೀಮತಿ ರೂಪ ಹಾಸನ (ಹಾಸನ), ಶ್ರೀ ಜಯರಾಮ್ ರಾಯಪುರ (ವಿಜಯವಾಡ), ಶ್ರೀಮತಿ ಕುಮುದಾ ಸುಶೀಲ್ (ದಾವಣಗೆರೆ), ಡಾ. ಈ. ನಾಗರಾಜು (ತುಮಕೂರು), ಬಿ.ಎಂ. ಬಷೀರ್ (ಮಂಗಳೂರು) ಹಾಗೂ ಡಾ. ಜ್ಯೋತಿ (ಬೆಂಗಳೂರು).
3. 2024ನೇ ಸಾಲಿನ ಪುಸ್ತಕ ಬಹುಮಾನ ಮತ್ತು ದತ್ತಿ ಪುರಸ್ಕೃತರು (ಪ್ರಮುಖರು):
2024ರಲ್ಲಿ ಪ್ರಕಟವಾದ ಕೃತಿಗಳಲ್ಲಿ 17 ಸಾಹಿತ್ಯ ಪ್ರಕಾರಗಳಿಗೆ ತಲಾ 25,000 ರೂ. ನಗದು ಬಹುಮಾನ ನೀಡಲಾಗಿದೆ. ಕೆಲವು ಪ್ರಮುಖ ವಿಜೇತರು
| ಸಾಹಿತ್ಯ ಪ್ರಕಾರ | ಕೃತಿಯ ಹೆಸರು | ಲೇಖಕರ ಹೆಸರು |
| ಕಾವ್ಯ | ಚಲಿಸುತ್ತಿವೆ ಚುಕ್ಕಿಗಳು | ಭಾರತಿ ದೇವಿ ಪಿ. |
| ಕಾದಂಬರಿ | ಇಮಾಮ್ ಸಾಹೇಬರ ಕುದುರೆ | ವೈ.ಎಸ್. ಹರಗಿ |
| ಸಣ್ಣಕಥೆ | ಸರ್ವೆ ನಂಬರ್-97 | ಅನಿಲ್ ಗುನ್ನಾಪುರ |
| ಜೀವನ ಚರಿತ್ರೆ | ಚಿಮಣಿ ಬೆಳಕಿನಿಂದ | ಎಂ.ಜಿ. ಹೆಗಡೆ |
| ಮಕ್ಕಳ ಸಾಹಿತ್ಯ | ಬಿಸಿ ಬಿಸಿ ಬತು | ರಾಜಶೇಖರ ಕುಕ್ಕಂದಾ |
| ಅನುವಾದ | ಜಾತಿ ಮತ್ತು ಲಿಂಗತ್ವ | ಡು. ಸರಸ್ವತಿ |
ಸಿಎಂ ಸಿದ್ದರಾಮಯ್ಯ ಅಭಿನಂದನೆ
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸಿದ ಹಿರಿಯ-ಕಿರಿಯ ಸಾಹಿತಿಗಳನ್ನು ಗುರುತಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ ಗೌರವ ಪ್ರಶಸ್ತಿ, ಸಾಹಿತ್ಯಶ್ರೀ ಪ್ರಶಸ್ತಿ ಹಾಗೂ ಅತ್ಯುತ್ತಮ ಪುಸ್ತಕ ಬಹುಮಾನ ಪಡೆದ ಸಾಹಿತಿಗಳೆಲ್ಲರಿಗೂ ಹಾರ್ದಿಕ ಅಭಿನಂದನೆಗಳು. ಬರಹಗಳ ಮೂಲಕ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸುತ್ತಿರುವ ಜೊತೆಗೆ ಕನ್ನಡಿಗರ ವಿವೇಕ ಸದಾ ಎಚ್ಚರದ ಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುತ್ತಿರುವ ತಮ್ಮೆಲ್ಲರ ಬದುಕು ಹಾಗೂ ಸಾಧನೆ ಹೊಸ ತಲೆಮಾರಿಗೆ ಸ್ಪೂರ್ತಿಯಾಗಲಿ. ಈ ಪ್ರಶಸ್ತಿಗಳು ಕನ್ನಡದಲ್ಲಿ ಇನ್ನಷ್ಟು ಉತ್ತಮ ಸಾಹಿತ್ಯದ ಸೃಷ್ಟಿಗೆ ಪ್ರೇರಣೆಯಾಗಲಿ ಎಂದು ಹಾರೈಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

